ಮಾಜಿ ಸಿಎಂ ಕುಮಾರಸ್ವಾಮಿ ಈಗ ಕೇಂದ್ರ ಸಚಿವ. ಕೇಂದ್ರ ಸಚಿವರಾಗಿರುವುದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಋಣಕ್ಕೆ. ವಿಶೇಷ ಎಂದರೆ.. ಕುಮಾರಸ್ವಾಮಿಯ ಎರಡು ನಿರ್ಧಾರ, ಇತ್ತ ರಾಜ್ಯ ಬಿಜೆಪಿಗೂ ಶಾಕ್ ಕೊಟ್ಟಿದೆ. ಅತ್ತ ರಾಜ್ಯ ಸರ್ಕಾರಕ್ಕೂ ಶಾಕ್ ಕೊಟ್ಟಿದೆ. ಆದರೆ.. ಉಗುಳಲಾಗದ.. ನುಂಗಲೂ ಆಗದ ಪರಿಸ್ಥಿತಿ ಅವರದ್ದು.
ರಾಜ್ಯ ಬಿಜೆಪಿಯ ನಾಯಕರೊಬ್ಬರನ್ನು ಜೆಡಿಎಸ್, ತನ್ನ ಪಕ್ಷಕ್ಕೆ ಕರೆಸಿಕೊಂಡಿದೆ. ಹೆಚ್ ಡಿ ಕೋಟೆಯ ಪರಾಜಿತ ಅಭ್ಯರ್ಥಿ ಕೃಷ್ಣ ನಾಯಕ್ ಮರಳಿ ಜೆಡಿಎಸ್ ಸೇರಿದ್ದಾರೆ. ಈ ಕೃಷ್ಣ ನಾಯಕ್, ಈ ಹಿಂದೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿದ್ದವರು. ದೇವೇಗೌಡರು ಹಾಗೂ ಹೆಚ್ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.
ವಿಶೇಷ ಅಂದ್ರೆ ಬಿಜೆಪಿ, ಮಿತ್ರ ಪಕ್ಷ. ಮಿತ್ರ ಪಕ್ಷದ ನಾಯಕರೊಬ್ಬರನ್ನು ಹೈಜಾಕ್ ಮಾಡಿರುವುದು ಬಿಜೆಪಿಗೆ ಶಾಕ್ ಆಗಿರುವುದಂತೂ ನಿಜ. ಜೆಡಿಎಸ್ ಅಥವಾ ಬಿಜೆಪಿಗೆ, ನಾಯಕರು ಕಾಂಗ್ರೆಸ್ಸಿಂದಲೋ.. ಇನ್ಯಾವುದೋ ಪಕ್ಷದಿಂದಲೋ ಬಂದರೆ ಓಕೆ.. ಮಿತ್ರ ಪಕ್ಷದವರಿಂದಲೇ ನಾಯಕರನ್ನು ಎತ್ತುತ್ತಾ ಹೋದರೆ.. ಮಿತ್ರ ಪಕ್ಷ ಎಂಬುದು ಇರುವುದಾದರೂ ಏಕೆ.. ಎಂಬ ಪ್ರಶ್ನೆ ಕಾರ್ಯಕರ್ತರದ್ದು. ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಈ ವಿಷಯ ಗೊತ್ತಿದೆಯೋ.. ಇಲ್ಲವೋ.. ಪಕ್ಷದ ಸೀನಿಯರ್ ನಾಯಕರಿಗೆ ಗೊತ್ತಿದೆಯೋ.. ಇಲ್ಲವೋ.. ಯಾರಿಗೂ ಗೊತ್ತಿಲ್ಲ.
ಇನ್ನೊಂದು ಪ್ರಮುಖ ವಿಷಯ ಎಂದರೆ.. ಮಾವು ಬೆಳೆಗಾರರ ಸಮಸ್ಯೆ. ರಾಜ್ಯದಲ್ಲಿ ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಧಾವಿಸಿದ್ದಾರೆ ಆಂಧ್ರಪ್ರದೇಶ ಸರ್ಕಾರ, ಕರ್ನಾಟಕದಿಂದ ಬರುವ ಮಾವಿನ ಹಣ್ಣುಗಳನ್ನು ಬ್ಯಾನ್ ಮಾಡಿದೆ. ಇದರಿಂದ ರಾಜ್ಯದ ಬೆಳೆಗಾರರಿಗೆ ನಷ್ಟವಾಗಿದೆ. ನಿಷೇಧ ಹಿಂತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯ, ನಾಯ್ಡು ಅವರಿಗ ಪತ್ರ ಬರೆದಿದ್ದರು. ಚಂದ್ರಬಾಬು ನಾಯ್ಡು, ಬಿಜೆಪಿ ಮಿತ್ರ ಪಕ್ಷ ಎನ್ನವುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತು. ಬೆಳೆಗಾರರು ಆಕ್ರೋಶಗೊಂಡರೆ ಅವರು ಮೊದಲಿಗೆ ಬಿಜೆಪಿ ವಿರುದ್ಧವೇ ತಿರುಗುತ್ತಾರೆ ಎಂಬ ನಿರೀಕ್ಷೆಯೂ ಆ ಪತ್ರದಲ್ಲಿತ್ತು. ಆದರೆ..ಅದಕ್ಕೆ ಶಾಕ್ ಕೊಟ್ಟಿರುವುದು ಕುಮಾರಸ್ವಾಮಿ.


ವಿಚಿತ್ರ ಎಂದರೆ ಕುಮಾರಸ್ವಾಮಿಯವರೇ ಟ್ವೀಟ್ ಮಾಡುವವರೆಗೆ ಇದು ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕರಿಗೂ ಗೊತ್ತಿರಲಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ಪ್ರಹ್ಲಾದ್ ಜೋಷಿ.. ಅವರಿಗೂ ಗೊತ್ತಿರಲಿಲ್ಲ. ಅತ್ತ ಏಕಕಾಲಕ್ಕೆ ಮಿತ್ರ ಪಕ್ಷ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರಿಗೆ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದಾರೆ ಕುಮಾರಸ್ವಾಮಿ.



