ಕ್ಷೇತ್ರಪತಿ (Kshethrapathi). ಇದು ನಮ್ಮ ಮಣ್ಣಿನ ಮಕ್ಕಳ ಕಥೆ. ಉತ್ತರ ಕರ್ನಾಟಕದ ಜವಾರಿ ಸ್ಟೋರಿ. ನವೀನ್ ಶಂಕರ್ (Naveen Shankar) ಹಾಗೂ ಅರ್ಚನಾ ಜೋಯಿಸ್ (Archana Jois) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶ್ರೀಕಾಂತ್ ಕಟಗಿ (Srikanth Katagi) ಚೊಚ್ಚಲ ನಿರ್ದೇಶನದ ಚಿತ್ರ ಕ್ಷೇತ್ರಪತಿ. ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ರೈತರ ಕಷ್ಟದ ಕುರಿತು ಬೆಳಕು ಚೆಲ್ಲುವ, ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಸಿನಿಮಾ ಎನ್ನುವುದೇ ಸಿನಿಮಾದ ಪ್ಲಸ್.
ಸಿನಿಮಾ ಡೈರೆಕ್ಟರ್ ಶ್ರೀಕಾಂತ ಕಟಗಿಯವರಿಗೆ ಸಿಕ್ಕಿರುವ ಅತಿ ದೊಡ್ಡ ಬಹುಮಾನ ಎಂದರೆ, ಚಿತ್ರವನ್ನು ನೋಡಿದವರು ಬಂಗಾರದ ಮನುಷ್ಯ (bangarada manushya) ಚಿತ್ರಕ್ಕೆ ಹೋಲಿಸಿದ್ದು. . ಕೆಲವರು ನಮ್ಮ ಚಿತ್ರವನ್ನು ‘ಬಂಗಾರದ ಮನುಷ್ಯ’ ಸಿನಿಮಾಗೆ ಹೋಲಿಸಿದರು. ಅಷ್ಟು ದೊಡ್ಡ ಸಿನಿಮಾಗೆ ಇದನ್ನು ಹೋಲಿಸಿದ್ದು ಸ್ವಲ್ಪ ಮುಜುಗರದ ಜತೆಗೆ ಹೆಮ್ಮೆಯೂ ಆಯಿತು. ಇನ್ನೊಂದಿಷ್ಟು ಸ್ವಿಗ್ಗಿ (Siggy) , ಜೊಮಾಟೊ (Zomato) ಡೆಲಿವರಿ ಹುಡುಗರು (Delivery boys) ಬಂದು ಭಾವುಕರಾಗಿ ಕೈ ಹಿಡಿದು ಕಣ್ಣೀರಿಟ್ಟರು. ಅದರಲ್ಲೂ ಒಬ್ಬರ ಮನೆಯಲ್ಲಿ ಇದೇ ರೀತಿಯ ಸನ್ನಿವೇಶ ಎದುರಾಗಿತ್ತಂತೆ. ಆತನ ತಂದೆ ಸಾಲದ ಹೊರೆಯನ್ನು ತಾಳಲಾರದೇ ಆತ್ಮಹತ್ಯೆ (Farmers suicide) ಮಾಡಿಕೊಂಡಿದ್ದರಂತೆ. ಹೀಗಾಗಿ ಅವನು ಕೃಷಿಯನ್ನು, ಓದನ್ನು ಎಲ್ಲ ಬಿಟ್ಟು ಬೆಂಗಳೂರಿಗೆ ಬಂದು ಸ್ವಿಗ್ಗಿ ಡೆಲಿವರಿ ಕೆಲಸ ಮಾಡುತ್ತಿದ್ದಾನಂತೆ. ಜನರು ಈ ಚಿತ್ರಕ್ಕೆ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಿದ್ದಾರೆ. ಇದನ್ನು ಕಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ ಎನ್ನುತ್ತಾರೆ ಶ್ರೀಕಾಂತ ಕಟಗಿ.
ಚಿತ್ರವನ್ನು ನೋಡಿದ ಪ್ರೇಕ್ಷಕರೇ ಚಿತ್ರದ ರಾಯಭಾರಿಯಾಗುತ್ತಿರುವುದಕ್ಕೆ ಕಾರಣವೇ ಇದು. ಏಕೆಂದರೆ ನಗರಗಳಿಗೆ ಬಂದು ಬದುಕು ಕಟ್ಟಿಕೊಂಡಿರುವ ಪ್ರತಿಯೊಬ್ಬರ ಮನೆಯಲ್ಲೂ ಕ್ಷೇತ್ರಪತಿ ಚಿತ್ರದಂತಹುದೇ ಕಥೆಗಳಿವೆ.
ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕುಸುಮಾ ಆಯರಹಳ್ಳಿ (Kusuma ayarahalli) ಮೊದಲಾದವರು ಚಿತ್ರದ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಕಡೇಲಿ ಸ್ವಲ್ಪ ಲ್ಯಾಗ್ ಆಗ್ಯಾದ ಖರೇ. ಸ್ವಲ್ಪ್ ಸಹಿಸ್ಕೊಳ್ರೀ. ನಮ್ ಪ್ರಾಬ್ಲಂ ಸಹಿಸಲಾರದಷ್ಟು ಲ್ಯಾಗ್ ಅದಾವ. ಹೇಳಾಕ ಅಷ್ಟ್ ಟೈಮಾರ ಬೇಕಲ್ರೀ?
ಕ್ಲೈಮ್ಯಾಕ್ಸ್ ಪಾಸಿಟಿವ್. ನಿಜದ ಬದುಕಿನ್ನೂ ನೆಗೆಟಿವ್. ಸಿನೆಮಾ ಅಂದರೆ ಆಶಯ ತಾನೇ?
ಇದಾಗಬೇಕ್ರೀ ನಿಜವಾದ ಬ್ಲಾಕ್ ಬಸ್ಟರ್. ಮಾಡ್ರಲಾ.
ದಯವಿಟ್ಟು, ದಯವಿಟ್ಟು ಇಂತಾ ಪಿಚ್ಚರ್ ಸೋಲಿಸಬ್ಯಾಡ್ರೀ. ಹೋಗ್ ನೋಡ್ರೀ.
ಇದು ಕುಸುಮಾ ಆಯರಹಳ್ಳಿಯವರ (Kusuma ayarahalli) ಬರಹದ ಕೊನೆ ಸಾಲು.. ಉತ್ತರ ಕರ್ನಾಟಕದ ರೈತರ, ಜನರ ಬದುಕಿನ ಬವಣೆ ಕೊನೆಗೂ ಸಿನಿಮಾ ಆಗಿದೆ. ಗೆದ್ದಿದೆ.



