ಕೋಲ್ಕತಾ ನಗರದ ಆರ್.ಜಿ. ಕರ್ ಸರಕಾರಿ ವೈದ್ಯಕೀಯ ಹಾಗೂ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಆಗಸ್ಟ್ 17ರಂದು ಶನಿವಾರದಂದು ದೇಶಾದ್ಯಂತ ವೈದ್ಯರು ಸೇವೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಂದು ಬೆಳಗ್ಗೆ 6 ಗಂಟೆಯಿಂದ ಮರುದಿನ ಅಂದರೆ ಭಾನುವಾರ ಬೆಳಗ್ಗೆ 6 ಗಂಟೆಯವರಿಗೆ ಮತ್ತು ತುರ್ತು ಚಿಕಿತ್ಸೆ ಹೊರತು ಪಡಿಸಿ ಮತ್ಯಾವುದೇ ರೀತಿಯ ಚಿಕಿತ್ಸೆಗಳು ಲಭ್ಯ ಇರುವುದಿಲ್ಲ. ಭಾರತೀಯ ವೈದ್ಯಕೀಯ ಸಂಘ ಅಧಿಕೃತವಾಗಿಯೇ ಈ ನಿರ್ದಾರ ಪ್ರಕಟಿಸಿದ್ದು, ದೇಶಾದ್ಯಂತ ಯಾವುದೇ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸಿಗುವುದಿಲ್ಲ.
ಅಂದರೆ ಹೊರಗಿನ ರೋಗಿಗಳ ಪರೀಕ್ಷೆ ಸ್ಥಗಿತವಾಗಿರುತ್ತದೆ. ಆಕ್ಸಿಡೆಂಟ್ ಸೇರಿದಂತೆ ತುರ್ತು ಪ್ರಕರಣ/ಕೇಸುಗಳಿಗೆ ಮಾತ್ರ ಟ್ರೀಟ್ಮೆಂಟ್ ಇರುತ್ತದೆ. ಆಂಬುಲೆನ್ಸ್ ಮತ್ತು ಮೆಡಿಕಲ್ ಸ್ಟೋರ್ʻಗಳು ಎಂದಿನಂತೆ ಕೆಲಸ ಮಾಡುತ್ತವೆ. ಆದರೆ.. ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಮ್, ಕ್ಲಿನಿಕ್ ಸೇರಿದಂತೆ ಎಲ್ಲಿಯೂ ಕೂಡಾ ಒಪಿಡಿ ಸೇವೆ ಲಭ್ಯ ಇರುವುದಿಲ್ಲ.
ವೈದ್ಯರ ಈ ರೀತಿಯ ಆಕ್ರೋಶಕ್ಕೆ ಕಾರಣ ಏನು..?
ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಹಾಗೂ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದು ಕೊಲೆ ಆಗಿತ್ತು. ಆದರೆ, ಇದು ಕೊಲೆಯೂ ಅಲ್ಲ, ರೇಪ್ ಕೂಡಾ ಆಗಿಲ್ಲ ಎಂದಿದ್ದ ಪೊಲೀಸರು, ಅದೊಂದು ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸಲು ಹೊರಟಿದ್ದರು. ಘಟನೆ ನಡೆದದ್ದು ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್ʻನಲ್ಲಿ. ಆದರೆ ಅದಾದ ಮರುದಿನ ಅತ್ಯಾಚಾರ ಮತ್ತು ಕೊಲೆ ನಡೆದ ಜಾಗವನ್ನು ರಿನೋವೇಷನ್ ಹೆಸರಲ್ಲಿ ಕೆಡವಲಾಗಿತ್ತು. ಯಾವುದೇ ಸಾಕ್ಷಿಗಳು ಸಿಗದಂತೆ ಮಾಡಲಾಗಿತ್ತು. ಅಲ್ಲದೆ ಘಟನೆಯ ನೈತಿಕ ಹೊಣೆ ಹೊತ್ತು ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ರಾಜೀನಾಮೆ ನೀಡಿದ್ದರು. ಆದರೆ, ರಾಜೀನಾಮೆ ನೀಡಿದ್ದ ಆ ಪ್ರಿನ್ಸಿಪಾಲ್ʻಗೆ ಕೆಲವೇ ಗಂಟೆಗಳಲ್ಲಿ ಬೇರೆ ಮೆಡಿಕಲ್ ಕಾಲೇಜಿಗೆ ಪೋಸ್ಟಿಂಗ್ ಆಗಿತ್ತು. ಅದಾದ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ೫೦ಕ್ಕೂ ಹೆಚ್ಚು ಗೂಂಡಾಗಳು ಶಸ್ತ್ರ ಸಜ್ಜಿತರಾಗಿ ಅಟ್ಯಾಕ್ ಮಾಡಿದ್ದರು. ಇದೆಲ್ಲದರ ನಡುವೆ ಪ.ಬಂಗಾಳ ಸರ್ಕಾರದ ಕ್ರಮಗಳ ಬಗ್ಗೆ ಹೈಕೋರ್ಟ್ ಕೂಡಾ ಅಸಮಾಧಾನ ವ್ಯಕ್ತಪಡಿಸಿತ್ತು. ದೇಶಾದ್ಯಂತ ವೈದ್ಯರು ರೊಚ್ಚಿಗೆದ್ದು ಬೀದಿಗಿಳಿದಿರುವುದಕ್ಕೆ ಇದೇ ಕಾರಣ.
ಇನ್ನು ಅರೆಸ್ಟ್ ಆಗಿರುವ ವ್ಯಕ್ತಿ ಆಸ್ಪತ್ರೆಯ ಸಿಬ್ಬಂದಿ ಅಲ್ಲ. ಆತನೊಬ್ಬನೇ ಆರೋಪಿ ಎಂದು ಹೇಳಲಾಗುತ್ತಿದೆ. ಆತನ ಕ್ರೌರ್ಯದ ಚರಿತ್ರೆ ಹೇಳಲಾಗುತತಿದೆ. ಆದರೆ.. ಅದನ್ನು ನಂಬುವುದಕ್ಕೆ ವೈದ್ಯರು ತಯಾರಿಲ್ಲ. ಏಕೆಂದರೆ.. ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಾಗ ಮೃತಳ ದೇಹದ ಮೇಲಿದ್ದ ಗಾಯದ ಗುರುತುಗಳು, ಗಾಯದ ಸ್ವರೂಪಗಳು, ಗುಪ್ತಾಂಗದಲ್ಲಿ ಕಂಡು ಬಂದಿರುವ 151 ಮಿ.ಗ್ರಾಂ ವೀರ್ಯಾಣು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಕ್ಕೆ ಸಾಕ್ಷಿ ನುಡಿದಿದ್ದವು. ಮೆಡಿಕಲ್ ಸೈನ್ಸ್ ಪ್ರಕಾರ ಒಬ್ಬ ವ್ಯಕ್ತಿಯ ವೀರ್ಯಾಣು 15-20 ಮಿಲಿ ಗ್ರಾಂ ಇದ್ದರೆ ಹೆಚ್ಚು. ಆದರೆ.. 150 ಮಿಲಿ ಗ್ರಾಂ ಪತ್ತೆಯಾಗಿದೆ ಎಂದರೆ.. ಇದು ಸಾಮೂಹಿಕ ಅತ್ಯಾಚಾರವೇ ಆಗಿರಬೇಕು. ಸರ್ಕಾರ ಹಾಗೂ ಪೊಲೀಸ್ ಅಪರಾಧಿಗಳನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದವು. ಇದೆಲ್ಲದರ ಪರಿಣಾಮ.. ಈಗ ಇಡೀ ದೇಶದಲ್ಲಿ ವೈದ್ಯರು ಬೀದಿಗಿಳಿಯುವಂತಾಗಿದೆ.
ನಾಳೆ ಎಮರ್ಜೆನ್ಸಿ ಇಲ್ಲದೇ ಇದ್ದರೆ, ಆಸ್ಪತ್ರೆಗೆ ಹೋಗಬೇಡಿ.



