ವಿರಾಟ್ ಕೊಹ್ಲಿ (Virat kohli), ರೋಹಿತ್ ಶರ್ಮಾ (Rohith sharma), ಶ್ರೇಯಸ್ ಅಯ್ಯರ್ (Shreyas ayyar), ಸೂರ್ಯ ಕುಮಾರ್ ಯಾದವ್ (surya kuar yadav), ಕುಲದೀಪ್ ಯಾದವ್ (Kuladeep yadav).. ಇವೆಲ್ಲ ಕ್ರಿಕೆಟರ್ಸ್ ಹೆಸರುಗಳು. ಆದರೆ ಇವೆಲ್ಲವೂ ಜಾತಿ ಸೂಚಕವೂ ಹೌದು. ಹೀಗಾಗಿ ಇವರೆಲ್ಲರ ಜೆರ್ಸಿಗಳಲ್ಲಿ ಜಾತಿ ಸೂಚಕ ಪದಗಳನ್ನು ತೆಗೆದುಹಾಕಬೇಕು ಎಂಬ ಕೂಗು ಕೇಳಿ ಬಂದಿದೆ. ಹಾಗಂತ ಧ್ವನಿ ಎತ್ತಿರುವುದು ಆ ದಿನಗಳು ಖ್ಯಾತಿಯ ಚೇತನ್ ಅಲ್ಲ, ಕೇಂದ್ರದಲ್ಲಿ ಸಚಿವರೂ ಆಗಿದ್ದ ಪಿ.ಚಿದಂಬರಂ (P chidambaram) ಪುತ್ರ ಕಾರ್ತಿ ಚಿದಂಬರಂ (karthi chidambaram).
ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಟೀಮ್ ಇಂಡಿಯಾ ಕ್ರಿಕೆಟಿಗರನ್ನು ಜಾತಿ ಕಂಡಿದ್ದಾರೆ. ಟೀಮ್ ಇಂಡಿಯಾ ಪ್ಲೇಯರ್‌ಗಳು ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿದ್ದಾಗ ಅವರು ತಮ್ಮ ಜಾತಿಯ ಹೆಸರುಗಳನ್ನು ಹೊಂದಿರಬಾರದು. ಈ ಕುರಿತಾಗಿ ಸ್ವತಃ ಬಿಸಿಸಿಐ ತಮ್ಮ ಅಟಗಾರರಿಗೆ ಸೂಚನೆ ನೀಡಬೇಕು. ಅವರು ತಮ್ಮ ಜಾತಿಯ ಹೆಸರು ಹಾಕಿಕೊಳ್ಳದಂತೆ ಒತ್ತಾಯಸಬೇಕು ಎಂದು ಮನವಿ ಮಾಡಿದ್ದಾರೆ. ಅಫ್ʻಕೋರ್ಸ್.. ಅವರು ತಮ್ಮ ಟ್ವೀಟಿನಲ್ಲಿ ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ.
ಭಾರತ ಕ್ರಿಕೆಟ್ ತಂಡದಲ್ಲಿ ಜಾತಿಯ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಟಗಾರರ ಜಾತಿ/ಉಪಜಾತಿಯನ್ನು ಹುಡುಕಿ ಸಂಶೋಧನೆ ಮಾಡಿ ಹೊರಗಿಡುವ ಪ್ರಯತ್ನವೂ ನಡೆದಿತ್ತು. ಈ ಬಾರಿ ಈ ಜಾತಿಯ ಹುಡುಕಾಟಕ್ಕೆ ದೊಡ್ಡ ನಾಯಕರು ಸೇರಿದ್ಧಾರೆ ಅಷ್ಟೆ, ಕ್ರಿಕೆಟ್‌ನಲ್ಲಿಯೂ ಜಾತಿ ಸಂಬಂಧಿತ ಚರ್ಚೆಗಳು ಕಾಲಕಾಲಕ್ಕೆ ಉದ್ಭವಿಸುತ್ತವೆ. ಈ ಹಿಂದೆ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಇರಬೇಕು ಎನ್ನುವ ವಾದಗಳು ಬಂದಿದ್ದವು. ಈಗ ಇಡೀ ದೇಶದಲ್ಲಿ ಜಾತಿ ಗಣತಿ ಆಗಬೇಕು ಎಂದು ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸಂಸದರೇ, ಟೀಮ್ ಇಂಡಿಯಾ ಆಟಗಾರರು ತಮ್ಮ ಜೆರ್ಸಿಯಲ್ಲಿ ಜಾತಿ ಹೆಸರನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ಕ್ರಿಕೆಟ್ ಅಭಿಮಾನಿಗಳು ಮಾತ್ರ ಕೆಂಡಾಮಂಡಲವಾಗಿದ್ಧಾರೆ. ಹಾಗಾದರೆ ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕಾ, ಹೆಸರಿನಲ್ಲೂ ಜಾತಿ ಹುಡುಕುವ ಕ್ರಿಮಿ ನೀನು ಎಂದೆಲ್ಲ ಕಿಡಿ ಕಾರಿದ್ಧಾರೆ. ಇನ್ನೂ ಕೆಲವರು ಹಾಗಾದರೆ ಎಲ್ಲ ಆಟಗಾರರನ್ನೂ ೧.. ೨..೩.. ೪.. ಎಂದು ನಂಬರ್ ಮೂಲಕ ಗುರುತಿಸಿ, ಸಮಸ್ಯೆ ಇರುವುದಿಲ್ಲ ಎಂದು ಲೇವಡಿ ಮಾಡಿದ್ದಾರ. ಆಟಗಾರರೇನೂ ಮಹಮ್ಮದ್, ಖಾನ್ ಹೆಸರಿಟ್ಟುಕೊಂಡರೆ ಓಕೇನಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆಲ್ಲ ಉತ್ತರ ಕೊಟ್ಟಿರುವ ಕಾರ್ತಿ, ನಾನು ಒಳ್ಳೆಯ ಉದ್ದೇಶದಿಂದ ಹೇಳಿದ್ದೇನೆ. ವಿವಾದ ಮಾಡುವ ಉದ್ದೇಶ ಇಲ್ಲ ಎಂದು ಜಾರಿಕೊಂಡಿದ್ದಾರೆ.
ಅಲ್ಲಿಗೆ ವಿರಾಟ್ ಕೊಹ್ಲಿ ಹೆಸರಿನ ಜರ್ಸಿಯಲ್ಲಿ ವಿರಾಟ್ ಮಾತ್ರವೇ ಇರಲಿ, ರೋಹಿತ್ ಶರ್ಮಾ ಹೆಸರಿನ ಶರ್ಮಾ ಬೇಡ, ಶ್ರೇಯಸ್ ಅಯ್ಯರ್ ಹೆಸರಿನಲ್ಲಿ ಅಯ್ಯರ್ ಬೇಡವೇ ಬೇಡ, ಸೂರ್ಯ ಕುಮಾರ್ ಯಾದವ್, ಕುಲದೀಪ್ ಯಾದವ್ ಹೆಸರಲ್ಲಿ ಯಾದವ್ ಎಂದು ಇರುವುದು ಬೇಡ ಎನ್ನುವುದು ಇವರ ವಾದ. ನೀವು ಯಾವ ಜಾತಿ ಎಂಬ ಪ್ರಶ್ನೆಗೆ ನಾನು ನಾಸ್ತಿಕ, ಧರ್ಮ ಇಲ್ಲ ಎಂಬ ಉತ್ತರ ಕೊಟ್ಟಿದ್ದಾರೆ ಕಾರ್ತಿ ಚಿದಂಬರಂ.
ಈ ನಾಸ್ತಿಕರು, ಯಾವ ಧರ್ಮಕ್ಕೂ ಸೇರದವರು ಎನ್ನುವವರ ಹಣೆಬರಹವೇ ಇದು. ಅವರು ಯಾವುದನ್ನೂ ನಂಬುವುದಿಲ್ಲ, ಯಾರನ್ನೂ ನಂಬುವುದಿಲ್ಲ. ಪ್ರತಿಯೊಂದರಲ್ಲೂ ಕೊಂಕು ಹುಡುಕುವುದೇ ಅವರ ಅಭ್ಯಾಸ ಮತ್ತು ಚಟ ಎಂದು ಕಿಡಿ ಕಾರಿದ್ದಾರೆ ಕ್ರಿಕೆಟ್ ಫ್ಯಾನ್ಸ್.
Congress leader and Lok Sabha MP Karti P Chidambaram made an appeal to the Board of Control for Cricket in India (BCCI) to eliminate caste suffixes from the names of Indian cricketers in official rosters. Karti Chidambaram emphasized that his appeal was well-intentioned, aiming to discourage the use of caste names in identifying players. He clarified that there is no need to associate players with their castes. This appeal sparked a debate, with Karti Chidambaram welcoming the discussions surrounding this issue, which has garnered attention in the cricketing world.



