ಪ್ರತಿ ರಾಶಿಯವರಿಗೂ ಒಂದು ಕೆಟ್ಟ ಗುಣ, ಒಳ್ಳೆಯ ಗುಣ ಇರುತ್ತದೆ. ರಾಶಿ ಪ್ರಕಾರ ರಾಶಿ ನಕ್ಷತ್ರದ ಕಾರಣಗಳಿಂದಲೇ ಕೆಲವೊಂದು ಗುಣಗಳು ಜೊತೆಯಲ್ಲೇ ಬರುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೆ ಸೇರಿದ ಜನರು ಕೆಲವು ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳನ್ನು ಹೊಂದಿರುತ್ತಾರೆ. ನಿಮ್ಮ ರಾಶಿಗನುಗುಣವಾಗಿ ಎಲ್ಲಾ 12 ರಾಶಿಗಳಿಗೆ ಸೇರಿದ ಜನರ ಕೆಟ್ಟ ಸ್ವಭಾವಗಳು ಯಾವುವು ಎಂದು ಗೊತ್ತಾದರೆ, 100% ತಿದ್ದಿಕೊಳ್ಳಲು ಸಾಧ್ಯವಾಗದೇ ಹೋಗಬಹುದು, ಆದರೆ ಎಚ್ಚರಿಕೆಯಿಂದ ನಡೆದುಕೊಳ್ಳುವುದಕ್ಕೆ ಅವಕಾಶ ಇದೆ.
ಮೇಷ ರಾಶಿ :
ಸಡನ್ ಕೋಪ. ಪ್ರತಿ ಮಾತಿಗೂ ವಾದ ಪ್ರತಿವಾದ. ಜಗಳಗಂಟರು ಎನ್ನಬಹುದು. ಯಾವುದೇ ಯೋಚನೆ ಮಾಡದೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಜೊತೆಗೆ ಪ್ರತಿಯೊಂದು ಮಾತಿಗೂ ವಾದ ವಿವಾದವನ್ನು ಮಾಡುವ ಕೆಟ್ಟ ಗುಣವನ್ನು ಹೊಂದಿರುತ್ತಾರೆ. ಆಮೇಲೆ ಅರ್ಥವಾದಾಗ ಪಶ್ಚಾತ್ತಾಪ ಪಡ್ತಾರೆ.
ವೃಷಭ ರಾಶಿ :
ಯಾವುದೇ ವ್ಯಕ್ತಿಯ ಸ್ವಭಾವ ಮತ್ತು ಬದಲಾವಣೆಗಳನ್ನು ಬಹಳ ಬೇಗನೆ ಸ್ವೀಕರಿಸುವುದಿಲ್ಲ. ಜೊತೆಗೆ ಒಂದೇ ಮಾತನ್ನು ಹಲವು ಬಾರಿ ಮಾತನಾಡುವ ಕೆಟ್ಟ ಚಟ ಇರುತ್ತದೆ. ಇದರ ಪರಿಣಾಮವಾಗಿ ನೀವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.
ಮಿಥುನ ರಾಶಿ :
ಒಂದೇ ಸಮಯದಲ್ಲಿ ಬಹಳಷ್ಟು ವಿಚಾರಗಳನ್ನು ಶುರು ಮಾಡಲು ಪ್ರಯತ್ನಿಸುವ ಕೆಟ್ಟ ಅಂಶವಿರುತ್ತದೆ. ಯಾವುದನ್ನೂ ಕಂಪ್ಲೀಟ್ ಮಾಡಲ್ಲ. ಜಾಸ್ತಿ ಮಾತನಾಡ್ತಾರೆ. ಸಂತೋಷವಾಗಿ ಇರಲ್ಲ.
ಕಟಕ ರಾಶಿ :
ಸಾಕಷ್ಟು ಭಾವುಕರಾಗಿರುತ್ತಾರೆ ಮತ್ತು ಹಳೆಯ ವಿಚಾರಗಳನ್ನು ಸುಲಭವಾಗಿ ಬಿಡುವುದಿಲ್ಲ. ರಾಶಿಯ ಹೆಸರಿಗೆ ತಕ್ಕಂತೆ ಹಳೆಯದನ್ನೆಲ್ಲ ನೆನಪಿಸಿಕೊಂಡು ಕುಟುಕುತ್ತಿರುತ್ತಾರೆ. ಕುಟುಕುತ್ತಲೇ ಇರುತ್ತಾರೆ. ಬದುಕುತ್ತಾರೆ.
ಸಿಂಹ ರಾಶಿ :
ಬೇರೆಯವರ ಪ್ರಶಂಸೆ ಮತ್ತು ಹೊಗಳಿಕೆಯನ್ನು ಹೆಚ್ಚಾಗಿ ಬಯಸುತ್ತಾರೆ. ಪ್ರತಿಯೊಬ್ಬರೂ ತಮ್ಮನ್ನೇ ಕೇಳಬೇಕು, ಅಪೇಕ್ಷಿಸಬೇಕು ಎಂದು ಬಯಸುತ್ತಾರೆ. ಆದರೆ ಬೇರೆಯವರ ಕೆಲಸ ಮರೆಯುತ್ತಾರೆ. ಅಹಂ ಎಂದರೆ ನಾನೇ ಎನ್ನುವ ಸ್ವಭಾವ ರಾಶಿಯಲ್ಲೇ ಇದೆ.
ಕನ್ಯಾ ರಾಶಿ :
ಅಗತ್ಯಕ್ಕಿಂತ ಹೆಚ್ಚು ಯೋಚಿಸುತ್ತಾರೆ. ಇವರು ತಮ್ಮ ಮತ್ತು ಬೇರೆಯವರ ಬಗ್ಗೆ ಥಿಂಕ್ ಮಾಡ್ತಾನೇ ಇರ್ತಾರೆ. ಎಲ್ಲಾ ವಿಷಯಗಳಲ್ಲೂ ಪರಿಪೂರ್ಣತೆಯನ್ನು ಬಯಸುತ್ತಾರೆ.
ತುಲಾ ರಾಶಿ :
ಬಹಳ ಬೇಗನೆ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸದಾ ಬೇರೆಯವರನ್ನು ಖುಷಿ ಪಡಿಸಲು ಪ್ರಯತ್ನ ಪಡ್ತಾನೇ ಇರ್ತಾರೆ.
ವೃಶ್ಚಿಕ ರಾಶಿ :
ಬೇರೆಯವರೆ ಬಗ್ಗೆ ಸದಾ ಅನುಮಾನ. ತನ್ನ ಮೇಲೂ ತನಗೆ ಅನುಮಾನ. ಅನಗತ್ಯ ಆಲೋಚನೆಗಳು ಹೆಚ್ಚು. ಹೀಗಾಗಿ ಅನುಮಾನ ಪಟ್ಟು ಅವಮಾನ ಎದುರಿಸುವ ಸಂಭವ ಹೆಚ್ಚು.
ಧನುಸ್ಸು ರಾಶಿ :
ಓವರ್ ಕಾನ್ಫಿಡೆನ್ಸ್ ಹೆಚ್ಚು. ಮಾತಲ್ಲಿ ಆಡಿದ್ದನ್ನು ಕೃತಿಯಲ್ಲಿ ಮಾಡಿ ತೋರಿಸುವುದಿಲ್ಲ. ಗೆಳೆಯರು, ಸಂಬಂಧಿಕರ ಮಧ್ಯೆ ಬಿರುಕು ಸೃಷ್ಟಿ ಮಾಡುವ ಕೆಟ್ಟ ಗುಣವೂ ಇದೆ.
ಮಕರ ರಾಶಿ :
ಕೆಲಸ ಮಾಡುವುದಕ್ಕಿಂತ ಯೋಚನೆ ಮಾಡಿ ಮಾಡಿಯೇ ಸುಸ್ತಾಗುತ್ತಾರೆ. ಇವರು ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಹೇಳೋದೇ ಇಲ್ಲ. ಹೇಳಿದ್ದಕ್ಕೆ ವಿರುದ್ಧ ಕೆಲಸ ಮಾಡುವುದೇ ಜಾಸ್ತಿ. ಹೀಗಾಗಿ ಬಹುಬೇಗ ಬೇರೆಯವರ ನಂಬಿಕೆ ಕಳೆದುಕೊಳ್ತಾರೆ.
ಕುಂಭ ರಾಶಿ :
ಸಮಾಜದ ಬಗ್ಗೆ ಹೆಚ್ಚಿನ ಯೋಚನೆ ಹಾಗೂ ಕಾಳಜಿಗಳನ್ನು ಹೊಂದಿರುತ್ತಾರೆ. ಆದರೆ ತಮ್ಮ ಹತ್ತಿರದವರ ಮತ್ತು ಪ್ರೀತಿ ಪಾತ್ರರ ವಿಷಯಗಳನ್ನು ಹೆಚ್ಚು ಗಮನಿಸುವುದಿಲ್ಲ. ಇವರು ತಮ್ಮನ್ನು ತಾವು ಬೇರೆಯವರಿಂದ ಪ್ರತ್ಯೇಕವಾಗಿ ನೋಡುತ್ತಾರೆ ಮತ್ತು ಇವರ ಬಗ್ಗೆ ಯಾವುದೇ ರೀತಿಯ ಆಲೋಚನೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಮೀನ ರಾಶಿ :
ಪ್ರತಿಯೊಂದು ವಿಚಾರಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಆಲೋಚನೆಯನ್ನು ಮಾಡುವರು ಮತ್ತು ಎಲ್ಲಾ ವಿಚಾರಗಳಿಂದಲೂ ದೂರ ಓಡುವ ಸಂಭವವಿರುವುದು. ಇದರ ಪರಿಣಾಮವಾಗಿ ಮೀನ ರಾಶಿಗೆ ಸೇರಿದ ಜನರು ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ಸಮಸ್ಯೆ ಮಾಡಿಕೊಳ್ತಾರೆ.