ಮುಂದಿನ ತಿಂಗಳಿಂದ ಗೃಹ ಜ್ಯೋತಿ (Gruha Jytohi) ಜಾರಿಯಾಗುತ್ತಿದೆ. 200 ಯುನಿಟ್ ಒಳಗೆ ವಿದ್ಯುತ್ ಬಳಸುತ್ತಿರುವವರಿಗೆ ರಿಲ್ಯಾಕ್ಸ್ ಸಿಗಲಿದೆ. ನೀವು ಈಗ ಎಷ್ಟು ವಿದ್ಯುತ್ (Electricity bill) ಬಳಸುತ್ತಿದ್ದೀರೋ.. ಅದಕ್ಕಿಂತ ಶೇ.10ರಷ್ಟು ಹೆಚ್ಚು ವಿದ್ಯುತ್ ಬಳಸಿದರೆ, ನೋ ಪ್ರಾಬ್ಲಂ. ನೀವು ಕರೆಂಟ್ ಬಿಲ್ (Electricity bill) ಕೊಡಬೇಕಿಲ್ಲ. ಆದರೆ ಬಿಲ್ ಕಲೆಕ್ಟರುಗಳ ಪರಿಸ್ಥಿತಿ ಮಾತ್ರ ಘನಘೋರ. ಇತ್ತೀಚೆಗೆ ಕೋಲಾರದಲ್ಲಿ ಬಿಲ್ ಕಲೆಕ್ಟರ್ ಮೇಲೆ ಹಲ್ಲೆಯಾಗಿತ್ತು. ಬೈಗುಳಗಳ ಜಗಳಗಳಂತೂ ನಿತ್ಯವೂ ನಡೆಯುತ್ತಿವೆ. ಆದರೆ ಕೊಡಗಿನಲ್ಲಿ ಇದು ಅತಿರೇಕಕ್ಕೆ ಹೋಗಿದೆ. ಬಿಲ್ ಕಲೆಕ್ಟರ್ ಪ್ರಶಾಂತ್ ಎಂಬುವವರಿಗೆ ಚಾಕು ಇರಿತವಾಗಿದೆ.
ಗುರುವಾರ ಸಂಜೆ ಐದು ಗಂಟೆ ವೇಳೆಗೆ ವಿದ್ಯುತ್ ಬಿಲ್ (Electricity bill) ಕೊಡಲು ಕಲೆಕ್ಟರ್ ಪ್ರಶಾಂತ್ ಜಂಬೂರಿಗೆ ಹೋಗಿದ್ದರು. ಆರೋಪಿ ರತೀಶ್ ಮನೆಗೆ ವಿದ್ಯುತ್ ಮೀಟರ್ ರೀಡಿಂಗ್ ಮಾಡಿ 1400 ರೂಪಾಯಿ ಬಿಲ್ ಕೊಟ್ಟಿದ್ದಾರೆ. ಆದರೆ ಆರೋಪಿ ರತೀಶ್ ಇಷ್ಟೊಂದು ವಿದ್ಯುತ್ ಬಿಲ್ ಹೇಗೆ ಬಂತು ಎಂದು ಅವಾಚ್ಯ ಶಬ್ದಗಳಿಂದ ಕಲೆಕ್ಟರ್ ಪ್ರಶಾಂತ್ಗೆ ನಿಂದಿಸಿದ್ದಾನೆ ಎನ್ನಲಾಗಿದೆ. ಅವರ ಮನೆಗೆ ಪ್ರತಿ ತಿಂಗಳೂ ಬರುತ್ತಿದ್ದ ಬಿಲ್ 800 ರೂಪಾಯಿ ಒಳಗೆ ಇರುತ್ತಿತ್ತಂತೆ. ಹೇಗೆ ಇಷ್ಟೊಂದು ಜಾಸ್ತಿಯಾಯ್ತು ಎನ್ನುವುದು ಅವನ ಪ್ರಶ್ನೆ. ಗಲಾಟೆ ಜಾಸ್ತಿಯಾದಾಗ ಆರೋಪಿ ರತೀಶ್ ಮನೆಯೊಳಗಿನಿಂದ ಚಾಕು ತಂದು ಇರಿದಿದ್ದಾನೆ ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಮಾದಾಪುರ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಬಿಲ್ ಕಲೆಕ್ಟ್ ಏಜೆನ್ಸಿಯ ಮ್ಯಾನೇಜರ್ ಶ್ರೀಕಾಂತ್ ವಿದ್ಯುತ್ ಬಿಲ್ಲು ಜಾಸ್ತಿ ಬಂದಿರುವ ಬಗ್ಗೆ ಗ್ರಾಹಕ ಪ್ರಶ್ನಿಸಿದ್ದಾನೆ. ವಿದ್ಯುತ್ ಬಿಲ್ ಜಾಸ್ತಿ ಬಂದಿರುವ ಬಗ್ಗೆ ಅಧಿಕಾರಿಗಳನ್ನು ಕೇಳುವಂತೆ ಹೇಳಿದರೂ ಗಲಾಟೆ ಮಾಡಿ ಚಾಕು ಇರಿದಿದ್ದಾನೆ. ಸದ್ಯ ಪ್ರಶಾಂತ್ ತೀವ್ರ ರಕ್ತಸ್ರಾವದಿಂದ ಬಳಲಿದ್ದಾರೆ. ವಿದ್ಯುತ್ ಬಿಲ್ ಜಾಸ್ತಿಯಾದ ನಂತರ ಕೆಲಸ ಮಾಡುವುದು ಕಷ್ಟವಾಗಿದೆ ಎಂದಿದ್ದಾರೆ. ಸದ್ಯ ಕೆಇಬಿ ಜೆಇ ರತೀಶ್ ವಿರುದ್ಧ ದೂರು ನೀಡಿದ್ದರೆ, ಇತ್ತ ಏಜೆನ್ಸಿಯಿಂದಲೂ ದೂರು ನೀಡಲಾಗಿದೆ.



