ಶಿವಣ್ಣನ ಚಿತ್ರದ ಪ್ರಚಾರ ಎಂದರೆ ಹಿಂದೆ ಮುಂದೆ ನೋಡದೆ ಬರೋ ಕಿಚ್ಚ ಸುದೀಪ್, ಈ ಹಿಂದೆಯೂ ಹಲವು ಚಿತ್ರಗಳನ್ನು ಪ್ರಮೋಟ್ ಮಾಡಿದ್ಧಾರೆ. ಶಿವಣ್ಣ ಕೂಡಾ ಹಾಗೆಯೇ. ಇದರ ನಡುವೆ ಈ ಬಾರಿ ಶಿವಣ್ಣ ಇನ್ನೊಂದು ಮಲ್ಟಿಸ್ಟಾರ್ ಚಿತ್ರದಲ್ಲಿ ನಟಿಸಿದ್ದಾರೆ. ಕರಟಕ ದಮನಕ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಕರಟಕ ದಮನಕ ಈ ವರ್ಷದ ಟ್ರೆಂಡ್ ಸೆಟ್ಟಿಂಗ್ ಸಿನಿಮಾ ಆಗುವ ಎಲ್ಲ ಚಾನ್ಸ್ ಇದೆ. ಹಾಗೆ ನೋಡಿದ್ರೆ ಇದು ದಿಗ್ಗಜರ ಸಿನಿಮಾ.
ಇಬ್ಬರು ದಿಗ್ಗಜರಿಗೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಮೊದಲ ಸಿನಿಮಾ ಕರಟಕ ದಮನಕಕ್ಕೆ ಕಿಚ್ಚಸುದೀಪ್ ಸಾಥ್ ಕೊಟ್ಟಿದ್ಧಾರೆ. ಕರಟಕ ದಮನಕ’ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಕ್ಯಾರೆಕ್ಟರ್ ಹೇಗಿದೆ ಅನ್ನೋ ಕುತೂಹಲಕ್ಕೆ ಇಲ್ಲಿ ಉತ್ತರ ಸಿಕ್ಕಿದೆ.
ಅವನು ನಾಗರಾಜ, ಇವನು ಬಸವರಾಜ. ಆದರೆ ನಿಜಕ್ಕೂ ಅದು ಅವರ ಹೆಸರೇನಾ..? ಯೋಗರಾಜ್ ಭಟ್ಟರಿಗೇ ಗೊತ್ತು. ಒಂದಿಷ್ಟು ಫನ್ನಿ, ಒಂದಿಷ್ಟು ಸೀರಿಯಸ್ ಆಗಿರೋ ಕ್ಯಾರೆಕ್ಟರ್ ಟೀಸರಿನಲ್ಲಿ ರಾಕ್ʻಲೈನ್ ವೆಂಕಟೇಶ್ ಇನ್ಸ್ʻಪೆಕ್ಟರ್ ಪಾತ್ರದಲ್ಲಿ ಬರುತ್ತಾರೆ. ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ನಾಟಿ ಲುಕ್ಕಿನಲ್ಲಿ ಆಗಿ ಕಾಣಿಸಿಕೊಳ್ತಾರೆ. ಕೊನೆಗೆ ಪ್ರಭುದೇವ ಅವರ ಡೈಲಾಗಿನೊಂದಿಗೆ ಎಂಡ್ ಆಗುತ್ತೆ ಕ್ಯಾರೆಕ್ಟರ್ ಟೀಸರ್. ಆದರೆ ಚಿತ್ರದ ಕಥೆಯ ಬಗ್ಗೆ ಒಂದು ಕ್ಲೂ ಅಂತೂ ಕೊಡ್ತಾರೆ ಯೋಗರಾಜ್ ಭಟ್. ಇದೇ ಶಿವರಾತ್ರಿಗೆ ಬರುತ್ತಿರೋ ಸಿನಿಮಾ ಸಖತ್ ಥ್ರಿಲ್ ಕೊಡೋ ಎಲ್ಲ ಸೂಚನೆಗಳೂ ಇವೆ.
ಪಂಚತಂತ್ರದ ಎರಡು ಕ್ಯಾರೆಕ್ಟರ್‌ಗಳನ್ನೇ ಟೈಟಲ್ ಆಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ನರಿಗಳ ಸ್ವಭಾವವನ್ನೇ ಇಬ್ಬರು ದಿಗ್ಗಜರ ಪಾತ್ರಕ್ಕೆ ಕೊಟ್ಟು ಯೋಗರಾಜ್ ಭಟ್ ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದು ಎಲ್ಲರ ಕುತೂಹಲ.



