ಯುವ. ಈ ಚಿತ್ರದ ಮೂಲಕ ದೊಡ್ಮನೆಯ ಇನ್ನೊಂದು ಕುಡಿ ಚಿತ್ರರಂಗ ಪ್ರವೇಶಿಸಿದೆ. ಮಾರ್ಚ್ ಅಂತ್ಯದಲ್ಲಿ ರಿಲೀಸ್ ಆದ ಯುವ ಚಿತ್ರ 3ನೇ ವಾರಕ್ಕೆ ಕಾಲಿಟ್ಟು ಅದ್ಧೂರಿಯಾಗಿಯೇ ಪ್ರದರ್ಶನವಾಗುತ್ತಿದೆ. 150ಕ್ಕೂ ಹೆಚ್ಚು ಸೆಂಟರ್ʻಗಳಲ್ಲಿ ಯುವ ಚಿತ್ರ ಪ್ರದರ್ಶನವಾಗುತ್ತಿದ್ದು, ಹೌಸ್ ಫುಲ್ ಶೋಗಳೂ ಇವೆ. ಹೊಂಬಾಳೆ ಫಿಲಮ್ಸ್ ಬ್ಯಾನರ್ʻನಲ್ಲಿ ತೆರೆಗೆ ಬಂದಿರುವ ಯುವ ಚಿತ್ರದ ಸಕ್ಸಸ್ ಮೀಟ್ʻನಲ್ಲಿ ಮಾತನಾಡಿದ್ದ ಯುವ ರಾಜ್ ಕುಮಾರ್ ಚಿತ್ರದಲ್ಲಿ ಕೆಲವು ತಪ್ಪುಗಳೂ ಆಗಿವೆ. ಅವುಗಳನ್ನು ಮುಂದಿನ ಸಿನಿಮಾದಲ್ಲಿ ತಿದ್ದಿಕೊಳ್ಳುತ್ತೇನೆ ಎಂದು ಹೇಳಿದ್ದರು.
ವಿಶೇಷವೆಂದರೆ.. ಯುವ ಚಿತ್ರದ ಬಗ್ಗೆ ಖುದ್ದು ದೊಡ್ಡಪ್ಪ ಶಿವಣ್ಣ ಸೇರಿದಂತೆ ಚಿತ್ರರಂಗದ ಬಹುತೇಕ ಸ್ಟಾರ್ ನಟರು ಬಹಿರಂಗವಾಗಿ ಸೋಷಿಯಲ್ ಮೀಡಿಯಾಗಳ ಮೂಲಕವೂ ಸ್ವಾಗತ ಹೇಳಲಿಲ್ಲ. ಸಿನಿಮಾದವರಿಗಾಗಿಯೇ ಚಿತ್ರದ ಪ್ರೀಮಿಯರ್ ಶೋ ನಡೆಯಲಿಲ್ಲ. ಅದ್ಧೂರಿ ಭರ್ಜರಿ ಎನ್ನುವಂತಹ ಪ್ರಚಾರವೂ ಇರಲಿಲ್ಲ. ಕೇವಲ ಚಿತ್ರತಂಡದವರು ಪ್ರಚಾರ ಮಾಡಿದರು. ತಂದೆ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಕೂಡಾ ಪ್ರಚಾರದಲ್ಲಿದ್ದರು. ಶಿವಣ್ಣ ಕೂಡಾ ಮಗನ ಜೊತೆ ಒಂದು ಪುಟ್ಟ ಡ್ಯಾನ್ಸ್ ವಿಡಿಯೋ ಮಾಡಿ ಸುಮ್ಮನಾಗಿದ್ದರು. ಯಾಕೆ..?
ಇದರ ಹಿಂದೆ ಒಂದು ಕಾರಣವೂ ಇದೆ. ಚಿತ್ರ ಮಾತನಾಡಬೇಕೇ ಹೊರತು.. ನಾವು ಮಾತನಾಡಬಾರದು. ಹಾಗೂ.. ಹೆಚ್ಚು ಮಾತನಾಡಿದ್ದಷ್ಟೂ ನಿರೀಕ್ಷೆ ಗಗನ ಮುಟ್ಟುತ್ತವೆ. ಪ್ರೇಕ್ಷಕರು ಬಂದು ಹೊಸ ನಟ ಎಂಬ ರೀತಿಯಲ್ಲಿ ಸಿನಿಮಾ ನೋಡಿ.. ಮೆಚ್ಚಿಕೊಳ್ಳಲಿ ಎಂದು ಅಭಿಪ್ರಾಯ ಪಟ್ಟಿತ್ತು ಹೊಂಬಾಳೆ. ಹೊಂಬಾಳೆಯವರ ನಿರೀಕ್ಷೆ ನಿಜವಾಗಿದೆ. ಚಿತ್ರವನ್ನು ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ಈಗ.. ಸ್ಟಾರ್ ನಟರ ಸರದಿ.
ಕನ್ನಡ ಚಿತ್ರರಂಗದ ಹೊಸ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್ ಕುಮಾರ್ ಅವರ ಮೊದಲ ʻಯುವʼ ಚಿತ್ರವನ್ನು ಕಿಚ್ಚ ಸುದೀಪ್ ನೋಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಬೆನ್ನು ತಟ್ಟಿದ್ದಾರೆ.
ಸುದೀಪ್ ಅವರಿಗೆ ಯುವ ರಾಜ್ ಕುಮಾರ್ ಅವರ ಸ್ಕ್ರೀನ್ ಪ್ರೆಸೆನ್ಸ್ ಇಷ್ಟವಾಗಿದೆ. ನಟನೆಯ ಜೊತೆ ಡ್ಯಾನ್ಸ್ ಕೂಡಾ ಇಷ್ಟವಾಗಿದೆ. ಡ್ಯಾನ್ಸ್ ಎನ್ನುವುದು ರಕ್ತಗತವಾಗಿಯೇ ಬಂದಿದೆ ಎನ್ನುವ ಮೂಲಕ ಮೆಚ್ಚಿಕೊಂಡಿರುವ ಸುದೀಪ್ ಪ್ರೇಕ್ಷಕರು ಹಾಗೂ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಿದ್ದೀರಿ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಅವರನ್ನು ಪ್ರಶಂಸೆ ಮಾಡಿದ್ಧಾರೆ.
ಚಿತ್ರವನ್ನು ನಿರ್ಮಾಣ ಮಾಡಿದ ಹೊಂಬಾಳೆ ಮತ್ತು ವಿಜಯ್ ಕಿರಗಂದೂರು ಅವರನ್ನೂ ಹೊಗಳಿರುವ ಸುದೀಪ್ ಯುವ ರಾಜ್ ಕುಮಾರ್ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದು ಅಭಿಪ್ರಾಯ ಪಟ್ಟಿದ್ಧಾರೆ.
ಯುವ ಎದುರು ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದು, ತಂದೆ ತಾಯಿಯಾಗಿ ಅಚ್ಯುತ್ ಕುಮಾರ್ ಮತ್ತು ಸುಧಾರಾಣಿ ನಟಿಸಿದ್ಧಾರೆ. ಚಿತ್ರದಲ್ಲಿ ಕಾಲೇಜ್ ಮತ್ತು ಫ್ಯಾಮಿಲಿ ಕಥೆ ಇದ್ದು, ಎರಡೂ ಕಥೆಗಳನ್ನು ಚೆನ್ನಾಗಿ ಬ್ಲೆಂಡ್ ಮಾಡಲಾಗಿದೆ. ಫಸ್ಟ್ ಹಾಫ್ ಯುವ ಪ್ರೇಕ್ಷಕರಲ್ಲಿ ಥ್ರಿಲ್ ಮೂಡಿಸಿದರೆ.. ಸೆಕೆಂಡ್ ಹಾಫ್ ಫ್ಯಾಮಿಲಿ ಆಡಿಯನ್ಸ್ʻಗೆ ಹೃದಯ ಮುಟ್ಟಿದೆ. ಚಿತ್ರದಲ್ಲಿ ಬರುವ ತಂದೆ ಮಗನ ಸೆಂಟಿಮೆಂಟ್ ದೊಡ್ಮನೆ ಅಭಿಮಾನಿಗಳ ಹೃದಯ ಗೆದ್ದಿದೆ.



