ಕಿಚ್ಚ ಸುದೀಪ್.. ಅವರಿಗೆ ಒಬ್ಬಳೇ ಮಗಳು ಸಾನ್ವಿ. ಆಕೆ ಸಿಂಗರ್. ಆದರೆ.. ನಾವು ಹೇಳ್ತಿರೋದು ರಿಯಲ್ ಮಗಳ ಕಥೆ ಅಲ್ಲ. ರೀಲ್ ಮಗಳ ಕಥೆ. ಎಸಿಪಿ ವೀರಮದಕರಿ ಮಗಳು ಎಂದ ಕೂಡಲೇ ಥ್ರಿಲ್ ಆಗಬೇಡಿ. ವೀರ ಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಹುಡುಗಿ ಈಕೆ. ಮಹೇಶ್ ಬಾಬು ಸಿನಿಮಾ ಅಂದ್ರೆ.. ಅದು ಟಾಲಿವುಡ್ ಹೀರೋ ಅಲ್ಲ, ಕನ್ನಡದ ನಿರ್ದೇಶಕ ಮಹೇಶ್ ಬಾಬು ಸಿನಿಮಾ.
ವೀರ ಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅರ್ಥಾತ್ ಎಸಿಪಿ ವೀರಮದಕರಿಯ ಮಗಳಾಗಿ ನಟಿಸಿದ್ದ ಹುಡುಗಿ ಜೆರುಶಾ ಕ್ರಿಸ್ಟೋಫರ್. ವೀರ ಮದರಕಿ ಸಿನಿಮಾ ರಿಲೀಸ್ ಆಗಿದ್ದು 2009ರಲ್ಲಿ. ಆಗ ಜೆರುಷಾ ಕ್ರಿಸ್ಟೋಫರ್ʻಗೆ ಕೇವಲ 5 ವರ್ಷ. 5 ವರ್ಷದಲ್ಲಿಯೇ ಅತ್ಯುತ್ತಮ ಬಾಲನಟಿಯಾಗಿ ಅವಾರ್ಡೂ ಪಡೆದುಕೊಂಡಿದ್ದ ಜೆರುಷಾ.. ಮ್ಯಾಕ್ಸ್, ಬ್ರಿಟಾನಿಯಾ ಬಿಸ್ಕೆಟ್ ಸೇರಿದಂತೆ 40ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದರು. ಈಗ ಮತ್ತೊಮ್ಮೆ ಸಿನಿಮಾ ಪ್ರವೇಶ ಮಾಡುತ್ತಿದ್ಧಾರೆ. ನಾಯಕಿಯಾಗಿ.
ಮಹೇಶ್ ಬಾಬು, ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಕನ್ನಡದಲ್ಲಿ ಕೃತಿ ಕರಬಂಧ, ಐಂದ್ರಿತಾ ರೇ, ನಿಕ್ಕಿ ಗರ್ಲಾನಿ, ಆಶಿಕಾ ರಂಗನಾಥ್ ಅಂತಹವರನ್ನು ಚಿತ್ರರಂಗಕ್ಕೆ ಕರೆತಂದ ಮಹೇಶ್ ಬಾಬು, ಈಗ ಲವ್ ಸ್ಟೋರಿಯ ಸಿನಿಮಾ ಮಾಡುತ್ತಿದ್ಧಾರೆ. ಆ ಚಿತ್ರಕ್ಕೆ ಹೀರೋಯಿನ್ ಜೆರುಶಾ ಕ್ರಿಸ್ಟೋಫರ್.
ಆ ದಿನಗಳು’ ಚೇತನ್ ನಟಿಸಿದ ‘ಅತಿರಥ’ ಸಿನಿಮಾ ಬಳಿಕ ಮಹೇಶ್ ಬಾಬು ಯಾವುದೇ ಚಿತ್ರ ಕೈಗೆತ್ತಿಕೊಂಡಿರಲಿಲ್ಲ. ಬಹಳ ದಿನಗಳ ಬಳಿಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚೇತನ್ ಹಾಗೂ ಅನುರಾಗ್ ಬಂಡವಾಲ ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಅನೂಪ್ ಸಿಳೀನ್ ಸಂಗೀತ ಈ ರೊಮ್ಯಾಂಟಿಕ್ ಲವ್ ಸ್ಟೋರಿಗೆ ಇರಲಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ಹೀರೋ ಸ್ಟೈಲ್ ಗುರು ರಕ್ಷಿತ್.



