ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಾಗಿರುವ ಚಿತ್ರ 45. ಈ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿರುವುದು ಅರ್ಜುನ್ ಜನ್ಯ. ವಿಶೇಷ ಎಂದರೆ ಇದೇ ಕ್ರಿಸ್ ಮಸ್ ರಜೆಗೆ ರಿಲೀಸ್ ಆಗುತ್ತಿರುವ ಚಿತ್ರಕ್ಕೆ ಫೈಟ್ ಕೊಡುವ ಸೂಚನೆ ನೀಡಿರುವುದು ಮಾರ್ಕ್. ಇದು ಮ್ಯಾಕ್ಸ್ ಚಿತ್ರದ ಪ್ರೀಕ್ವೆಲ್ ಎನ್ನಲಾಗುತ್ತಿದೆ. ಸಮಸ್ಯೆ ಆಗಿದ್ದೇ ಇಲ್ಲಿ. ಏಕೆಂದರೆ.. 45 ಚಿತ್ರದಲ್ಲಿರುವ ಪ್ರತಿಯೊಬ್ಬರ ಬಗ್ಗೆಯೂ ಸುದೀಪ್ ಅವರಿಗೆ ವಿಶೇಷ ಸಂಬಂಧ ಇದೆ.
45 ನಿರ್ದೇಶಕ ಅರ್ಜುನ್ ಜನ್ಯ ಸುದೀಪ್ ಅವರನ್ನು ದೊಡ್ಡ ಸ್ಥಾನದಲ್ಲಿ ಕೂರಿಸಿದ್ದಾರೆ. ಸುದೀಪ್ ಇಲ್ಲದಿದ್ದರೆ ನಾನಿಲ್ಲ ಎಂದು ಓಪನ್ ಆಗಿಯೇ ಹೇಳಿಕೊಳ್ಳುವ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಅರ್ಜುನ್ ಜನ್ಯ ಡೈರೆಕ್ಟ್ ಆಗುತ್ತಿದ್ದಾರೆ.
ಇನ್ನು ಶಿವಣ್ಣ ಅವರ ಬಗ್ಗೆ ಸುದೀಪ್ ಅವರಿಗೆ ಸ್ಪೆಷಲ್ ಪ್ರೀತಿ ಇದೆ. ಶಿವಣ್ಣ ಮತ್ತು ಸುದೀಪ್ ಅವರ ಕುಟುಂಬಗಳ ನಡುವೆ ಸ್ಪೆಷಲ್ ಬಾಂಧವ್ಯ ಇದೆ. ಅದನ್ನು ಪದಗಳಲ್ಲಿ ಹೇಳುವುದಕ್ಕೆ ಬರುವುದಿಲ್ಲ.
ಅತ್ತ ಉಪೇಂದ್ರ ಅವರ ಬಗ್ಗೆಯೂ ಅಷ್ಟೇ. ಸುದೀಪ್ ಅವರು ಹೀರೋ ಆಗುವುದಕ್ಕೆ ಕಾರಣವೇ ಉಪೇಂದ್ರ. ಡೈರೆಕ್ಟರ್ ಆಗುವ ಕನಸು ಇಟ್ಟುಕೊಂಡಿದ್ದ ಸುದೀಪ್ ಅವರಿಗೆ ನೀನು ಹೀರೋ ಆಗು ಎಂದು ಪಾಠ ಮಾಡಿದ್ದರಂತೆ ಉಪ್ಪಿ. ಉಪೇಂದ್ರ ಅವರ ಮೇಲಿನ ಪ್ರೀತಿಗಾಗಿಯೇ ಕಬ್ಜ ಚಿತ್ರದಲ್ಲೊಂದು ಪಾತ್ರ ಮಾಡಿದ್ದರು ಸುದೀಪ್.
ಇನ್ನು ರಾಜ್ ಬಿ ಶೆಟ್ಟಿಯವರ ಕಥೆ, ಪ್ರೆಸೆಂಟೇಷನ್ ಇಷ್ಟ ಪಡುವ ಸುದೀಪ್, ಆರಂಭದ ದಿನಗಳಲ್ಲಿ ರಾಜ್ ಬಿ ಶೆಟ್ಟಿಯವರ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದವರು.
ಹೀಗಿರುವಾಗ.. ಅವರಿಗೆ ಅವರೇ ಎದುರು ಬದುರಾಗಿ ಯುದ್ಧಕ್ಕೆ ನಿಂತರೆ.. ಹೇಗೆ.. ಇದರ ಬಗ್ಗೆ ಅರ್ಜುನ್ ಜನ್ಯ ಉತ್ತರ ಕೊಟ್ಟಿದ್ದಾರೆ. ಅದೂ ಆಪ್ರೋ ಟಪಾಂಗ್ ಹಾಡು ರಿಲೀಸ್ ಕಾರ್ಯಕ್ರಮದಲ್ಲಿ. ಆಪ್ರೋ ಟಪಾಂಗ್.. 45 ಚಿತ್ರದ ಮೊದಲ ಹಾಡು. ಮಜವಾಗಿದೆ. ಹಾಡು ಶುರುವಾಗೋದು ರಾಜ್ ಬಿ ಶೆಟ್ಟಿ ಅವರಿಂದ. ಕಾಡಿನಲ್ಲಿ ಕಳೆದು ಹೋದ ರಾಜ್ ಬಿ ಶೆಟ್ರನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. ಆಗ ಓಡುತ್ತಾ ಓಡುತ್ತಾ ಪ್ರಪಾತಕ್ಕೆ ಬೀಳುವ ರಾಜ್ ಅವರು ಕಾಡು ಮನುಷ್ಯರ ಕೈಗೆ ಸಿಗ್ತಾರೆ. ಕಳೆದು ಹೋದ ಸೋದರನನ್ನು ಹುಡುಕುತ್ತಿರುವವರಿಗೆ ಶೆಟ್ರು, ಥೇಟು ಅವರಂತೆಯೇ ಕಾಣಿಸ್ತಾರೆ. ನಿಮಿಷದಲ್ಲಿ ಕಾಸ್ಟ್ಯೂಮ್ ಚೇಂಜ್. ಆಫ್ರೋ ಟಪಾಂಗ್ ಸಾಂಗ್ ಶುರುವಾಗುತ್ತದೆ.
ಹಾಡಿನ ಶುರುವಿನಲ್ಲಿ ಶಿವಣ್ಣ ಅವರನ್ನು ಸಿಂಹಕ್ಕೆ ಹೋಲಿಸಿ ತೋರಿಸಲಾಗಿದೆ. ಉಪೇಂದ್ರರನ್ನು ಕಾಡು ಕೋಣಗಳಿಗೆ ಹೋಲಿಸಲಾಗಿದೆ. ಕಾಡು ಮನುಷ್ಯನ ಗೆಟಪ್ ಹಾಕಿರೋದು ರಾಜ್ ಬಿ ಶೆಟ್ಟಿ ಅವರಿಗೆ.
ಇನ್ನು ಡ್ಯಾನ್ಸ್ ಮಾತ್ರ ಐ ಕ್ಯಾಚಿ. ಕಣ್ಣಿಗೆ ಹಬ್ಬ. ರೆಗ್ಯುಲರ್ ಎನ್ನುವುದಕ್ಕಿಂತ ಡಿಫರೆಂಟ್ ಎನಿಸುವುದು ಉಗಾಂಡ ಡ್ಯಾನ್ಸರ್ಸ್ ಹಾಕುವ ಸ್ಪೀಡ್ ಸ್ಟೆಪ್. ಅವರಿಗೆ ತಕ್ಕಂತೆ ಅಷ್ಟೇ ಸ್ಪೀಡ್ ಆಗಿ ಸ್ಟೆಪ್ ಹಾಕಿರೋದು ಸ್ವೀಟ್ 60+ ಶಿವಣ್ಣ. ಉಪ್ಪಿ ಎಂದಿನಂತೆ ಸಿಗ್ನೇಚರ್ ಸ್ಪೆಪ್ ಹಾಕಿದ್ರೆ, ರಾಜ್ ಬಿ ಶೆಟ್ಟಿ ಅವರದ್ದು ಎಂದಿನ ಹುಲಿ ಡ್ಯಾನ್ಸ್.
ಎಂ.ಸಿ.ಬಿಜ್ಜು ಹಾಡಿರುವ ಹಾಡಿಗೆ ಸಾಹಿತ್ಯವೂ ಅವರದ್ದೇ. ಜೊತೆಗೆ ನಿಶಾನ್ ರೈ ಕೂಡಾ ಇದ್ದಾರೆ. ಒಂದಿಷ್ಟು ಅರ್ಥವಾಗುತ್ತದೆ. ಉಳಿದದ್ದು ಅರ್ಥವಾಗಲ್ಲ. ಅದೇ ಹಾಡಿನ ಸ್ಪೆಷಾಲಿಟಿ. ಹಾಡಿರುವುದು ಕೂಡಾ ಬಿಜ್ಜು ಅವರೇ. ಅರ್ಜುನ್ ಜನ್ಯ ಮ್ಯೂಸಿಕ್ ವೆರೈಟಿ ಎನಿಸುತ್ತಿದೆ. ಚಿತ್ರದ ಡೈರೆಕ್ಟರ್ ಕೂಡಾ ಅವರೇ.
ಕ್ರಿಸ್ ಮಸ್ ರಜೆಗೆ ರಿಲೀಸ್ ಆಗುತ್ತಿರುವ 45 ಚಿತ್ರದ ಮೊದಲ ಹಾಡು ಇದು. ಈ ಹಾಡು ಜನರಿಗೆ ಇಷ್ಟವಾಗುತ್ತದೆ ಎನ್ನುವ ನಂಬಿಕೆ ಇತ್ತು. ಹಾಗೆಯೇ ಆಗಿದೆ ಕೂಡಾ. ಸಿನಿಮಾ ಕೂಡಾ ಬೇರೆಯದ್ದೇ ರೀತಿಯಲ್ಲಿದೆ. ಕಥೆ ನಿಜಕ್ಕೂ ಚೆನ್ನಾಗಿದೆ. ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವ ವಿಶ್ವಾಸ ಶಿವಣ್ಣ ಅವರದ್ದು.
ಅರ್ಜುನ್ ಜನ್ಯ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಇನ್ನು ಚಿತ್ರದಲ್ಲಿರುವ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಇಬ್ಬರೂ ನಿರ್ದೇಶಕರೇ. ಸರಳವಾಗಿ ಒಪ್ಪಿಕೊಳ್ಳೋ ಆಸಾಮಿಗಳಲ್ಲವೇ ಅಲ್ಲ. ಹೀಗಾಗಿ ಚಿತ್ರ ಕಥೆ ಡಿಫರೆಂಟ್ ಆಗಿರಬೇಕು ಎನ್ನುವ ಕಾನ್ಫಿಡೆನ್ಸು ಪ್ರೇಕ್ಷಕರದ್ದು. ಸಿನಿಮಾವನ್ನು ರಮೇಶ್ ರೆಡ್ಡಿ ಅದ್ಭುತವಾಗಿ ಬೃಹತ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.
ಇದರ ಮಧ್ಯೆ ಅರ್ಜುನ್ ಜನ್ಯ ಸುದೀಪ್ ಅವರ ಜೊತೆ ಮಾತನಾಡಿದ್ದೇನೆ ಎನ್ನುವ ಮೂಲಕ 45 ಚಿತ್ರಕ್ಕೆ ಸುದೀಪ್ ಅವರ ಮಾರ್ಕ್ ಎದುರಾಬದುರು ಬರುವುದಿಲ್ಲ ಎನ್ನಲಾಗುತ್ತಿದೆ. ಆದರೆ.. ಕಳೆದ ಬಾರಿ ಉಪೇಂದ್ರರ UI ಚಿತ್ರಕ್ಕೆ ಸುದೀಪ್ ಅವರ ಮ್ಯಾಕ್ಸ್ ಫೈಟ್ ಕೊಟ್ಟು ಗೆದ್ದಿತ್ತು. ಉಪೇಂದ್ರರ ಯುಐ ಸೋತಿತ್ತು.



