ಮ್ಯಾಕ್ಸ್, ಈ ವರ್ಷದಲ್ಲಿಯೇ ಅತ್ಯಂತ ದೊಡ್ಡ ಓಪನಿಂಗ್ ಪಡೆದ ಚಿತ್ರಳಲ್ಲೊಂದು. ಯುಐ ಹಾಗೂ ಮ್ಯಾಕ್ಸ್, ಈ ವರ್ಷದಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರಗಳು. ಉಪೇಂದ್ರರ ಯುಐ ನಂತರ.. ಅರ್ಜುನ್ ಮಹಾಕ್ಷಯ್ ಮಹಾ ವಿಜಯ ದಾಖಲಿಸಿದ್ದಾನೆ. ಮ್ಯಾಕ್ಸ್ ಮ್ಯಾಕ್ಸಿಮಮ್ ಹಿಟ್ ದಾಖಲೆ ಸೇರುತ್ತಿದೆ. ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಡಿಸೆಂಬರ್ 27ಕ್ಕೆ ರಿಲೀಸ್ ಆಗಿದ್ದು, ಅಲ್ಲಿಯೂ ಚಿತ್ರದ ಗಳಿಕೆ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಆದರೆ ಕಾಟೇರ ರೆಕಾರ್ಡ್ ಸೇಫ್ ಆಗಿದೆ.
ಮ್ಯಾಕ್ಸ್ ಬಾಕ್ಸಾಫೀಸ್ :
ಮ್ಯಾಕ್ಸ್ 3ನೇ ದಿನ : 80 ಸಾವಿರ ಟಿಕೆಟ್ಸ್ ಬುಕ್ಕಿಂಗ್
ಮ್ಯಾಕ್ಸ್ 2ನೇ ದಿನ : 70 ಸಾವಿರ ಟಿಕೆಟ್ಸ್ ಬುಕ್ಕಿಂಗ್
ಮ್ಯಾಕ್ಸ್ ಮೊದಲ ದಿನ : 1 ಲಕ್ಷಕ್ಕೂ ಹೆಚ್ಚು ಟಿಕೆಟ್ಸ್ ಬುಕ್ಕಿಂಗ್
ಇದು ಟಿಕೆಟ್ಸ್ ಲೆಕ್ಕಾಚಾರವಾದರೆ, ಕಲೆಕ್ಷನ್ ವಿಷಯದಲ್ಲೂ ಮ್ಯಾಕ್ಸ್ ದಾಖಲೆ ಬರೆಯುತ್ತಿದೆ. ಮ್ಯಾಕ್ಸ್ ಮೊದಲ ದಿನ 10 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, 2 ಮತ್ತು 3ನೇ ದಿನ 6 ಕೋಟಿಗೂ ಹೆಚ್ಚು ಕಲೆಕ್ಷನ್ಸ್ ಆಗಿದೆ. ಈ ನಡುವೆ ಮ್ಯಾಕ್ಸ್ ಸೆಲಬ್ರೇಷನ್ ಒಂದಿಷ್ಟು ಕಾಂಟ್ರವರ್ಸಿ ಹುಟ್ಟುಹಾಕಿದೆ. ಸಿನಿಮಾ ಸಕ್ಸಸ್ ಕುರಿತಂಗೆ ಅಭಿಮಾನಿಗಳು ಬಳಸಿರುವ ಕೇಕ್ ವಿವಾದ ಸೃಷ್ಟಿಸಿದೆ.
ಯುಐ ಬಾಕ್ಸಾಫೀಸ್
ಯುಐ ಕೂಡಾ ಒಟ್ಟಾರೆಯಾಗಿ 5 ಲಕ್ಷಕ್ಕೂ ಹೆಚ್ಚು ಟಿಕೆಟ್ಸ್ ಸೇಲ್ ಆಗಿವೆ. ಎರಡನೇ ವಾರಕ್ಕೆ ಒಂದೂವರೆ ಸಾವಿರಕ್ಕೂ ಹೆಚ್ಚು ಸ್ಕೀನ್ʻಗಳಲ್ಲಿ ಚಿತ್ರ ಭರ್ಜರಿಯಾಗಿ ರನ್ ಆಗುತ್ತಿದೆ. ಕಲೆಕ್ಷನ್ 40 ಕೋಟಿಯ ಗಡಿ ದಾಟಿದ್ದು, 50 ಕೋಟಿಯ ಸಮೀಪ ಇದೆ. ಹೀಗಿದ್ದರೂ ಉಪೇಂದ್ರರ ಯುಐ ಕೂಡಾ ಕಾಟೇರ ಚಿತ್ರದ ದಾಖಲೆ ಮುರಿದಿಲ್ಲ.
ದರ್ಶನ್ ಅವರ ಕಾಟೇರ ಚಿತ್ರ ಮೊದಲ ದಿನವೇ ಒಂದು ಲಕ್ಷದ 10 ಸಾವಿರಕ್ಕೂ ಹೆಚ್ಚು ಟಿಕೆಟ್ ಸೇಲ್ ಆಗಿದ್ದವು. ಉಪೇಂದ್ರರ ಯುಐ ಒಂದು ಲಕ್ಷದ 4 ಸಾವಿರ ಹಾಗೂ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ 1 ಲಕ್ಷದ 6 ಸಾವಿರ ಟಿಕೆಟ್ಸ್ ಸೇಲ್ ಆಗಿವೆ. ಹೀಗಾಗಿ ಸದ್ಯಕ್ಕೆ ಕಾಟೇರ ಚಿತ್ರದ ಓಪನಿಂಗ್ ರೆಕಾರ್ಡ್ ಸದ್ಯಕ್ಕೆ ಬ್ರೇಕ್ ಆಗಿಲ್ಲ.
ಇನ್ನು ‘ಬಾಸಿಸಂ ಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು’ ಎಂದು ಮ್ಯಾಕ್ಸ್ ಟೀಂ ಬರೆದಿರುವುದೇ ವಿವಾದ ಸೃಷ್ಟಿಸಿದೆ. ಕನ್ನಡದಲ್ಲಿ ದರ್ಶನ್ ಅವರನ್ನು ʻಡಿ ಬಾಸ್ʼ ಎಂದೇ ಕರೆಯುತ್ತಾರೆ. ಇತ್ತೀಚೆಗೆ ಧ್ರುವ ಸರ್ಜಾ ಅವರನ್ನು ಡಿ ಬಾಸ್ ಎಂದು ಕರೆಯಲಾಗ್ತಿದೆ. ಯಶ್ ಅವರನ್ನು ʻಯಶ್ ಬಾಸ್ʼ ಎಂದೇ ಕರೆಯುತ್ತಾರೆ ಅವರ ಫ್ಯಾನ್ಸ್. ʻಬಾಸಿಸಂʼ ಎಂದರೆ ಅದು ದರ್ಶನ್ ಅವರನ್ನೇ ಟಾರ್ಗೆಟ್ ಮಾಡಿರುವ ಲೈನ್ ಎನ್ನುವುದು ಈಗ ಕಾಂಟ್ರವರ್ಸಿ. ಅಂದಹಾಗೆ ಈ ಕೇಕ್ ರೆಡಿ ಮಾಡಿಸಿದ್ದವರು ನಟ ಪ್ರದೀಪ್. ಅದಕ್ಕೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
‘ಯಾವ ನಟನಿಗೂ ಹೋಲಿಕೆ ಮಾಡಿ ಕೇಕ್ ಮೇಲೆ ಅದನ್ನು ಬರೆದಿಲ್ಲ. ಮ್ಯಾಕ್ಸ್ ಸಿನಿಮಾದ ಹಾಡಿನಲ್ಲಿ ಲೈನ್ ಬರುತ್ತದೆ. ಮ್ಯಾಕ್ಸೇ ಮ್ಯಾಕ್ಸಿಮಮ್ ಮಾಸ್. ಮಾಸಲಿ ಮಾಸಿಗೇ ಬಾಸ್ ಎಂಬ ಸಾಲನ್ನೇ ಅನುವಾದಿಸಿ ಕೇಕ್ ಮೇಲೆ ಬರೆಸಲಾಗಿತ್ತು. ಪ್ರತಿ ನಟರಿಗೆ ತಮ್ಮದೇ ಆದ ಫ್ಯಾನ್ಸ್ ಬಳಗ ಇರುತ್ತೆ. ಅವರು ತಮ್ಮ ಹೀರೋಗೆ ಬಾಸ್, ಅಣ್ಣ, ಸರ್ ಎಂದೆಲ್ಲ ಕರೆಯುತ್ತಾರೆ. ಒಂದು ಪದ ಯಾವ ನಟನಿಗೂ ಸೀಮಿತ ಆಗಿರುವುದಿಲ್ಲ. ಯಾವ ನಾಯಕ ನಟನನ್ನೂ ಉದ್ದೇಶಿಸಿ ಬರೆದ ಸಾಲು ಅದಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇತ್ತೀಚೆಗೆ ಹಂತ ಹಂತವಾಗಿ ಒಬ್ಬ ನಟನ ಚಿತ್ರಕ್ಕೆ ಬೇರೆಲ್ಲ ಕಲಾವಿದರು, ತಂತ್ರಜ್ಞರು ಗೆಲುವಿನ ಹಾರೈಕೆ ಮಾಡುತ್ತಿರುವುದು ಖುಷಿಯ ವಿಷಯ. ಮ್ಯಾಕ್ಸ್ ಚಿತ್ರಕ್ಕಂತೂ ಹೆಚ್ಚೂ ಕಡಿಮೆ ಇಡೀ ಚಿತ್ರರಂಗವೇ ಶುಭ ಹಾರೈಸಿತ್ತು. ಬೇರೆ ಭಾಷೆಯ ಕಲಾವಿದರು ಕೂಡಾ ಶುಭ ಕೋರಿದ್ದರು. ಈಗ ಮ್ಯಾಕ್ಸ್ ಗೆದ್ದಿದೆ. ಯುಐ ಗೆದ್ದಿದೆ. ಕಾಟೇರ ಚಿತ್ರದ ದಾಖಲೆ ಕೂಡಾ ಮುರಿಯಲಿ.. ಯಾರು ಗೆದ್ದರೂ ಕನ್ನಡದವರೇ ತಾನೇ..



