ಕಿಚ್ಚ ಸುದೀಪ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ. ಚೆಂದದ ಬರಹಗಾರ. ಬರಹಗಾರರಲ್ಲದೇ ಇದ್ದರೆ ನಿರ್ದೇಶಕರಾಗುವುದು ಸಾಧ್ಯವೂ ಇಲ್ಲ. ಸಾಕಷ್ಟು ಪುಸ್ತಕಗಳನ್ನು ಓದುವ ಓದುಗರೂ ಹೌದು. ಅಡುಗೆ ಭಟ್ಟರಂತೂ ಖಂಡಿತಾ ಹೌದು. ಬಿಡುವಿದ್ಧಾಗ ಕ್ರಿಕೆಟ್ ಆಡುವ ಕ್ರಿಕೆಟರ್. ರಾಜಕೀಯ ಪ್ರಚಾರರ ಮಾಡಿದ್ದರೂ ರಾಜಕಾರಣಿಯಾಗಿಲ್ಲ ಎನ್ನುವುದು ಅಭಿಮಾನಿಗಳಿಗೆ ಖುಷಿಯ ವಿಷಯ. ಆದರೆ ಇದೇ ಮೊದಲ ಬಾರಿಗೆ ಸುದೀಪ್ ಕವಿಯಾಗಿದ್ಧಾರೆ. ಸುದೀಪ್ ಒಳಗಿದ್ದ ಕವಿಯನ್ನು ಹೊರತೆಗೆದದ್ದು ಶ್ರೀರಾಮ. ರಾಮಲಲ್ಲ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಂಡ ಕಿಚ್ಚ ಸುದೀಪ್ ಸ್ವತಃ ಕವಿಯಾಗಿದ್ದಾರೆ.
ರಾಮ ಜಯ ರಾಮ ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ‘ ಹೇಳಿದರು.
ವಾಲ್ಮೀಕಿಗಳು ರೂಪಿಸಿದ ಶ್ರೀ ರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ.
ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ.
ನಿನ್ನ ಕಣ್ಣುಂಬಿಕೊಳ್ಳಲು ಎರಡೇ ಕಣ್ಣನ್ನೇಕೆ ಕೊಟ್ಟೆ? ನಿನ್ನ ಕೀರ್ತನೆಗೆ ಎರಡೇ ಕಿವಿಗಳು.
ನಮ್ಮದು ಎಂತಹ ಪುಣ್ಯ, ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ. ಕರ್ನಾಟಕದ ಮಣ್ಣ ಗರ್ಭದಿಂದ ಎದ್ದು ಬಂದೆ
ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ
ಅರುಣ್ ಯೋಗಿರಾಜ್ ಅವರಿಗೆ ನಿನ್ನ ಕೆತ್ತಲು.
ನಿನ್ನ ಪರಮ ಭಕ್ತ ಕವಚದ ಮಣ್ಣಿನ ವೀರ ಹನುಮಾನ ಇದು ಕರ್ನಾಟಕಕ್ಕೆ ನಿಜದ ಸಮ್ಮಾನ.
ಜೈ ಶ್ರೀ ರಾಮ್ ಎಂದು ಸಣ್ಣ ಕವಿತೆಯನ್ನು ಬರೆದಿದ್ದಾರೆ ಸುದೀಪ್.
ರಾಮನ ಭುಜಗಳು ನಮ್ಮ ಶಕ್ತಿ, ಅವರ ಎದೆ ನಮ್ಮ ಮಹತ್ವಾಕಾಂಕ್ಷೆ, ಅವರ ಕೈಗಳು ನಮ್ಮ ಶೌರ್ಯ, ಅವರ ಪಾದಗಳು ನಮ್ಮ ಮೋಕ್ಷ, ಅವರ ರೂಪ ಎಲ್ಲ ಸೃಷ್ಟಿಯ ಸಾರ. ಇಲ್ಲಿಂದ ಅದು ಪ್ರಾರಂಭವಾಗಿದೆ, ಇಲ್ಲಿಂದ ನಾವು ಏಳ್ಗೆ ಹೊಂದುತ್ತೇವೆ. ಇದು ಒಂದು ರಾಷ್ಟ್ರದ ಪ್ರಾಣ ಪ್ರತಿಷ್ಠಾಪನೆ, ಜನರ ಪ್ರಾಣ ಪ್ರತಿಷ್ಠಾಪನೆ, 500 ವರ್ಷಗಳ ಕತ್ತಲೆಯ ನಂತರ ಬೆಳಕಿನ ಪ್ರಾಣ ಪ್ರತಿಷ್ಠಾಪನೆ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.



