ಕಿಚ್ಚ ಸುದೀಪ್ (Kichcha Sudeep) ಅಭಿನಯದ 47ನೇ ಸಿನಿಮಾಗೆ ಕೊನೆಗೂ ಹೀರೋಯಿನ್ ಸಿಕ್ಕಿದ್ದಾರೆ. ಕೆಜಿಎಫ್ (KGF) ಖ್ಯಾತಿಯ ಶ್ರೀನಿಧಿ ಶೆಟ್ಟಿ (srinidhi Shetty). ಕಿಚ್ಚ 47 (Kichcha 47) ಸೆಟ್ಟೇರುವುದು ಮ್ಯಾಕ್ಸ್ (max) ಮುಗಿದ ಮೇಲೆ. ಈಗಾಗಲೇ ಮ್ಯಾಕ್ಸ್ ಟೀಸರ್ (max teaser) ಕಿಚ್ಚು ಹಚ್ಚಲಾಗಿದೆ. ಮ್ಯಾಕ್ಸ್ ಚಿತ್ರದಲ್ಲಿ ಶರತ್ ಕುಮಾರ್ (Sharath kumar) ಅವರ ಮಗಳು ವರಲಕ್ಷ್ಮಿ (actress Varalakshmi Sharath kumar) ನಟಿಸುತ್ತಿದ್ಧಾರೆ. ಮಾಣಿಕ್ಯದ (manikya) ನಂತರ ವರಲಕ್ಷ್ಮಿ ಮತ್ತೊಮ್ಮೆ ಸುದೀಪ್ (Sudeep) ಜೋಡಿಯಾಗುತ್ತಿದ್ಧಾರೆ. ಆದರೆ ಇದು ಶ್ರೀನಿಧಿ ಶೆಟ್ಟಿ (Shreenidhi Shetty) ಜೋಡಿಯ ಸುದ್ದಿ ಕಿಚ್ಚ 47 ಚಿತ್ರದ್ದು. ಸುದೀಪ್ ಅವರ 47ನೇ ಸಿನಿಮಾಗೆ ಸ್ವತಃ ಸುದೀಪ್ ಡೈರೆಕ್ಟರ್ ಕಂ ಹೀರೋ. ನಿರ್ಮಾಣ ಸತ್ಯಜ್ಯೋತಿ ಫಿಲಮ್ಸ್ನವರದ್ದು.
ಮಾರ್ಚ್ ವೇಳೆಗೆ ‘ಮ್ಯಾಕ್ಸ್’ ಸಿನಿಮಾ ತೆರೆಗೆ ಬರಲಿದೆ. ಅಷ್ಟರಲ್ಲಿ ಕಿಚ್ಚ47 ಚಿತ್ರೀಕರಣ ಕೂಡ ಆರಂಭವಾಗಲಿದೆ. ಶ್ರೀನಿಧಿ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವಿಚಾರವನ್ನು ಚಿತ್ರತಂಡ ಘೋಷಿಸಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚೆಲುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇಂತಹ ಸಮಯದಲ್ಲೇ ಕಿಚ್ಚ47 ಸಿನಿಮಾ ಸುದ್ದಿ ಹೊರಬಿದ್ದಿದೆ.
ಕೆಜಿಎಫ್ ನಂತರ ಶ್ರೀನಿಧಿ ಶೆಟ್ಟಿ ನಟಿಸಿರುವುದು ಒಂದೇ ಒಂದು ಸಿನಿಮಾ. ವಿಕ್ರಂ (Vikram) ಜೊತೆ ಕೋಬ್ರಾ (Cobra) ಸಿನಿಮಾದಲ್ಲಿ ಮಾತ್ರ. ಇದೀಗ ತೆಲುಗಿಗೂ ಕಾಲಿಟ್ಟಿರುವ ಶ್ರೀನಿಧಿ ಶೆಟ್ಟಿ, ತೆಲುಸು ಕದಾ (thelusu kadaa) ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ ಸುದೀಪ್ ಜೋಡಿಯಾಗುವ ಅವಕಾಶ ಅರಸಿ ಬಂದಿದೆ.
ಕಿಚ್ಚ47 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ರಾಕಿಭಾಯ್ ಜೋಡಿ ರೀನಾ ಆಗಿ ಶ್ರೀನಿಧಿ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಸುದೀಪ್ ಜೋಡಿಯಾಗಿ ಮತ್ತೆ ಕಮಾಲ್ ಮಾಡೋಕೆ ಬರ್ತಿದ್ದಾರೆ. ಮಂಗಳೂರು ಮೂಲಕ ಶ್ರೀನಿಧ ರೂಪದರ್ಶಿಯಾಗಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿರುವ ಚೆಲುವೆ 2016ರಲ್ಲಿ ಮಿಸ್ ದಿವಾ ಸ್ಪರ್ಧೆಯ ವಿಜೇತರಾಗಿದ್ದರು. ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆ, ಮಿಸ್ ಸುಪ್ರನ್ಯಾಷನಲ್ ಸೇರಿದಂತೆ ಹಲವು ಕಿರೀಟಗಳು ಆಕೆಯ ಮುಡಿಗೇರಿದೆ.



