ಸಂದೇಶ್ ಪ್ರೊಡಕ್ಷನ್ಸ್. ಸಂದೇಶ್ ನಾಗರಾಜ್ ಅವರು ಕಟ್ಟಿದ ಸಿನಿಮಾ ಸಂಸ್ಥೆ. ಈ ಸಂಸ್ಥೆಯಲ್ಲಿ ಹೆಚ್ಚಾಗಿ ನಿರ್ಮಾಣವಾಗಿದ್ದು ಅಂಬರೀಷ್ ಚಿತ್ರಗಳು. ಅದಾದ ಮೇಲೆ ದರ್ಶನ್ ಚಿತ್ರಗಳು. ಅಂಬರೀಷ್ ಜೊತೆ ಮಣ್ಣಿನ ದೋಣಿ, ಮೌನರಾಗ ಮೊದಲಾದ ಚಿತ್ರಗಳ ನಿರ್ಮಾಪಕರಾಗಿದ್ದವರು ಸಂದೇಶ್ ನಾಗರಾಜ್. ಅಂಬರೀಷ್ ಜೊತೆಗಿನ ಸ್ನೇಹಕ್ಕಾಗಿ ಅವರ ಮಗ ಅಭಿಷೇಕ್ ಅಂಬರೀಷ್ ಅವರನ್ನು ಲಾಂಚ್ ಮಾಡಿದ್ದು ಕೂಡಾ ಸಂದೇಶ್ ನಾಗರಾಜ್. ಅವರ ಮಗ ಸಂದೇಶ್ ಕೂಡಾ ಅದನ್ನು ಪಾಲಿಸಿಕೊಂಡು ಬಂದಿದ್ದವರು. ಐರಾವತ, ಪ್ರಿನ್ಸ್, ಅಂಬರೀಷ, ಅಮರ್, ಘೋಸ್ಟ್.. ಮೊದಲಾದ ಚಿತ್ರಗಳನ್ನು ನಿರ್ಮಾಣ ಮಾಡಿರುವ ಸಂದೇಶ್ ಪ್ರೊಡಕ್ಷನ್ಸ್, ಇದೇ ಮೊದಲ ಬಾರಿಗೆ ಸುದೀಪ್ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ.
ಈ ಚಿತ್ರಕ್ಕೆ ಡೈರೆಕ್ಟರ್ ಹೇಮಂತ್ ರಾವ್. ಬಹುತೇಕ ಕನ್ʻಫರ್ಮ್ ಆಗಿರುವ ಸುದ್ದಿಗೆ ಅಧಿಕೃತ ಮುದ್ರೆ ಬಿದ್ದಿಲ್ಲ. ಹೇಮಂತ್ ಕುಮಾರ್ ಕನ್ನಡದ ಸೆನ್ಸೇಷನಲ್ ಡೈರೆಕ್ಟರ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್, ಇತ್ತೀಚೆಗೆ ಎರಡು ಭಾಗಗಳಲ್ಲಿ ಬಂದು ಮೆಚ್ಚುಗೆ ಗಳಿಸಿದ್ದ ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ನಿರ್ದೇಶಕ. ಹಿಂದಿಯಲ್ಲಿ ಸಿದ್ಧವಾದ ಆನಂತರ ಹಲವು ಭಾಷೆಗಳಿಗೆ ರೀಮೇಕ್ ಕೂಡಾ ಥ್ರಿಲ್ಲರ್ ʻಅಂಧಾದುನ್ʼ ಸಿನಿಮಾದ ಕಥೆಗಾರರೂ ಹೌದು. ಹೀಗಾಗಿ ಡಿಫರೆಂಟ್ ಡೈರೆಕ್ಟರ್ ಹೇಮಂತ್ ಮತ್ತು ಸ್ಟೈಲಿಷ್ ಆಕ್ಟರ್ ಸುದೀಪ್ ಕಾಂಬಿನೇಷನ್ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರದ್ದು.
ಇತ್ತೀಚೆಗೆ ಬಿಡುಗಡೆಯಾಗಿದ್ದ ಶಿವರಾಜ್ ಕುಮಾರ್ ನಟಿಸಿದ್ದ ‘ಘೋಸ್ಟ್’ ಸಿನಿಮಾವನ್ನು ಸಹ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದರು. ಆ ಮೂಲಕ ಮೊದಲ ಬಾರಿಗೆ ಡಾ.ರಾಜ್ ಕುಟುಂಬದ ಜೊತೆಗೆ ಸಿನಿಮಾ ಮಾಡಿದ್ದರು. ಇದೀಗ ಇದೇ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ, ಮತ್ತೊಂದು ಬಿಗ್ ಸಿನಿಮಾ ಮಾಡುತ್ತಿದ್ದು, ಆ ಚಿತ್ರಕ್ಕೆ ಸುದೀಪ್ ಹೀರೋ.
ಸಂದೇಶ್ ನಾಗರಾಜ್ ಮತ್ತು ಎನ್ ಸಂದೇಶ್ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ, ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದು, ಸುದೀಪ್ ಕೂಡಾ ಕಥೆಗೆ ಓಕೆ ಎಂದಿದ್ದಾರೆ. ಅನುಮಾನವೇ ಇಲ್ಲ, ಇದೂ ಕೂಡಾ ದೊಡ್ಡ ಬಜೆಟ್ನ ಸಿನಿಮಾ ಆಗಿರಲಿದೆ.
ಕಿಚ್ಚ ಸುದೀಪ್ ನಟಿಸಿರುವ ‘ಮ್ಯಾಕ್ಸ್’ ಸಿನಿಮಾ ಬಹುತೇಕ ರೆಡಿಯಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ಬಳಿಕ, ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಪ್ರಾರಂಭವಾಗಲಿದೆ.
ಇತ್ತ ಸಂದೇಶ್ ಬ್ಯಾನರ್ ನಿರ್ಮಾಣದ ಪ್ರಭುದೇವ ನಟನೆಯ “ವೂಲ್ಫ್” & ಸೃಜನ್ ಲೋಕೇಶ್ ನಟಿಸಿರುವ ‘ಜಿಎಸ್‌ಟಿ’ ಸಿನಿಮಾದ ಶೂಟಿಂಗ್ ಕೆಲಸಗಳು ಮುಕ್ತಾಯವಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿವೆ. ಶಿವಣ್ಣ ಅಭಿನಯದಲ್ಲಿ ‘ಘೋಸ್ಟ್’ ಚಿತ್ರದ ಮುಂದಿನ ಭಾಗಕ್ಕೆ ಸಿದ್ಧತೆ ನಡೆಯುತ್ತಿದೆ. ಇವುಗಳ ಮಧ್ಯೆ “ಬೀರಬಲ್ 2” ಸಿನಿಮಾ ಸಹ ಸೆಟ್ಟೇರಲಿದೆ.



