ಕತ್ತೆ Katte ಅಂದ್ರೆ ಖುಷಿಯಾಗ್ತಾರೆ. ಯಾರ್ ಖುಷಿಯಾಗ್ಲಿಲ್ಲ ಅಂದ್ರೂ ರಕ್ಷಿತ್ ಶೆಟ್ಟಿ (Rakshith Shetty) ನಾಚ್ಕೋತಾರೆ. ಹಾಗಾಗಿಯೇ ಶಹಬ್ಬಾಸ್ ಕತ್ತೆ ಎಂದಾಗ ಕತ್ತೆಯಂತಹ ರಕ್ಷಿತ್ ಶೆಟ್ಟಿ ಅಲಿಯಾಸ್ ಮನು ಥ್ಯಾಂಕ್ಯೂ ಎನ್ನುತ್ತಾರೆ. ಮನುವನ್ನು ಕತ್ತೆ ಎಂದು ಮುದ್ದಿಸಿದ ಪ್ರಿಯಾ ಅಲಿಯಾಸ್ ರುಕ್ಮಿಣಿ ವಸಂತ್ (Rukmini Vasanth), ಸುರಭಿ ಅಲಿಯಾಸ್ ಚೈತ್ರಾ ಆಚಾರ್ (Chaithra Achar) ಥ್ರಿಲ್ಲಾಗ್ತಾರೆ. ಏಕಂದ್ರೆ ಕತ್ತೆ ಈಗ ಪ್ರೇಮಿಗಳ.. ಭಗ್ನಪ್ರೇಮಿಗಳ ಪ್ರೀತಿ ಪಾತ್ರ ಹೆಸರು.
ಕತ್ತೆ ಅನ್ನೋದು ಈಗ ಹುಡುಗಿಯರ ಪೆಟ್ ನೇಮ್. ತಾವು ಪ್ರೀತಿಸುವ ಹುಡುಗರನ್ನು ಹುಡುಗಿಯರು ಹೇಗ್ ಹೇಗೋ ಕರೆಯುತ್ತಾರೆ. ಹಾಗೆ ಕರೆಯುವ ಪದಗಳ ಸಾಲಿಗೆ ಹೊಸ ಸೇರ್ಪಡೆ ಕತ್ತೆ. ಸಪ್ತ ಸಾಗರದಾಚೆ ಎಲ್ಲೋ (Saptha Sagaradache ello) ಸಿನಿಮಾದ ಕೊಡುಗೆ ಇದು. ಚಿತ್ರ ಈಗ ಪ್ರೇಮಿಗಳ ಹೃದಯ ಗೆದ್ದಿದೆ. ಭಗ್ನಪ್ರೇಮಿಗಳ ಹೃದಯವನ್ನೂ ಗೆದ್ದಿದೆ. ಹಾಗೆಯೇ ಕಿಚ್ಚ ಸುದೀಪ್ (Kichcha sudeep) ಅವರನ್ನೂ ಗೆದ್ದಿದೆ.
ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ. ಇಂಥ ಸಿನಿಮಾ ಮಾಡಲು ಧೈರ್ಯ ತೋರಿಸಿದ ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ. ಹೇಮಂತ್ ರಾವ್ ಅವರು ಅದ್ಭುತ ವಿಷನ್ ಇರುವಂತಹ ನಿರ್ದೇಶಕ. ಕ್ಯಾಪ್ಟನ್ ಸ್ಥಾನದಲ್ಲಿ ಅವರ ಕೆಲಸ ಪರ್ಫೆಕ್ಟ್ ಆಗಿದೆ. ನಿಮ್ಮ ಮತ್ತು ನಿಮ್ಮ ತಂಡದ ಬಗ್ಗೆ ಹೆಮ್ಮೆ ಮೂಡಿದೆ. ಕತ್ತೆ’ಎಂದು ಸುದೀಪ್ ಅವರು ಪೋಸ್ಟ್ ಮಾಡಿದ್ದಾರೆ. ಸಿನಿಮಾ ತೋರಿಸಿದ ರಕ್ಷಿತ್ ಶೆಟ್ಟಿಗೆ ಸುದೀಪ್ ಅವರು ಧನ್ಯವಾದ ತಿಳಿಸಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾವನ್ನು ಸುದೀಪ್ ಅವರು ಮಾಸ್ಟರ್ ಪೀಸ್ ಎಂದು ಕರೆದಿದ್ದಾರೆ. ಆ ಮೂಲಕ ಅವರು ಇಡೀ ತಂಡವನ್ನು ಹುರಿದುಂಬಿಸಿದ್ದಾರೆ.
ಅಷ್ಟೇ ಅಲ್ಲ ಡೈರೆಕ್ಟರ್ ಹೇಮಂತ್ ರಾವ್, ನಟಿಯರಾದ ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಹೀಗೆ ತಂಡದ ಎಲ್ಲರಿಗೂ ಪ್ರತ್ಯೇಕವಾಗಿ ಶುಭ ಕೋರಿದ್ಧಾರೆ. ತುಂಬ ಗಟ್ಟಿಯಾದ ನಾಯಕಿ ಪಾತ್ರವನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಅವರು ತುಂಬ ಸಂಕೀರ್ಣವಾದ ಸುರಭಿ ಎಂಬ ಪಾತ್ರವನ್ನು ಬಹಳ ಸುಲಭವಾಗಿ ನಿಭಾಯಿಸಿದ್ದಾರೆ ಎಂದು ಸುದೀಪ್ ಹೊಗಳಿದ್ದಾರೆ. ಅವರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ.
ಚಿತ್ರತಂಡ ಸುದೀಪ್ ಅವರಿಗೆ ಥ್ಯಾಂಕ್ ಯೂ ಎಂದು ಧನ್ಯವಾದ ಅರ್ಪಿಸಿದೆ. ಸ್ಟಾರ್ ನಟರೊಬ್ಬರು ಸಿನಿಮಾವೊಂದನ್ನು ಈ ಮಟ್ಟಿಗೆ ಹೊಗಳುವುದು ಹಾಗೂ ಮೆಚ್ಚಿಕೊಳ್ಳೋದು ಯಾರಿಗೆ ತಾನೆ ಖುಷಿಯಾಗಲ್ಲ.
ಒಟ್ಟಿನಲ್ಲಿ ಸುದೀಪ್ ಸಪ್ತಸಾಗರದಾಚೆ ಎಲ್ಲೋ ತಂಡದ ಖುಷಿ ಹೆಚ್ಚಿಸಿದ್ಧಾರೆ.



