ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ದೆಹಲಿಗೆ ಹೋಗಿ ಬಂದಿದ್ದಾರೆ. ಸಿದ್ಧರಾಮಯ್ಯ ಶನಿವಾರ ವಾಪಸ್ ಬಂದು, ಮತ್ತೆ ಸೋಮವಾರ ದೆಹಲಿಗೆ ಹೋಗಿ ಬಂದಿದ್ದಾರೆ. ಸಿದ್ಧರಾಮಯ್ಯ ಅವರಿಗೆ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಿದೆ. ಡಿಕೆ ಶಿವಕುಮಾರ್‌ಗೆ ಆಗಿಲ್ಲ. ಉಳಿದಂತೆ ಇಬ್ಬರೂ ವೇಣುಗೋಪಾಲ್, ಸುರ್ಜೇವಾಲ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಇಬ್ಬರಿಗೂ ಖರ್ಗೆ ಹೇಳಿರೋದು ಒಂದೇ ಮಾತು. ವೇಯ್ಟ್ & ಸೀ.
ನವೆಂಬರ್ ಕ್ರಾಂತಿಯಲ್ಲೀಗ ಹೊಸ ಆಟ. ಡಿಕೆ ಹಠ ಬಿಡ್ತಿಲ್ಲ. ಸಿದ್ದು ಪಟ್ಟು ಬಿಡ್ತಿಲ್ಲ. ಇಷ್ಟೆಲ್ಲ ಆಗಿ ಇಬ್ಬರೂ ದೆಹಲಿ ಮುಖಂಡರನ್ನು ಭೇಟಿ ಮಾಡಿ ಬಂದಿದ್ದಾರೆ,
ಮಲ್ಲಿಕಾರ್ಜುನ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಏನಾಯ್ತು..?
ಡಿಕೆ ಶಿವಕುಮಾರ್ ಹೇಳಿರೊದು ಇಷ್ಟೇ. ಕಾಲಿಗೆ ಚಕ್ರ ಕಟ್ಕೊಂಡ್ ರಾಜ್ಯ ಸುತ್ತಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇನೆ. ಬೂತ್ ಮಟ್ಟದಲ್ಲಿ ಪಕ್ಷ ಕಟ್ಟೋಕೆ ನಾನೂ ನಿದ್ದೆ ಮಾಡ್ಲಿಲ್ಲ.ಪಕ್ಷದ ಕಾರ್ಯಕರ್ತರನ್ನೂ ನಿದ್ದೆ ಮಾಡೋಕೆ ಬಿಟ್ಟಿಲ್ಲ. ಈ ಸಲ ಕಾಂಗ್ರೆಸ್ 136 ಸ್ಥಾನ ಗೆಲ್ಲೋಕೆ ನಾನೇ ಕಾರಣ. ಸಿದ್ದರಾಮಯ್ಯಗೆ ಎರಡೆರಡು ಬಾರಿ ಅವಕಾಶ ಸಿಕ್ಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಪುನರ್ ರಚನೆ ಬೇಡ. ಹೈಕಮಾಂಡ್ ಕೊಟ್ಟ ಟಾಸ್ಕ್ ನಿಭಾಯಿಸಿ ಜೈಲಿಗೆ ಹೋಗಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ, ನನಗೆ ಕೊಟ್ಟ ಮಾತು ಈಡೇರಿಸಿ. ಈ ಅವಧಿಯಲ್ಲಿಯೇ ನಾನು ಸಿಎಂ ಆಗಬೇಕು, ಅವಕಾಶ ಕೊಡಿಸಿ ಎಂದಿದ್ದಾರೆ.
ಅದಕ್ಕೆ ಉತ್ತರ ಕೊಟ್ಟಿರುವ ಮಲ್ಲಿಕಾರ್ಜುನ ಖರ್ಗೆ ಪಕ್ಷ ಅಧಿಕಾರಕ್ಕೆ ಬರಲು ನೀವೂ ಕಾರಣ, ಅನುಮಾನ ಇಲ್ಲ. ಹೈಕಮಾಂಡ್ ಕೊಟ್ಟ ಎಲ್ಲ ಟಾಸ್ಕ್ ಈಡೇರಿಸಿದ್ದೀರಿ. ಸಂಘಟನೆ ಮಾಡಿದ್ದೀರಿ. ಆದರೆ.. ನೀನು, ಸಿದ್ದರಾಮಯ್ಯ ಒಟ್ಟಾಗಿ ಹೋಗಿದ್ರಿಂದಲೇ 136 ಸ್ಥಾನ ಬಂದಿದೆ. ನಿನಗೆ ಅವಕಾಶ ಸಿಗಲೇಬೇಕು. ಹಾಗಂತ ನಾಯಕತ್ವ ವಿಚಾರದಲ್ಲಿ ಸಮಸ್ಯೆ ಮಾಡಿಕೊಳ್ಳೋದು ಬೇಡ. ರಾಹುಲ್ ಗಾಂಧಿ ಅವರ ಮುಂದೆ ನಿನ್ನನ್ನ ಕೂರಿಸುತ್ತೇನೆ. ರಾಹುಲ್ ಗಾಂಧಿ ಬಳಿಯೇ ಚರ್ಚಿಸಿ ಫೈನಲ್ ಮಾಡಿಕೊಳ್ಳಿ ಎಂದು ಸಮಾಧಾನ ಮಾಡಿದ್ದಾರೆ.
ಖರ್ಗೆ ಮತ್ತು ಸಿದ್ದು ಮಧ್ಯೆ ಏನಾಯ್ತು..?
ಸಿದ್ದರಾಮಯ್ಯ ಅವರು ಖರ್ಗಗೆ ಅವರ ಎದುರು ಸಚಿವ ಸಂಪುಟ ಪುನರ್ ರಚನೆಗೆ ಅವಕಾಶ ಕೊಡಿ ಹಾಗೂ ಈ ಅವಧಿ ಪೂರ್ಣಗೊಳಿಸಲು ನನಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ.. ಸದ್ಯದ ಬೆಳವಣಿಗೇಲಿ ಕೆಪಿಸಿಸಿ ಅಧ್ಯಕ್ಷರನ್ನ ಬದಲಾವಣೆ ಮಾಡಿ. 2028ಕ್ಕೂ ನಾವೇ ಅಧಿಕಾರಕ್ಕೆ ಬರ್ತಿವೆ, ಅದರಲ್ಲಿ ಡೌಟೇ ಇಲ್ಲ. ಆಗ ಡಿ.ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ ಎಂದು ವಾದಿಸಿದ್ದಾರೆ.
ಆಗ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಪುನರ್ ರಚನೆ ಮಾಡಿ.. ಬೇಡ ಅನ್ನಲ್ಲ. ಆದ್ರೆ, ಜನವರಿವರೆಗೂ ಪುನರ್ ರಚನೆ ಬೇಡ.. ಅಷ್ಟೇ. ಈಗ ಪುನರ್ ರಚನೆ ಮಾಡಿದ್ರೆ ಅದರ ನೆಗೆಟಿವ್ ಆಗುವ ಭಯ ಇದೆ. ಸಂಪುಟದಿಮದ ಹೊರಬಿದ್ದೋರು, ಸ್ಥಾನ ಸಿಗದವರಿಂದ ಅಸಮಾಧಾನ ಶುರುವಾಗುತ್ತೆ. ರಾಜ್ಯದಲ್ಲಿ ನೀವು, ಡಿ.ಕೆ.ಶಿವಕುಮಾರ್ ಇಬ್ರೂ ಒಟ್ಟಾಗಿ ಹೋಗ್ಬೇಕು. ಪಕ್ಷ ಉಳಿದ್ರೆ ನಾವು, ಹೀಗಾಗಿ ಇಬ್ಬರ ನಡುವೆ ಮನಸ್ತಾಪ ಬೇಡ ಎಂದಿದ್ದಾರೆ.
ಅಲ್ಲಿಗೆ ಇಬ್ಬರನ್ನೂ ಸಮಾಧಾನಗೊಳಿಸಿ ವಾಪಸ್ ಕಳಿಸಿದ್ದಾರೆ. ಮುಂದಿನ ನಿರ್ಧಾರ ರಾಹುಲ್ ಗಾಂಧಿ ಕೈಲಿದೆ.



