ʻಕೇರಳ ಸ್ಟೋರಿ 2ʼ ಸಿನಿಮಾ. ಫೆಬ್ರವರಿ 27ಕ್ಕೆ ರಿಲೀಸ್ ಆಗಬೇಕು. ಟ್ರೇಲರ್ ಹಲವರ ಹೃದಯಕ್ಕೆ ನಾಟಿದೆ. ಕನ್ನಡದಲ್ಲಿಯೂ ರಿಲೀಸ್ ಆಗಿರುವ ಟ್ರೇಲರ್‌ನಲ್ಲಿ ಕೆಲವು ದೃಶ್ಯಗಳು ಕಸಿವಿಸಿಯಾಗುವಂತಿವೆ. ಆದರೆ.. ಇದು ಸತ್ಯಕಥೆ ಆಧರಿತ ಸಿನಿಮಾ. ಚಿತ್ರದಲ್ಲಿ ನಾಯಕಿಗೆ ಬಲವಂತವಾಗಿ ಬೀಫ್ ತಿನ್ನಿಸುವ ದೃಶ್ಯ ಇದೆ. ಆದರೆ.. ಇದು ಕಾಮಿಡಿ ಸೀನ್ ಎಂಬಂತೆ ಬಿಂಬಿಸಲಾಗುತ್ತಿದೆ.
ಆಗಿರುವುದು ಏನೆಂದರೆ.. ಮಲಯಾಳಿ ಬಳಕೆದಾರರು ‘ಬೀಫ್–ಪರೊಟಾ’ ಉಲ್ಲೇಖಗಳೊಂದಿಗೆ ಟ್ರೋಲ್ ಮಾಡ್ತಿದ್ದಾರೆ. ಟ್ರೇಲರ್‌ನಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದ ಹಿಂದೂ ನಾಯಕಿಗೆ ಬಲವಂತವಾಗಿ ಬೀಫ್ ತಿನ್ನಿಸಲಾಗುತ್ತದೆ. ಹಸಿವಿನಿಂದ ಸತ್ತರೂ ಬೀಫ್ ತಿನ್ನುವುದಿಲ್ಲ ಎಂದು ಹಠ ಹಿಡಿಯುವ ನಾಯಕಿ, ಬೀಫ್ ಇದ್ದ ತಟ್ಟೆಯನ್ನು ಒದೆಯುತ್ತಾಳೆ. ಅವಳಿಗೆ ಕೈಕಾಲು ಕಟ್ಟಿ, ಮೂಗನ್ನು ಹಿಡಿದು ಬಲವಂತವಾಗಿ ಬೀಫ್ ತಿನ್ನಿಸುವ ಸೀನ್ ಇದೆ. ಇದು ಕೇರಳದ ಕಲ್ಚರ್‌ಗೆ ವಿರುದ್ಧವಂತೆ. ವಾಸ್ತವತೆಗೆ ದೂರವಂತೆ.
ಹಲವರು ಬೀಫ್ ತಿನ್ನಿಸುವ ವಿಡಿಯೋ ಹಂಚಿಕೊಂಡಿದ್ದರೆ, ಇನ್ನೂ ಕೆಲವರು ಚಿತ್ರದಲ್ಲಿ ನಾಯಕಿಗೆ ಪರೋಟಾ ಜೊತೆ ಬೀಫ್ ಕೊಟ್ಟಿಲ್ಲ. ಅದಕ್ಕೆ ಅವಳು ತಿಂದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಕೇರಳದಲ್ಲೇನದರೂ ಬಲವಂತವಾಗಿ ಬೀಫ್ ತಿನ್ನಿಸುತ್ತೇನೆ ಎಂದರೆ ಅರ್ಧಕ್ಕರ್ಧ ಕೇರಳದ ಜನ ಕ್ಯೂನಲ್ಲಿ ನಿಲ್ಲುತ್ತಿದ್ದರು. ನಮಗೂ ಬೀಫ್ ಕೊಡಿ ಎಂದು ಬೇಡುತ್ತಿದ್ದರು ಎಂದು ಟೀಕಿಸಿದ್ದಾರೆ. ಅಲ್ಲದೆ ಮಲಯಾಳಂನ ಗೋಧಾ, ಪ್ರೇಮಂ, ಹೃದಯಂ.. ನಂತಹ ಹಿಟ್ ಚಿತ್ರಗಳಲ್ಲಿ ಬೀಫ್ ತಿನ್ನು್ ದೃಶ್ಯಗಳಿವೆ ಎಂಬುದನ್ನು ನೆನಪಿಸಿದ್ದಾರೆ.
ಟ್ರೇಲರ್ ಬಂದಾಗಲೇ ಕಾಂಟ್ರವರ್ಸಿ ಗ್ಯಾರಂಟಿ ಎಂದು ನಿರೀಕ್ಷೆಯಿತ್ತು. ನಿರೀಕ್ಷೆಯಂತೆಯೇ ಸಿನಿಮಾ ವಿವಾದ ಸೃಷ್ಟಿಸಿದೆ. ಟೀಕೆ, ಮೀಮ್‌ಗಳ ಮಧ್ಯೆ ಚಿತ್ರದ ವಿರುದ್ಧ ಕೇರಳ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ. ಸಿನಿಮಾದಲ್ಲಿ ಕೋಮುವಾದದ ಅಂಶಗಳು ಇವೆ ಎಂಬ ಆರೋಪದಲ್ಲಿ ಸಿನಿಮಾ ನಿಷೇಧಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.
ಕಣ್ಣೂರಿನ ಶ್ರೀದೇವ್ ಎಂಬುವರು ‘ದಿ ಕೇರಳ ಸ್ಟೋರಿ 2’ ಸಿನಿಮಾ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸಿನಿಮಾದಲ್ಲಿ ಕೋಮು ಗಲಭೆಗೆ ಕಾರಣ ಆಗುವಂತಹ ಅಂಶಗಳು ಇವೆ. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಬಹುದು ಎಂದು ವಾದಿಸಿದ್ದಾರೆ. ನಿಮಾಗೆ ಪ್ರಮಾಣಪತ್ರ ನೀಡಿರುವ ಸೆನ್ಸಾರ್ ಮಂಡಳಿಯನ್ನೂ ಪ್ರಶ್ನೆ ಮಾಡಿದ್ದಾರೆ.
ಕೇರಳದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಲಾಗುತ್ತಿದೆ ಹಾಗೂ ಅವರಿಗೆ ಹಿಂಸೆ ನೀಡಲಾಗುತ್ತಿದೆ ಎಂಬುದನ್ನು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಆದರೆ ಇದನ್ನು ಅನೇಕರು ವಿರೋಧಿಸಿದ್ದಾರೆ. ಅರ್ಜಿ ಸ್ವೀಕರಿಸಿರುವ ನ್ಯಾಯಾಲಯವು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದೆ. ಫೆಬ್ರವರಿ 24ರಂದು ವಿಚಾರಣೆ ನಡೆಯಲಿದೆ. ಸಿನಿಮಾ ರಿಲೀಸ್ ಆಗಬೇಕಿರುವುದು ಫೆಬ್ರವರಿ 27ಕ್ಕೆ.
ಇನ್ನು ಕೇರಳ ಸ್ಟೋರಿ 2 ಚಿತ್ರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್, ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ವಿರೋಧಿಸಿದ್ದಾರೆ. ಕೇರಳದ ಜಾತ್ಯತೀತ ಮೌಲ್ಯಗಳಿಗೆ ವಿಷಕಾರುವ, ಧಾರ್ಮಿಕ ಸೌಹಾರ್ಧತೆಗೆ ಧಕ್ಕೆ ಅಂಶಗಳಿವೆ. ಹೀಗಾಗಿ ಚಿತ್ರವನ್ನು ಬಹಿಷ್ಕರಿಸಿ ಎಂದು ಜನತೆಗೆ ಸಿಎಂ ಪಿಣರಾಯಿ ಕರೆ ನೀಡಿದ್ದಾರೆ. ಕೇರಳ ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ʻಕೇರಳ ಸ್ಟೋರಿ 2ʼ ಚಿತ್ರವನ್ನು ಸಮರ್ಥನೆ ಮಾಡಿದ್ದಾರೆ.
ʻದಿ ಕೇರಳ ಸ್ಟೋರಿ 2ʼ ಚಿತ್ರವನ್ನು ವಿಪುಲ್ ಅಮೃತ್‌ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಬಲವಂತದ ಧಾರ್ಮಿಕ ಮತಾಂತರ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳ ಸುತ್ತದ ಕಥೆಯನ್ನು ಈ ಸಿನಿಮಾ ಹೊಂದಿದೆ. ಉಲ್ಕಾ ಗುಪ್ತಾ, ಐಶ್ವರ್ಯಾ ಓಜಾ, ಅದಿತಿ ಭಾಟಿಯಾ ನಟಿಸಿದ್ದಾರೆ.



