ʻಕೇರಳ ಸ್ಟೋರಿ 2ʼ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್ ಹೊರಬರುತ್ತಿದ್ದಂತೆ ಸಂಚಲನ ಸೃಷ್ಟಿಸಿದೆ. ಕಾರಣ.. ಟ್ರೇಲರ್‌ನಲ್ಲಿರುವ ದೃಶ್ಯಗಳು. ಸಿನಿಮಾ ಕಟ್ಟುಕಥೆ ಎನ್ನುವವರಿಗೆ, ಸಿನಿಮಾದಲ್ಲಿರುವ ಕಥೆ, ದೃಶ್ಯಗಳ ವರದಿಗಳ ಕ್ಲಿಪ್ಪಿಂಗ್ ತೋರಿಸಿ ಸಮರ್ಥನೆ ನಡೆಯುತ್ತಿದೆ. ಚಿತ್ರದ ಟ್ರೇಲರಿನಲ್ಲಿರುವ ಒಂದೊಂದು ಸೀನ್ ಕೂಡಾ ಬೆಚ್ಚಿ ಬೀಳಿಸುತ್ತದೆ. ನನ್ನ ಹುಡುಗ ʻ..ʼ ಅಂತಹವನಲ್ಲ ಎಂದು ಪ್ರೀತಿಸುವ ಹಿಂದೂ ಹುಡುಗಿಯರು ಯಾವೆಲ್ಲ ರೀತಿಯ ನರಕ ಅನುಭವಿಸುತ್ತಾರೆ ಎನ್ನುವುದು ಕಥೆ. ಸಿನಿಮಾ ಟ್ರೇಲರ್‌ನಲ್ಲಿ..
ಮುಂದಿನ 25 ವರ್ಷಗಳಲ್ಲಿ ಭಾರತವು ಇಸ್ಲಾಮಿಕ್ ಸ್ಟೇಟ್ ಆಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಸಂದೇಶದೊಂದಿಗೇ ಕಥೆ ಆರಂಭ. ಕೇರಳ, ಮಧ್ಯಪ್ರದೇಶ, ರಾಜಸ್ತಾನದಲ್ಲಿ ನಡೆಯುವ ಕಥೆಗಳಿವೆ.
ಮತಾಂತರ ಮಾಡುವ, ಶೋಷಿಸುವ ಉದ್ದೇಶ ಇಟ್ಟುಕೊಂಡೇ ಮುಸ್ಲಿಂ ಹುಡುಗರು, ಹಿಂದೂ ಯುವತಿಯನ್ನು ಲವ್ ಮಾಡ್ತಾರೆ ಎಂಬ ದೃಶ್ಯವೂ ಕಥೆಯಲ್ಲಿದೆ.
ಹಿಂದೂ ಹುಡುಗಿಯರನ್ನು, ಅದರಲ್ಲೂ ಬ್ರಾಹ್ಮಣ ಹುಡುಗಿಯರನ್ನು ಲವ್ ಮಾಡಿ, ಹಿಂಸೆ ಕೊಡಬೇಕು ಎಂಬ ಡೈಲಾಗ್ ಇದೆ. ಪ್ರೀತಿಯ ಬಲೆಯಲ್ಲಿ ಕೆಡವಿ, ಮದುವೆ ಮಾಡಿಕೊಂಡು ಅವರ ಸ್ವಾತಂತ್ರ್ಯ ಕಿತ್ತುಕೊಂಡು ಹಿಂಸೆ ನೀಡುವ ದೃಶ್ಯಗಳಿವೆ.
ರೀಲ್ಸ್ ಮಾಡೋದಕ್ಕೆ ಅವಕಾಶ ಕೊಡದೆ ಹಿಂಸಿಸುವ, ನಾಸ್ತಿಕ ಎಂದು ಹೇಳಿ ಮೋಸ ಮಾಡುವ ಗಂಡಂದಿರ ಸೀನ್ಸ್ ಚಿತ್ರದಲ್ಲಿವೆ. ಇಡೀ ಕುಟುಂಬವೇ ಹಿಂದೂ ಹುಡುಗಿಗೆ ದನದ ಮಾಂಸವನ್ನು ಮೂಗು ಹಿಡಿದು ಬಲವಂತವಾಗಿ ತಿನ್ನಿಸುವ ದೃಶ್ಯ ಪ್ರೇಕ್ಷಕರನ್ನು ಕೆರಳಿಸುವಂತಿದೆ. ಮದುವೆಯಾಗಿ.. ಆಕೆಯ ಮೇಲೆ ಬೇರೊಬ್ಬರಿಂದ ಅತ್ಯಾಚಾರ ನಡೆಸುವ ದೃಶ್ಯವೂ ಸಿನಿಮಾ ಟ್ರೇಲರ್‌ನಲ್ಲಿದೆ. ಅಷ್ಟೇ ಅಲ್ಲ, ಲವ್ ಜಿಹಾದ್ ಮಾಡಬೇಕು ಎಂದು ಮೌಲ್ವಿಯೊಬ್ಬ ಘೋಷಿಸುವ ದೃಶ್ಯವೂ ಇದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರು ನಡೆಸುವ ಹೋರಾಟದ ಕಥೆಯೂ ಸಿನಿಮಾದಲ್ಲಿದೆ.
ಅನುಮಾನವೇ ಇಲ್ಲ, ಇದು ಕಾಂಟ್ರವರ್ಸಿ ಗ್ಯಾರಂಟಿ ಸಿನಿಮಾ. ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ಟ್ರೇಲರ್ ತುಂಬ ವಿವಾದಾತ್ಮಕ ವಿಷಯಗಳೇ ಇವೆ. ವಿಫುಲ್ ಅಮೃತ್ಲಾಲ್ ಶಾ ನಿರ್ಮಾಣದ ಸಿನಿಮಾದಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಊಜಾ, ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಲವ್ ಜಿಹಾದ್ ಕುರಿತಾದ ಕಥೆ. ಲವ್ ಜಿಹಾದ್ ಜಾಲಕ್ಕೆ ಬಲಿಯಾಗುವ ಹಿಂದೂ ಯುವತಿಯರಾಗಿ ಈ ನಟಿಯರು ನಟಿಸಿದ್ದಾರೆ.
ಟ್ರೇಲರ್‌ನಲ್ಲೇ ಇಷ್ಟು ಕಾಂಟ್ರವರ್ಸಿನ್ ಸೀನ್ಸ್ ಇರುವಾಗ ಸಿನಿಮಾದಲ್ಲಿ ಏನೇನೆಲ್ಲ ಇರಬಹುದು ಎಂಬ ಪ್ರಶ್ನೆಯಂತೂ ಇದೆ. ಕೇರಳ ಸ್ಟೋರಿ ಸಿನಿಮಾ ಬಂದಾಗ ದೇಶದ ಕೆಲವು ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ಬ್ಯಾನ್ ಆಗಿತ್ತು. ಈಗ ಕೇರಳ ಎಲೆಕ್ಷನ್ ಹತ್ತಿರದಲ್ಲಿದೆ. ಹೀಗಾಗಿ ಕೇರಳ ಸ್ಟೋರಿ 2 ಚಿತ್ರವೂ ವಿವಾದವಾಗುತ್ತದೆ ಎನ್ನುವ ನಿರೀಕ್ಷೆಯಂತೂ ಇದೆ.
ಮೊದಲ ಭಾಗದಂತೆಯೇ ಇದು ಲವ್ ಜಿಹಾದ್, ಮತಾಂತರ, ಮೋಸದ ಮದುವೆ, ಸೆಕ್ಸ್ ವಂಚನೆ ಸುತ್ತಲೇ ಕಥೆ ಇದೆ. ಬೀಫ್ ತಿನ್ನಿಸುವ ಸೀನ್ ನೋಡಿದ ಹಿಂದೂಗಳು ಇದು ಸತ್ಯ ಎನ್ನುತ್ತಿದ್ದರೆ, “ಇಸ್ಲಾಮೋಫೋಬಿಯಾ” ಮತ್ತು “ನಫರತ್ ಪ್ರಚಾರ” ಎನ್ನುತ್ತಿರುವುದು ಕೇರಳ ಸ್ಟೋರಿ 2 ವಿರೋಧಿಗಳು.
“ಹಿಂದೂ ಹುಡುಗಿಯರನ್ನು ಟ್ರ್ಯಾಪ್ ಮಾಡಿದರೆ ಹಣ ಸಿಗುತ್ತದೆ” ಎಂಬ ಡೈಲಾಗ್/ಸೀನ್ ಇದೆ. ಇದು ಬೇರೆಯದೇ ನರೇಟಿವ್. ಒಟ್ಟಿನಲ್ಲಿ ಕೇರಳ ಸ್ಟೋರಿ 02, ವಿವಾದವಾಗಿಯೇ ರಿಲೀಸ್ ಆಗುತ್ತದೆ. ಫೆಬ್ರವರಿ 27ಕ್ಕೆ ಸಿನಿಮಾ ರಿಲೀಸ್.



