ನಾಡಪ್ರಭು ಕೆಂಪೇಗೌಡ ಎಂದರೆ ಬೆಂಗಳೂರಿನ ನಿರ್ಮಾತೃ. ಅಷ್ಟೇ ಅಲ್ಲ, ಒಕ್ಕಲಿಗ ಸಮುದಾಯದ ಹೆಮ್ಮೆಯ ಅರಸ. ಆದರೆ ಅಂತಹ ಕೆಂಪೇಗೌಡರ ಜಯಂತಿಯಲ್ಲಿ ರಾಜಕೀಯ ನುಸುಳಿ ಬಂದಿದೆ. ಪಕ್ಷಗಳು ಯಾವುದೇ ಇರಲಿ, ಕೆಂಪೇಗೌಡರ ಜಯಂತಿಯ ದಿನದಂದು ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಿಗೇ ಕಾಣಿಸಿಕೊಳ್ತಿದ್ದವು. ಕೆಂಪೇಗೌಡ ಎಂದರೆ ಆತ ರಾಜಕೀಯವನ್ನು ಮೀರಿದ ಮಹಾನಾಯಕ ಎನ್ನುವುದೇ ಕಾರಣ. ಆದರೆ, ಈ ಬಾರಿ ಕೆಂಪೇಗೌಡ ಜಯಂತಿಯಲ್ಲೂ ರಾಜಕೀಯ ಎಂಟ್ರಿ ಕೊಟ್ಟಿದೆ.
ನಾಡಪ್ರಭು ಕೆಂಪೇಗೌಡರ ಜಯಂತಿಗೆ ಒಕ್ಕಲಿಗ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಒಕ್ಕಲಿಗರ ಸಂಘ ತಿರುಗಿ ಬಿದ್ದಿದೆ.ಜ್ಯದಲ್ಲಿ ಅದ್ಧೂರಿಯಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದರೂ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ಇಲ್ಲ.
ದೇವೇಗೌಡ ಮಾಜಿ ಪ್ರಧಾನಿ ಹಾಗೂ ಕುಮಾರಸ್ವಾಮಿ ಅವರೀಗ ಕೇಂದ್ರ ಸಚಿವ. ಹೀಗಿದ್ದರೂ ರಾಜ್ಯ ಸರ್ಕಾರದಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಜಯಂತಿಗೆ ಒಕ್ಕಲಿಗ ನಾಯಕರಿಗೇ ಆಹ್ವಾನ ನೀಡಿಲ್ಲ ಎಂಬ ದೂರು ಕೇಳಿಬಂದಿದೆ.
ಈ ಬಾರಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಸಾಧನೆಯನ್ನು ರಾಜ್ಯದ ಎಲ್ಲ ಮಕ್ಕಳಿಗೂ ತಿಳಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಚರ್ಚಾ ಸ್ಪರ್ಧೆ ಏರ್ಪಡಿಸಿದೆ. ಬಿಬಿಎಂಪಿ ವತಿಯಿಂದ 2.40 ಕೋಟಿ ರೂ. ಖರ್ಚು ಮಾಡಿಸಲಾಗುತ್ತಿದೆ. ಆದರೆ ಒಕ್ಕಲಿಗ ಸಮುದಾಯದ ಉನ್ನತ ನಾಯಕರಿಗೇ ಆಹ್ವಾನ ನೀಡಿಲ್ಲ.
ರಾಜ್ಯದಿಂದ ದೆಹಲಿ ಗದ್ದುಗೆ ಮೇಲೆ ಕುಳಿತ ಏಕೈಕ ಕನ್ನಡಿಗ ಹೆಚ್.ಡಿ. ದೇವೇಗೌಡ. ಅವರು ಒಕ್ಕಲಿಗ ಸಮುದಾಯದವರು. ಅವರನ್ನೂ ಆಹ್ವಾನಿಸದ ರಾಜ್ಯ ಸರ್ಕಾರದ ಕ್ರಮಕ್ಕೆ ಒಕ್ಕಲಿಗರ ಸಂಘ ತಿರುಗಿ ಬಿದ್ದಿದೆ. ರಾಜ್ಯ ಒಕ್ಕಲಿಗರ ಸಂಘದಿಂದ ಸರ್ಕಾರದ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದೆ.



