ಅಡ್ವಾನ್ಸ್ ಬುಕ್ಕಿಂಗ್ʻನಲ್ಲೇ 1 ಕೋಟಿ ದಾಖಲೆ ಬರೆದಿದೆ. ಕಾಟೇರ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಬಿಟ್ಟ ಕಣ್ಣು ಬಿಟ್ಟಂತೆ ಕಾಯುತ್ತಿದ್ದಾರೆ. ನಿದ್ರೆ ಕೂಡಾ ಮಾಡದೆ ಕಾಯುತ್ತಿರುವ ಫ್ಯಾನ್ಸ್, ಕಾಟೇರದ ಚಾಲೆಂಜಿಂಗ್ ದಾಖಲೆ ಸೃಷ್ಟಿಸಿದ್ದಾರೆ. ಚಿತ್ರದ ಮಿಡ್ ನೈಟ್ ಹಾಗೂ ಮಾರ್ನಿಂಗ್ ಶೋಗಳು (10.30ಕ್ಕೆ ಶುರುವಾಗುವ ಮಾರ್ನಿಂಗ್ ಶೋಗಳಲ್ಲ. ಅರ್ಲಿ ಮಾರ್ನಿಂಗ್ ಶೋಗಳು) ದಾಖಲೆಯನ್ನೇ ಬರೆದುಬಿಟ್ಟಿವೆ.
ಡಿ.29ಕ್ಕೆಲ್ಲ ಥಿಯೇಟರ್ ಆಕ್ರಮಿಸೊ ಕಾಟೇರ ಚಿತ್ರದ ಸೆನ್ಸೇಷನ್ ಸಖತ್ತಾಗಿದೆ. ಎಷ್ಟರಮಟ್ಟಿಗೆಂದರೆ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ದಾಖಲೆ ಬರೆಯುತ್ತಿದ್ದು, ಅದರಲ್ಲಿಯೇ ಒಂದು ಕೋಟಿ ಕಲೆಕ್ಷನ್ ದಾಟಿದೆ. ಕನ್ನಡದಲ್ಲಿಯೇ ತಯಾರಾದ ಕನ್ನಡದಲ್ಲಿ ಮಾತ್ರವೇ ರಿಲೀಸ್ ಆಗುತ್ತಿರುವ ಚಿತ್ರವೊಂದು ಇಷ್ಟು ಬಿಸಿನೆಸ್ ಮಾಡಿರುವುದು ದಾಖಲೆ ಎನ್ನುತ್ತಿದೆ ಕಾಟೇರ ಟೀಂ.
ಕಾಟೇರ ಟೀಂ ಹೇಳುತ್ತಿರುವ ಪ್ರಕಾರ ಚಿತ್ರದ 50 ಸಾವಿರಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಆಗಿವೆ. ಅರೆ.. 50 ಸಾವಿರ ಅಷ್ಟೇನಾ ಎನ್ನಬೇಡಿ. ಕಾಟೇರ ಟೀಂ ಕೊಟ್ಟಿರುವ ಲೆಕ್ಕದ ಪ್ರಕಾರ ಕಾಟೇರ ಚಿತ್ರ ಮಧ್ಯರಾತ್ರಿ ಹಾಗೂ ಮುಂಜಾನೆ ಶೋಗಳಿರ್ತವಲ್ಲ, ಆ ಶೋಗಳ ಟಿಕೆಟ್ ಲೆಕ್ಕ ಮಾತ್ರ. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ದೊಡ್ಡಬಳ್ಳಾಪುರ ಸೇರಿದಂತೆ ಹಲವು ಕಡೆ ಅರ್ಲಿ ಮಾರ್ನಿಂಗ್/ಮಿಡ್ ನೈಟ್ ಶೋ ಟೈಂ ಫಿಕ್ಸ್ ಆಗಿದೆ.
ಬೆಂಗಳೂರು ಪ್ರಸನ್ನ : ಬೆಳಗ್ಗೆ 5 ಗಂಟೆ ಹಾಗೂ 9.30 ಗಂಟೆಯ ಶೋ
ಬೆಂಗಳೂರು ಅನುಪಮ : ಬೆಳಗ್ಗೆ 6 ಗಂಟೆ ಹಾಗೂ 10 ಗಂಟೆ ಶೋ
ಬೆಂಗಳೂರು ಮೋಹನ್ ಥಿಯೇಟರ್ : ಬೆಳಗ್ಗೆ 5.30 ಗಂಟೆಯ ಶೋ
ಬೆಂಗಳೂರು ಕಮಲಾನಗರ ವೀರಭದ್ರೇಶ್ವರ : ಬೆಳಗ್ಗೆ 6 ಗಂಟೆ ಶೋ
ಮೈಸೂರು ರಾಜ್ ಕಮಲ್ : ಬೆಳಗ್ಗೆ 6.30 ಹಾಗೂ 10 ಗಂಟೆಯ ಶೊಗಳು
ತುಮಕೂರು ಮಾರುತಿ : ಮುಂಜಾನೆ 1 ಗಂಟೆಯ ಶೋ (ಮಿಡ್ ನೈಟ್)
ದೊಡ್ಡಬಳ್ಳಾಪುರ ವೈಭರ್ : ಬೆಳಗ್ಗೆ 5 ಗಂಟೆ ಶೋ ಇದೆ.
ಎಲ್ಲ ಕಡೆಯೂ ಹೌಸ್ ಫುಲ್ ಆಗಿರುವುದು ದಾಖಲೆಯಾದರೆ, ಕಾಟೇರ ಚಿತ್ರದಿಂದ ಗುರು ದೇಶಪಾಂಡೆ ಮತ್ತೊಮ್ಮೆ ವಿತರಕರಾಗಿ ಬರುತ್ತಿದ್ಧಾರೆ. ನಿರ್ದೇಶಕರಾಗಿ ಗೆದ್ದ ಮೇಲೆ ವಿತರಣೆ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದ ಗುರು ದೇಶಪಾಂಡೆ, ಮತ್ತೊಮ್ಮೆ ಡಿಸ್ಟ್ರಿಬ್ಯೂಷನ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ಗುರು ದೇಶಪಾಂಡೆ ವಿತರಣೆ ಮಾಡಿದ ಚಿತ್ರಗಳೆಲ್ಲ ಸೂಪರ್ ಸಕ್ಸಸ್ ಆಗುತ್ತವೆ ಎನ್ನುವುದು ಚಿತ್ರರಂಗದವರ ನಂಬಿಕೆ.



