ಕರಟಕ ದಮನಕ ಕೂಡಾ ಯಶಸ್ವಿಯಾಗಿದೆ. ಶಿವಣ್ಣ ಪ್ರಭುದೇವ ಯೋಗರಾಜ್ ಭಟ್ ಕಾಂಬಿನೇಷನ್ನಿನ ಚಿತ್ರವನ್ನ ಪ್ರೇಕ್ಷಕರು ಶಿಳ್ಳೆ ಹೊಡೆದು ಸ್ವಾಗತಿಸಿದ್ಧಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಹೃದಯಕ್ಕೆ ಹತ್ತಿರವಾಗಿದೆ ಕರಟಕ ದಮನಕ.
ಈ ಹಿನ್ನೆಲೆಯಲ್ಲಿ ಕರಟಕ ದಮನಕ ಚಿತ್ರತಂಡ ಶಿವಣ್ಣ, ಯೋಗರಾಜ್ ಭಟ್ಟರ ಲೀಡರ್ ಶಿಪ್ಪಿನಲ್ಲಿ ಉತ್ತರ ಕರ್ನಾಟಕ ಯಾತ್ರೆ ಹೊರಟಿದೆ. ಇದು ವಿಜಯ ಯಾತ್ರೆ.
ಮಾರ್ಚ್ 11ನೇ ಸೋಮವಾರದಂದು ಬೆಳಗ್ಗೆ 10ಕ್ಕೆಲ್ಲ ಚಿತ್ರದುರ್ಗದಲ್ಲಿರ್ತಾರೆ. 12 ಗಂಟೆಯ ಹೊತ್ತಿಗೆ ದಾವಣಗೆರೆಯಲ್ಲಿರ್ತಾರೆ.
ಸಂಜೆ 3.30ರ ಹೊತ್ತಿಗೆ ಬಳ್ಳಾರಿಯಲ್ಲಿರೋ ಕರಟಕ ದಮನಕ ಟೀಂ, ಸಂಜೆ 6 ಗಂಟೆಯ ಹೊತ್ತಿಗೆಲ್ಲ ಹೊಸಪೇಟೆಯಲ್ಲಿರುತ್ತೆ.
ನಾಳೆ ಅಂದ್ರೆ ಮಾರ್ಚ್ 12ನೇ ತಾರೀಕು ಬೆಳಗಾವಿ ಮತ್ತು ನಿಪ್ಪಾಣಿಗೆ ಬರ್ತಾರೆ. ಬೆಳಗ್ಗೆ 10ರಿಂದ 12 ಗಂಟೆಯ ಒಳಗೆ. ನಿಪ್ಪಾಣಿ ಮುಗಿಸಿದವರೇ.. ಹುಬ್ಬಳ್ಳಿಗೆ ಹೊರಡ್ತಾರೆ. ಮಧ್ಯಾಹ್ನ 1.30ರಿಂದ ಸಂಜೆ 4 ಗಂಟೆಯವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿಯೇ ರೌಂಡ್ಸ್ ಹಾಕುತ್ತೆ.
ಮತ್ತೆ ಸಂಜೆ 6 ಗಂಟೆಗೆ ಹೊತ್ತಿಗೆ ರಾಣೇಬೆನ್ನೂರಿಗೆ ಬರುತ್ತೆ ಕರಟಕ ದಮನಕ ಟೀಂ.



