ಕಾಂತಾರ (kanthara) ಚಿತ್ರವನ್ನು ಕಾಡುತ್ತಿದ್ದ ವರಾಹರೂಪಂ.. (varaharoopam..) ಹಾಡಿನ ವಿವಾದ ಕೊನೆಗೂ ಇತ್ಯರ್ಥವಾಗಿದೆ. ಕೋರ್ಟಿನ ಹೊರಗೆ ಮಾರುಕತೆ ಮೂಲಕವೇ ವಿವಾದವನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ. Varaharoopam copyright case solved. Court dismissed the case. ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ದೂರುದಾರರು ಮತ್ತು ಸಿನಿಮಾ ನಿರ್ಮಾಪಕರು (Hombale films) ಪ್ರಕರಣವನ್ನು ಇತ್ಯರ್ಥಗೊಳಿಸಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪಿ ಎ ಕುಂಶಿಕೃಷ್ಣನ್ ನೇತೃತ್ವದ ಹೈಕೋರ್ಟ್ ಏಕಸದಸ್ಯ ನ್ಯಾಯ ಪೀಠ ಪ್ರಕರಣವನ್ನು ವಜಾಗೊಳಿಸಿದೆ.
ವರಾಹರೂಪಂ.. (varaharoopam..) ಹಾಡನ್ನು ನಕಲು ಮಾಡಿದ ಆರೋಪದ ಮೇಲೆ ಕೋಯಿಕ್ಕೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವರಾಹರೂಪಂ’ ಹಾಡು ಮಲಯಾಳಂ ಮ್ಯೂಸಿಕ್ ಬ್ಯಾಂಡ್‌ನ ‘ನವರಸಂ’ (Navarasam) ಹಾಡಿನ ನಕಲು ಎಂದು ದೂರುದಾರರು ಆರೋಪಿಸಿದ್ದರು.
ರಿಷಬ್ ಶೆಟ್ಟಿ Rishabh Shetty ಅವರ ‘ಕಾಂತಾರ’ ಸಿನಿಮಾವು 2022ರ ಸೆ.30ರಂದು ತೆರೆಕಂಡಿತ್ತು. ಈ ಸಿನಿಮಾಗೆ ಅಜನೀಶ್ ಲೋಕನಾಥ್ (ajaneesh lokanth) ಸಂಗೀತ ನೀಡಿದ್ದರು. ಮೊದಲು ಕನ್ನಡದಲ್ಲಿ ತೆರೆಕಂಡ ಈ ಸಿನಿಮಾವು ನಂತರ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳಿಗೂ ಡಬ್ ಆಗಿ, ತೆರೆಕಂಡಿತ್ತು. ವರಾಹರೂಪಂ.. ಹಾಡನ್ನು ಬಳಸದೇ ಕಾಂತಾರ kantara ಸಿನಿಮಾ ಪ್ರದರ್ಶನ ಮಾಡಬೇಕೆಂಬ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಫೆಬ್ರವರಿಯಲ್ಲಿ ತಡೆ ನೀಡಿತ್ತು.
1957ರ ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 63ರಡಿ ಶಿಕ್ಷಾರ್ಹ ಅಪರಾಧಗಳನ್ನು ಉಲ್ಲೇಖಿಸಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಿ ವಿಚಾರಣೆ ಕೊನೆಗೊಳಿಸಿದೆ. ಹಾಡಿನ ವಿವಾದವು ಖಾಸಗಿ ಸ್ವರೂಪದ್ದಾಗಿದೆ. ಈ ಎಲ್ಲ ಆಧಾರದ ಮೇಲೆ ವಾದಿ ಹಾಗೂ ಪ್ರತಿವಾದಿಗಳ ನಡುವಿನ ಇತರ್ಥ್ಯವನ್ನು ಅಂಗಿಕರಿಸಲಾಗುವುದು ಎಂದು ನ್ಯಾಯಮೂರ್ತಿ ಪಿ ವಿ ಕುಂಶಿಕೃಷ್ಣನ್ ಹೇಳಿದ್ದಾರೆ.
ಅಂದರೆ ಅರ್ಜಿದಾರರು ಮತ್ತು ಪ್ರತಿವಾದಿಗಳು ಮಾತುಕತೆಯ ಮೂಲಕವೇ ವಿವಾದವನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ. ಕಾಂತಾರ ಸೂಪರ್ ಹಿಟ್ ಆದ ಬೆನ್ನಲ್ಲೇ ಕಾಂತಾರ ಪ್ರೀಕ್ವೆಲ್ʻಗೆ ಸಿದ್ಧತೆ ನಡೆದಿದ್ದು, ಇನ್ನೇನು ಚಿತ್ರೀಕರಣ ಶುರುವಾಗಲಿದೆ.



