ಕಾಂತಾರ ಚಾಪ್ಟರ್ 01. ಬಾಕ್ಸಾಫೀಸಿನಲ್ಲಿ ದೂಳೆಬ್ಬಿಸುತ್ತಿರುವ ಸಿನಿಮಾವನ್ನು ಇದುವರೆಗೆ ನೋಡಿದವರ ಸಂಖ್ಯೆಯೇ ಹತ್ತಿರತ್ತಿರ 70 ಲಕ್ಷ. ಸಿನಿಮಾ ಆ ರೇಂಜಿಗೆ ಡಿವೈನ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಕೆಲವರ ಪಾಲಿಗೆ ಕೇವಲ ನಟನಾಗಿ ಉಳಿದಿಲ್ಲ. ಹೊಗಳುವವರ ಸಂಖ್ಯೆ ಹೆಚ್ಚಾಗಿದೆ. ತೆಗಳುವವರಿಗೇನೂ ಕಡಿಮೆ ಇಲ್ಲ.
ರಾಷ್ಟ್ರಪತಿ ಭವನದಿಂದ ಸಾಮಾನ್ಯ ಪ್ರೇಕ್ಷಕರವರೆಗೆ ಸಿನಿಮಾ ನೋಡಿದವರು ಹೊಗಳುತ್ತಿದ್ದಾರೆ. ದಿಗ್ಗಜ ಕಲಾವಿದರು, ನಿರ್ದೇಶಕರೂ ಕೂಡಾ ಹೊಗಳುತ್ತಿದ್ದಾರೆ. ಟೀಕೆ ಮಾಡುವವರೂ ಇದ್ದಾರೆ. ಈ ಟೀಕೆ ಮಾಡುವವರ ಪ್ರಕಾರ ಕಾಂತಾರ ಡಬ್ಬಾ ಸಿನಿಮಾ. ಅಜೆಂಡಾ ಸಿನಿಮಾ. ಮೌಢ್ಯವನ್ನು ಬಿತ್ತುತ್ತಿರುವ ಸಿನಿಮಾ.. ಹೀಗೆ..
ಇಂತಹವರಿಗೆ ಸರಿಯಾಗಿ ಟಾರ್ಗೆಟ್ ಆಗಿರುವುದು ಮಾಜಿ ಸಂಸದ ಪ್ರತಾಪ್ ಸಿಂಹ. ಪ್ರತಾಪ್ ಸಿಂಹ ಟಾರ್ಗೆಟ್ ಆಗಿದ್ದರ ಕಥೆಯೂ ವಿಚಿತ್ರ.
ಅವರು ತಮ್ಮ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮೈಸೂರಿನಲ್ಲಿ ಇಡೀ ಥಿಯೇಟರ್ ಬುಕ್ ಮಾಡಿ, ಸಿನಿಮಾ ತೋರಿಸಿದ್ದು. ತಮ್ಮದೇ ಖರ್ಚಿನಲ್ಲಿ ಸಿನಿಮಾ ತೋರಿಸಿದ್ದಾರೆ ಪ್ರತಾಪ್ ಸಿಂಹ.
ಅದು ಪ್ರತಾಪ್ ಸಿಂಹ ಹಾಗೂ ಬಿಜೆಪಿ ವಿರೋಧಿಗಳಿಗೆ ಟಾರ್ಗೆಟ್ ಆಗಿದೆ.
ಮಾಜಿ ಸಂಸದ ಪ್ರತಾಪ್ ಸಿಂಹನನ್ನ ಥಿಯೇಟರ್ ಗೇಟ್ ಕೀಪರ್ ಮಾಡಿಬಿಟ್ರಲ್ಲೋ….
ಪಾಪ.. ಮಾಜಿ ಸಂಸದರಿಗೆ ಟಿಕೆಟ್ ಸಿಗದೆ, ಈಗ ಟಿಕೆಟ್ ಪಡೆಯುವುದಕ್ಕಾಗಿ ಬಕೆಟ್ ಹಿಡಿಯುತ್ತಿದ್ದಾರೆ..
ಹೀಗೆ ಲೇವಡಿ ಮಾಡ್ತಾನೆ.. ಇದು ಅಜೆಂಡಾ ಸಿನಿಮಾ ಎಂದು ಷರಾ ಬರೆದುಬಿಟ್ಟಿದ್ದಾರೆ. ಕಾಂತಾರದಲ್ಲಿ ಮೌಢ್ಯಗಳೇ ತುಂಬಿವೆ. ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಮಾಡಿರುವ ಸಿನಿಮಾ ಎಂದೆಲ್ಲ ಟೀಕೆ ಮಾಡಲಾಗ್ತಾ ಇದೆ.
ಅದಕ್ಕೆ ತಿರುಗೇಟು ಕೊಟ್ಟಿದ್ದ ಪ್ರತಾಪ್ ಸಿಂಹ ಟಿಕೆಟ್ ಕೊಡುವುದು ಸಿನಿಮಾದವರಲ್ಲ. ಮೋದಿ ಮತ್ತು ಅಮಿತ್ ಶಾ. ಕಾಂತಾರ ನನಗೆ ಇಷ್ಟವಾಯಿತು. ಎಲ್ಲರೂ ಒಟ್ಟಿಗೇ ನೋಡಲಿ ಎಂದು ಸಿನಿಮಾ ತೋರಿಸಿದ್ದೇನೆ. ಮತ್ತೆ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಹೇಳಿದಂತೆ ಕಾಂತಾರ ಚಿತ್ರದ ಮತ್ತೊಂದು ಶೋ ಕೂಡಾ ಹಾಕಿಸಿದ್ದಾರೆ. ಒಟ್ಟಿನಲ್ಲಿ ಕಾಂತಾರ ರಾಜಕೀಯವಾಗಿಯೂ ಸದ್ದು ಮಾಡ್ತಿದೆ.
ಇನ್ನು ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಕೂಡಾ ಕಾಂತಾರ ಚಿತ್ರವನ್ನು ನೋಡಿ, ಹೊಗಳಿದ್ದಾರೆ. ಅಷ್ಟೇ ಅಲ್ಲ.. ಕಾಂತಾರವನ್ನು ಹೊಗಳಿದವರ ಪಟ್ಟಿಯಲ್ಲಿ ಹಿಂದಿಯ ಅನುಪಮ್ ಖೇರ್ ಕೂಡಾ ಇದ್ದಾರೆ. ಅವರು ಕಾಶ್ಮೀರ್ ಫೈಲ್ಸ್, ಬೆಂಗಾಳ್ ಫೈಲ್ಸ್ ಸಿನಿಮಾ ಮಾಡಿದ್ದವರು. ಅಜೆಂಡಾ + ಅಜೆಂಡಾ ಎನ್ನಲಾಗ್ತಾ ಇದೆ.
ಸಿನಿಮಾವನ್ನು ಎಡಪಂತೀಯರ ಜೊತೆ ಗುರುತಿಸಿಕೊಂಡ ಬಹುತೇಕ ಕಲಾವಿದರು, ತಂತ್ರಜ್ಞರು ನೋಡಿಯೂ ಇಲ್ಲ. ಮೆಚ್ಚಿಯೂ ಇಲ್ಲ. ಒಟ್ಟಿನಲ್ಲಿ ಒಂದು ಸಿನಿಮಾ ಹಿಟ್ ಆದರೆ.. ಅದನ್ನೂ ಕೂಡಾ ಅಜೆಂಡಾ ಲಿಸ್ಟಿಗೆ ಸೇರಿಸಲಾಗ್ತಾ ಇದೆ. ಸಿನಿಮಾ ಮಾಡೋದು ಸುಲಭ ಅಲ್ಲ ಕಣ್ರೀ..ವಿವಾದದ ಮೂಲ ಯಾವುದು ಅಂದ್ರೆ.. ರಿಷಬ್ ಶೆಟ್ಟಿ ಧರ್ಮಸ್ಥಳ ಹಾಗೂ ದೈವಕ್ಕೆ ನಿಷ್ಠರಾಗಿವುದೇ ಎನ್ನಲಾಗುತ್ತಿದೆ.



