ಸಮಾಜ ಸೇವಕಿ. ಕನ್ನಡತಿ ಅಕ್ಕ ಅನು ಎಂದೇ ಫೇಮಸ್ ಆಗಿರುವ ಅನು ಅವರು ಯಾವ್ಯಾವುದೋ ವಿಡಿಯೋಗಳಿಂದ ಖ್ಯಾತರಾದವರಲ್ಲ. ಸ್ವಯಂ ಖರ್ಚಿನಲ್ಲಿ ಶಾಲಾ ಸ್ವಚ್ಛತೆ, ಶಾಲೆಗಳಿಗೆ ಬಣ್ಣ ಬಳಿಯುವುದು, ಮಕ್ಕಳಿಗೆ ಅಗತ್ಯವಿರುವ ವರ್ಣರಂಜಿತ ಚಿತ್ರಗಳನ್ನು ರೂಪಿಸಿಕೊಡುತ್ತಾರೆ. ಅವರದ್ದೇ ಒಂದು ಪುಟ್ಟ ತಂಡವಿದೆ. ಅಂತಹ ಗೆಳೆಯರದ್ದೊಂದು ಸಂಘ ಕಟ್ಟಿಕೊಂಡು ಸೇವೆ ಮಾಡುವ ಕನ್ನಡತಿ ಅಕ್ಕ ಅನು ಅವರಿಗೆ ಇತ್ತೀಚೆಗೆ ನ್ಯೂಸ್ ೧೮ ಹಾಗೂ ಜೀ ಕನ್ನಡದಲ್ಲಿ ಪ್ರಶಸ್ತಿ ಲಭಿಸಿದ್ದವು. ಆದರೆ.. ಅದೇ ಅನು ಅವರಿಗೆ ಸಂಕಷ್ಟ ತಂದಿಟ್ಟಿದೆ.
ಅನು ಅವರು ತಾವು ಶಾಲೆಗಳಿಗೆ ಬಣ್ಣ ಬಳಿಯೋ ಕೆಲಸಕ್ಕೆ ಸಮಾಜ ಸೇವೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಹೊಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಅದಕ್ಕೆಲ್ಲ ಅನು ಉತ್ತರ ಕೊಟ್ಟಿದ್ದರು. ಚರಂಡಿ ಕ್ಲೀನ್ ಮಾಡುವುದಕ್ಕೆ ಹೋದಾಗ ಒಬ್ಬರು ಸುರಕ್ಷತೆಯ ಗ್ಲೌಸ್ ಇತ್ಯಾದಿ ಕೊಡಿಸಿದ್ದಾರೆ. ಪೇಂಯ್ಟ್ ಮಾಡುವುದಕ್ಕೆ ಬೇಕಾದ ಪರಿಕರಗಳನ್ನು ಕೊಡಿಸಿದವರೂ ಇದ್ಧಾರೆ. ಕೆಲವರು ನಾವು ಹೋಗಿ ಬರುವುದಕ್ಕೆ ಬಸ್ ಚಾರ್ಜ್ ಕೊಟ್ಟಿದ್ಧಾರೆ. ಆದರೆ.. ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯುವುದನ್ನು ನಾನೂ ಹಾಗೂ ನಮ್ಮ ತಂಡದವರು ಸ್ವಯಂ ಖರ್ಚಿನಲ್ಲಿಯೇ ಮಾಡುತ್ತಿದ್ಧೇವೆ ಎಂದಿದ್ದಾರೆ.
ಟೀಕೆ ಮಾಡುವವರಿಗೆ ನಾವು ಶಾಲೆಗಳಿಗೆ ಬಣ್ಣವನ್ನಷ್ಟೇ ಬಳಿಯುತ್ತೇವೆ. ಟೀಕೆ ಮಾಡುವವರು ಶಾಲೆಗೆ ಬೇಕಾದ ಕಂಪ್ಯೂಟರ್, ಆಟೋಪಕರಣ ಇತ್ಯಾದಿಗಳನ್ನ ಕೊಡಿಸಬಹುದಲ್ಲ ಎಂದೂ ಹೇಳಿದ್ಧಾರೆ. ನಮ್ಮ ಕುಟುಂಬದಲ್ಲಿ ಅಗತ್ಯವಿದ್ದಾಗ ಬೇರೆಡೆಯಿಂದ ಸಾಲ ಮಾಡಿದ್ದೇವೆ. ಅವರು ಕೂಡ ನಮ್ಮ ಯೋಗ್ಯತೆ ನೋಡಿ ಸಾಲ ಕೊಟ್ಟಿದ್ದಾರೆ. ನಾನು ನಿಮ್ಮ ದುಡ್ಡು ಕಬಳಿಸಿಲ್ಲ. ಸಮಾಜದಲ್ಲಿ ಎಂತೆಂಥವರೋ ಬದುಕುತ್ತಿದ್ದಾರೆ. ಆದರೆ, ನಾನು ಶಾಲೆಗಳಲ್ಲಿ ಕೆಲಸ ಅಥವಾ ಸಮಾಜ ಸೇವೆ ಯಾಕೆ ಮಾಡಿದೆನೋ ಎಂಬ ಚಿಂತೆ ಕಾಡುತ್ತಿದೆ. ನನಗೆ ಹೆಸರು, ಪ್ರಶಸ್ತಿ ಅಥವಾ ಯಾವುದೇ ಹಿರಿಮೆ ಪಡೆಯುವ ಆಸೆಯಿಲ್ಲ ಎಂದಿರುವ ಅನು ನಾವು ನಮ್ಮ ಕಷ್ಟದ ನಡುವೆಯೂ ಸಮಾಜ ಸೇವೆ ಮಾಡಿದರೆ ಅದಕ್ಕೆ ಕೆಟ್ಟದಾಗಿ ಕಮೆಂಟ್ ಮಾಡಿ ಕಷ್ಟ ಕೊಡ್ತೀರಿ. ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಸಾಮಾಜಿಕ ಜಾಲತಾಣ ಬಿಟ್ಟುಬಿಡಿ ಎಂದು ನೀವು ಹೇಳಬಹುದು. ಆದರೆ, ನಾವು ಕೆಲವೊಂದು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದರಿಂದ, ಸಮಾಜ ಸೇವೆ ಮಾಡಿದ್ದರಿಂದ ಅವುಗಳು ಮರೆಯಾಗಿ ಹೋಗಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದೇವೆ ಎಂದು ತಿಳಿಸಿದ್ಧಾರೆ.
ಅಸಹ್ಯದ ಕಮೆಂಟ್ ಮಾಡುವವರಿಗೆ ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ ನಾನು ಸಮಾಜ ಸೇವೆ ಮಾಡಿದ್ದೇನೆ. ನಾನು ಮಾಡಿದ್ದೇ ತಪ್ಪಾ ಹೇಳಿ. ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಇದೇ ರೀತಿ ಕುಗ್ಗಿಸಿದರೆ ಯಾವ ಹೆಂಗಸರೂ ಕೂಡ ಮುಂದೆ ಬರಲು ಬಿಡುವುದಿಲ್ಲ. ಆದರೆ, ಈಗ ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ತಪ್ಪಾಗಿ ಕಮೆಂಟ್ ಮಾಡುತ್ತಿದ್ದಾರೆ. ನಾನು ಎಷ್ಟೇ ಹುಡುಗನಂತೆ ಇದ್ದರೂ, ನಾನು ಒಂದು ಹೆಣ್ಣು. ನನಗೂ ಭಾವನೆಗಳು ಇರುತ್ತವೆ. ಭಾವನೆಗಳೊಂದಿಗೆ ಆಟವಾಡುವ, ಮನಸ್ಸನ್ನು ಕುಗ್ಗಿಸುವ ಕೆಲಸ ಮಾಡಬೇಡಿ. ನನಗೇನಾದರೂ ತೊಂದರೆಯಾದರೆ ನಮ್ಮ ಕುಟುಂಬವನ್ನು (ಅಪ್ಪ, ಅಮ್ಮ, ಅಕ್ಕ-ತಂಗಿಯರನ್ನು) ನೀವು ನೋಡಿಕೊಳ್ತೀರಾ ಎಂದು ಗಳಗಳನೇ ಅತ್ತಿದ್ದಾರೆ. ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧ ದೂರು ನೀಡಿ. ನಾನು ಮಾತನಾಡಿದ್ದಕ್ಕೆ ಸಾಕ್ಷಿ ಕೊಡುತ್ತೇನೆ ಎಂದೂ ಹೇಳಿದ್ದಾರೆ.



