ನರಸಿಂಹ ರಾಜು (Narasimha Raju) . ಅವರನ್ನು ಕನ್ನಡ ಚಿತ್ರರಂಗ ಯಾವತ್ತೂ ಮರೆಯುವಂತಿಲ್ಲ. ಕನ್ನಡಿಗರು ಮರೆತಿಲ್ಲ. ಕನ್ನಡದಲ್ಲಿ ಡಾ.ರಾಜ್ (Dr.Rajkumar) ಅವರು ಹೇಗೆ ನಟಸಾರ್ವಭೌಮರೋ.. ಹಾಗೆಯೇ ನರಸಿಂಹ ರಾಜು (Narasimha Raju) ಹಾಸ್ಯ ಸಾರ್ವಭೌಮ. ರಾಜ್ (Dr.Rajkumar) ಚಿತ್ರಗಳೆಂದರೆ, ನರಸಿಂಹರಾಜು (Narasimha Raju) ಇರಲೇಬೇಕಿತ್ತು. ಎಷ್ಟೋ ಬಾರಿ ನರಸಿಂಹರಾಜು (Narasimha Raju) ಅವರ ಕಾಲ್`ಷೀಟ್`ಗೆ ತಕ್ಕಂತೆ ರಾಜ್ (Dr.Rajkumar) ಅವರ ಡೇಟ್ಸ್ ಚೇಂಜ್ ಆಗಿದ್ದೂ ಇದೆ. ಇದು ಸ್ವತಃ ಪಾರ್ವತಮ್ಮ ರಾಜಕುಮಾರ್ (Dr. Paravathamma Rajkumar) ಹೇಳಿಕೊಂಡಿದ್ದ ಸತ್ಯ.
ನರಸಿಂಹ ರಾಜು ಅವರನ್ನು ಮೀರಿಸುವ ಇನ್ನೊಬ್ಬ ಹಾಸ್ಯನಟ ಕನ್ನಡದಲ್ಲಿ ಬಂದೇ ಇಲ್ಲ. ಹಾಸ್ಯನಟರಾಗಿ, ಪೋಷಕ ನಟರಾಗಿ ಮಿಂಚಿದ್ದ (Narasimha Raju) ನರಸಿಂಹ ರಾಜು ಅವರಿಗೆ ಇದೇ ಜುಲೈ 24ರಂದು ಜನ್ಮ ಶತಮಾನೋತ್ಸವ. ಸಂಭ್ರಮವನ್ನು ‘ನರಸಿಂಹರಾಜು ಜನ್ಮ ಶತಮಾನೋತ್ಸವ’ (Narasimha Raju birthday Celebration) ವಾಗಿ ಇಡೀ ವರ್ಷ ಆಚರಣೆ ಮಾಡಲು ನರಸಿಂಹ ರಾಜು ಅವರ ಕುಟುಂಬ ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ನರಸಿಂಹ ರಾಜು ಅವರ ಪರಿಚಯ ಈಗಿನವರಿಗೆ ಇಲ್ಲ. 30+ನವರಿಗೆ ಅಲ್ಪಸ್ವಲ್ಪ ಗೊತ್ತಿದೆ ಬಿಟ್ಟರೆ, ನರಸಿಂಹ ರಾಜು ಈಗಿನ ಯುವಕರಿಗೆ ಪರಿಚಯ ಇಲ್ಲ. ಅವರಿಗೆ ಸಾಧುಕೋಕಿಲ, ಚಿಕ್ಕಣ್ಣನವರೇ ಕಾಮಿಡಿ ನಟರು. ಹೀಗಾಗಿಯೇ ಈಗಿನ ಯುವಜನತೆಗೆ ತಲುಪಿಸುವ ಪ್ರಯತ್ನ ಹಾಗೂ ಉದ್ದೇಶ ಇಟ್ಟುಕೊಂಡು ಶಾಲೆ ಕಾಲೇಜು ಸುತ್ತಲು ಹೊರಟಿದ್ದಾರೆ ನರಸಿಂಹ ರಾಜು ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು.
12 ಜನರ ತಂಡ ಎರಡು ಟ್ರಕ್ಗಳಲ್ಲಿ ಕರ್ನಾಟಕದ 32 ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ (Narasimha Raju birthday Celebration). ಆ ಟ್ರಕ್ನಲ್ಲಿ ಎಲ್ ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸಹ ಕೇಳಲಾಗುತ್ತದೆ.
ಅಷ್ಟೇ ಅಲ್ಲ ನವೆಂಬರ್/ಡಿಸೆಂಬರ್ ತಿಂಗಳಲ್ಲಿ ನರಸಿಂಹರಾಜು ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ ಆಯೋಜಿಸಲಾಗುತ್ತಿದೆ. ಶಾಲೆ-ಕಾಲೇಜುಗಳಲ್ಲಿ ನರಸಿಂಹ ರಾಜು ಅವರ ನಾಟಕಗಳ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಜುಲೈ 24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು, ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ತಿಳಿಸಿದ್ದಾರೆ.
ಅಂದಹಾಗೆ ನರಸಿಂಹರಾಜು (Narasimha Raju birth anniversery) ಅವರೂ ಕೂಡಾ ಬೇಡರ ಕಣ್ಣಪ್ಪ ಚಿತ್ರದಿಂದಲೇ ಬೆಳ್ಳಿತೆರೆಗೆ ಪ್ರವೇಶ ಪಡೆದವರು. ನರಸಿಂಹ ರಾಜು ಅವರೂ ಕೂಡಾ ಡಾ.ರಾಜ್ ಅವರಂತೆಯೇ ಗುಬ್ಬಿ ವೀರಣ್ಣನವರ ಕಂಪೆನಿಯಲ್ಲಿ ನಟಿಸುತ್ತಿದ್ದವರು. ನರಸಿಂಹ ರಾಜು ಅವರು ತುಮಕೂರು ಜಿಲ್ಲೆಯ ತಿಪಟೂರಿನವರು. 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದವರು. ಹಾಸ್ಯ ಚಕ್ರವರ್ತಿ ಎಂದೇ ಬಿರುದು ಪಡೆದಿದ್ದ ನಟ. ನಟರಷ್ಟೇ ಅಲ್ಲ, ಸ್ಟಾರ್ ನಟರಾದ ನಂತರವೂ ಕಂಪೆನಿ ನಾಟಕಗಳಲ್ಲಿ ನಟಿಸುತ್ತಿದ್ದರು. ಮಗ ಅಕಾಲಿಕ ಸಾವಿಗೀಡಾದ ನಂತರ ಚೇತರಿಸಿಕೊಳ್ಳಲೇ ಇಲ್ಲ. ಹೃದಯಾಘಾತದಿಂದ ಮೃತಪಟ್ಟಾಗ ಅವರ ವಯಸ್ಸು ಕೇವಲ 55. 1923 ಜುಲೈ 24 ನರಸಿಂಹ ರಾಜು ಅವರ ಜನ್ಮದಿನ.



