ಮಂಗಳೂರಿನಲ್ಲಿ (mangalore) ಕಳೆದ ವರ್ಷ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ (Cocker bomb blast) ಪ್ರಕರಣದ ಸಂಚು ರೂಪಿಸಿದ್ದ (Islamic states) ಐಸಿಸ್ ಉಗ್ರಗಾಮಿ ಸಂಘಟನೆಯ (ISIS) ಸಂಚುಕೋರ, ಕರ್ನಾಟಕದ ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು (Arafat ali) ರಾಷ್ಟ್ರೀಯ ತನಿಖಾ ಸಂಸ್ಥೆ (NiA) ಗುರುವಾರ ಬಂಧಿಸಿದೆ. ಕೀನ್ಯಾದ (Keenya ) ನೈರೋಬಿಯಿಂದ (Nairobi) ದಿಲ್ಲಿ ವಿಮಾನ ನಿಲ್ದಾಣಕ್ಕೆ (Delhi international airport) ಬಂದಿಳಿದ ತಕ್ಷಣವೇ ಆತನನ್ನು ಬಂಧಿಸಲಾಗಿದೆ. ಇದರಿಂದಾಗಿ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ವಿದೇಶಿ ಮೂಲದ ಐಸಿಸ್ ಸಂಚು ಮತ್ತೊಮ್ಮೆ ವಿಫಲವಾಗಿದೆ.
ಅಲಿ 2020 ರಿಂದ ಐಸಿಸ್ (Islamic state) ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಐಸಿಸ್ ಮೂಲಕ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಿದ್ದ. ಆಗಿನಿಂದ ಈತ ಮರೆಸಿಕೊಂಡಿದ್ದ ಆತ ಐಸಿಸ್ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾಗೆ ಕುಮ್ಮಕ್ಕು ನೀಡಲು ವಿದೇಶದಿಂದಲೇ ಕಾರ್ಯನಿರ್ವಹಿಸುತ್ತಿದ್ದ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಿವಾಸಿಯಾಗಿರುವ ಅಲಿ, ವಿದೇಶದಿಂದ ಕೆಲಸ ಮಾಡುತ್ತಿರುವಾಗ ಐಸಿಸ್ ಸಂಘಟನೆಗೆ ಮುಸ್ಲಿಂ ಯುವಕರನ್ನು ಗುರುತಿಸುವುದು, ಅವರನ್ನು ಸಂಘಟನೆಗೆ ನೇಮಿಸಿಕೊಳ್ಳುವುದು ಹಾಗೂ ಅವರನ್ನು ತೀವ್ರವಾದಿಯನ್ನಾಗಿ ಮಾಡುವುದು- ಈ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಕುಕ್ಕರ್ ಬಾಂಬ್ ಉಗ್ರನ ಟಾರ್ಗೆಟ್ ಕದ್ರಿ ಮಂಜುನಾಥೇಶ್ವರ
ಕುಕ್ಕರ್ ಬಾಂಬ್ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಅರೆಸ್ಟ್ ಬೆನ್ನಲ್ಲೇ ಮಂಗಳೂರು ಬ್ಲಾಸ್ಟ್ ಟಾರ್ಗೆಟ್ ಬಹಿರಂಗವಾಗಿದೆ. ಮಂಗಳೂರಿನ (mangalore) ಕದ್ರಿ ಮಂಜುನಾಥೇಶ್ವರ ದೇವಸ್ಥಾನವೇ (kadri Manjunatheshwara tempel) ಟಾರ್ಗೆಟ್ ಆಗಿತ್ತು ಅಂತ ಎನ್ಐಎ ಹೇಳಿದೆ. ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನದ ಕುರಿತ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಕದ್ರಿ ಟಾರ್ಗೆಟ್ ಆಗಿತ್ತು ಅಂತ ಎನ್ಐಎ ಹೇಳಿಕೊಂಡಿದೆ.
ಕೀನ್ಯಾದಿಂದ ವಾಪಾಸ್ ಆಗ್ತಿದ್ದ ವೇಳೆ ಅರಾಫತ್ ಆಲಿ ಅರೆಸ್ಟ್ ಆಗಿದ್ದ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್, ಮಂಗಳೂರು ಗೋಡೆ ಬರಹದ ಮಾಸ್ಟರ್ ಮೈಂಡ್ ಆಗಿರೋ ಅರಾಫತ್ ಆಲಿ, ವಿದೇಶದಲ್ಲಿ ಕುಳಿತು ಯುವಕರನ್ನು ಉಗ್ರ ಕೃತ್ಯಗಳಿಗೆ ಪ್ರಚೋದಿಸಿದ್ದ. ಪ್ರಚೋದನೆಗೆ ಒಳಗಾಗಿ ಶಿವಮೊಗ್ಗ, ಮಂಗಳೂರಿನಲ್ಲಿ ಶಾರೀಕ್ ಟೀಂನಿಂದ ಉಗ್ರ ಕೃತ್ಯದ ಪ್ಲಾನ್ ರೂಪಿಸಲಾಗಿತ್ತು. ಮೊದಲ ಬಾರಿಗೆ ಮಾಝ್ ಮುನೀರ್ ಮತ್ತು ಯಾಸೀನ್ ನಿಂದ ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ ಬರೆಯಲಾಗಿತ್ತು. ಆ ಬಳಿಕ ಶಿವಮೊಗ್ಗದಲ್ಲಿ ಶಾರೀಕ್ ಜೊತೆ ಸೇರಿಕೊಂಡು ಟ್ರಾಯಲ್ ಬ್ಲಾಸ್ಟ್ ಮಾಡಿದ್ದ. ಕೊನೆಗೆ ನ.19, 2022ರಂದು ಕುಕ್ಕರ್ ಬಾಂಬ್ ಸ್ಪೋಟಿಸಲು ಶಾರೀಕ್ ಸಂಚು ರೂಪಿಸಿದ್ದ. ಆಟೋ ರಿಕ್ಷಾದಲ್ಲಿ ಬಾಂಬ್ ತರುವ ವೇಳೆ ನಾಗುರಿ ಎಂಬಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಆದರೆ ಶಾರೀಕ್ ಟಾರ್ಗೆಟ್ ಏನಾಗಿತ್ತು ಎಂಬ ಬಗ್ಗೆ ಗೊಂದಲಗಳಿತ್ತು. ಕದ್ರಿ ದೇವಸ್ಥಾನ ಸೇರಿ ಮಂಗಳೂರಿನ ಹಲವು ಜಾಗಗಳು ಶಾರೀಕ್ ಟಾರ್ಗೆಟ್ ಎನ್ನಲಾಗಿತ್ತು. ಈ ಮಧ್ಯೆ ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿದ್ದ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್, ಉಗ್ರ ಸಂಘಟನೆಯ ಟಾರ್ಗೆಟ್ ಆಗಿದ್ದು ಕದ್ರಿ ದೇವಸ್ಥಾನ ಅಂತ ಪೋಸ್ಟ್ ಹಾಕಲಾಗಿತ್ತು. ಅರೇಬಿಕ್ ಭಾಷೆಯಲ್ಲಿ ಬರೆದುಕೊಂಡು ತಮ್ಮ ಟಾರ್ಗೆಟ್ ಕದ್ರಿ ಆಗಿತ್ತು ಎಂದಿದ್ದರು ಉಗ್ರರು. ಆ ಬಳಿಕ ಉಗ್ರ ಶಾರೀಕ್ ವಶಕ್ಕೆ ಪಡೆದು ಬೆಂಗಳೂರಿಗೆ ಕರೆಸಿಕೊಂಡಿದ್ದ ಎನ್ಐಎ ವಿಚಾರಣೆ ನಡೆಸಿತ್ತು. ಎನ್ಐಎ ತನಿಖೆ ವೇಳೆ ಶಾರೀಕ್ ಕುಕ್ಕರ್ ಬ್ಲಾಸ್ಟ್ ಟಾರ್ಗೆಟ್ ಬಹಿರಂಗವಾಗಿದ್ದು, ಕದ್ರಿ ದೇವಸ್ಥಾನ ಟಾರ್ಗೆಟ್ ಆಗಿತ್ತು ಅಂತ ಶಾರೀಕ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.



