ಅಭಿಮಾನಿಗಳ ಪಾಲಿಗೆ ಪುನೀತ್ ರಾಜ್ ಕುಮಾರ್ ಅವರು ದೇವರಾದರೆ, ಈ ಆನಂದ್ ಆರ್ಯ ಪಾಲಿಗೆ ಅನ್ನದಾತ. ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಸಾವಿರಾರು ಜನ ಪುನೀತ್ ಅವರನ್ನು ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್ ಅಷ್ಟೇ ಅಲ್ಲ, ಈ ಆನಂದ್ ಆರ್ಯ ಅವರಲ್ಲಿಯೂ ನೋಡುತ್ತಿದ್ದಾರೆ. ನೋಡಲು ಥೇಟ್ ಪುನೀತ್ ರಾಜ್‌ಕುಮಾರ್ ಅವರಂತೆಯೇ ಇರುವ ಆನಂದ್ ಆರ್ಯ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಎರಡೂ ಕಿಡ್ನಿಗಳು ಫೇಲ್ ಆಗಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ನನಗೆ ನಾಲ್ಕು ವರ್ಷಗಳಿಂದ ಬಿಪಿ ಇತ್ತು. ಪ್ರತಿ ದಿನ ಟ್ಯಾಬ್ಲೆಟ್ ತಗೋತಿದ್ದೆ. ಇತ್ತೀಚೆಗೆ ಚಿತ್ರೀಕರಣದ ನಡುವೆ ಮಾತ್ರೆ ತೆಗೆದುಕೊಳ್ಳುವುದನ್ನು ಮಿಸ್ ಮಾಡಿಕೊಂಡಿದ್ದೆ. ಹಾಗಾಗಿ ನಾಲ್ಕೈದು ದಿನಗಳಿಂದ ಉಸಿರಾಟಕ್ಕೆ ತೊಂದರೆಯಾಗಿ ಐಸಿಯುನಲ್ಲಿದ್ದೆ. ಈಗ ನಾರ್ಮಲ್ ವಾರ್ಡ್‌ಗೆ ಶಿಫ್ಟ್ ಆಗಿದ್ದೀನಿ. ಎರಡು ಕಿಡ್ನಿ ಫೇಲ್ ಆಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಕಿಡ್ನಿ ಕಸಿ ಮಾಡಿಸಬೇಕು. ಡಯಾಲಿಸಿಸ್ ಸಹ ಆರಂಭಿಸಿದ್ದಾರೆ” ಎಂದು ಆನಂದ್ ಆರ್ಯ ಹೇಳಿದ್ದಾರೆ.
ವೇದಿಕೆಗಳಲ್ಲಿ ಅಪ್ಪು ಧ್ವನಿ, ಮ್ಯಾನರಿಸಂ, ಲುಕ್ ಪ್ರದರ್ಶಿಸಿ ಗಮನ ಸೆಳೆಯುವ ಆನಂದ್ ಆರ್ಯ ಅವರನ್ನು ಜ್ಯೂನಿಯರ್ ಅಪ್ಪು ಅಂತ್ಲೇ ಜನ ಇವರನ್ನು ಗುರ್ತಿಸುತ್ತಾರೆ. ಪವರ್ ಸ್ಟಾರ್ ವಾಯ್ಸ್ ಮಿಮಿಕ್ರಿ ಮಾಡುತ್ತಾ ಅವರದ್ದೇ ಸ್ಟೈಲ್‌ನಲ್ಲಿ ಅವರೆಲ್ಲಾ ಸದ್ದು ಮಾಡುತ್ತಿದ್ದಾರೆ. ನೂರಾರು ಕಾರ್ಯಕ್ರಮಗಳಲ್ಲಿ ಥೇಟ್ ಪುನೀತ್ ರಾಜ್‌ಕುಮಾರ್ ಅವರಂತೆ ಕಾಣಿಸಿಕೊಂಡು ಜನರ ಮನಗೆದ್ದಿದ್ದಾರೆ. ಇವರು ನಾಯಕನಾಗಿ ನಟಿಸಿದ ಮಾರಕಾಸ್ತ್ರ ಸಿನಿಮಾ ಇತ್ತೀಚೆಗೆ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಮಾಲಾಶ್ರೀ, ಹರ್ಷಿಕಾ ಪೂಣಚ್ಚ ಮುಂತಾದರು ನಟಿಸಿದ್ದರು. ಜೀಟಿವಿಯ ರಿಯಾಲಿಟಿ ಶೋನಲ್ಲಿ ಟೈಮ್ ಮೆಷಿನ್ ಕಾನ್ಸೆಪ್ಟಿನಲ್ಲಿ ಅಪ್ಪು ಅವರಂತೆಯೇ ಕಾಣಿಸಿಕೊಂಡಿದ್ದ ಆನಂದ್ ಆರ್ಯ ಅವರ ಜನಪ್ರಿಯತೆ ಉತ್ತುಂಗಕ್ಕೇರಿತ್ತು. ಆದರೆ ಈ ಹಣ ಆನಂದ್ ಆರ್ಯ ಅವರ ಚಿಕಿತ್ಸೆಗೆ ಸಾಕಾಗುತ್ತಿಲ್ಲ.
‘ಛಾಯಾ’ ಹಾಗೂ ‘ಮಾರಕಾಸ್ತ್ರ’ ಎನ್ನುವ ಎರಡು ಸಿನಿಮಾಗಳಲ್ಲಿ ಕೂಡ ಆನಂದ್ ಆರ್ಯ ಬಣ್ಣ ಹಚ್ಚಿ ನಟಿಸಿದ್ದಾರೆ. ನೀವು ನೋಡಲು ಪುನೀತ್ ರಾಜ್‌ಕುಮಾರ್ ಎಂದು ಜನ ಹೇಳಲು ಆರಂಭಿಸಿದ ಬಳಿಕ ಅವರಂತೆಯೇ ಆನಂದ್ ಆರ್ಯ ವೇದಿಕೆಗಳಲ್ಲಿ ಮಿಂಚಲು ಮುಂದಾದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಸದ್ಯ ನಗರದ ವೈಟ್‌ಫೀಲ್ಡ್ ಬಳಿಯ ಆಸ್ಪತ್ರೆಯಲ್ಲಿ ಆನಂದ್ ಆರ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೆರವು ನೀಡುವ ಇಚ್ಚೆ ಇದ್ದವರು ಈ ಖಾತೆಗೆ ಹಣ ನೀಡಬಹುದು. ದೂರವಾಣಿ ಸಂಖ್ಯೆಯೂ ಇದೆ. ಆನಂದ್ ಆರ್ಯ ಅವರೇ ಎಂದು ಖಚಿತಪಡಿಸಿಕೊಂಡು ಹಣ ಅಥವಾ ಇನ್ನಿತರ ನೆರವು ನೀಡಬಹುದು.
Bank Name : Axis Bank
Account Number :924010010805451
IFSC Code: UTIB0004822
Account Holder Name :Anand.M
Branch Name :Kalkere
M. No. +91 99808 75281 (ಆನಂದ ಆರ್ಯ)



