ಒಬ್ಬ ಜ್ಯೂಸ್ ಅಂಗಡಿ Juice shop ಓನರ್ ಆಗಿದ್ದವನು.. ಇನ್ನೊಬ್ಬ ಟೈರ್ ಅಂಗಡಿ tyre shop ಓನರ್ ಆಗಿದ್ದವನು. ಇವರಿಬ್ಬರೂ ಒಂದು ಆಪ್ ಸೃಷ್ಟಿಸಿದರು. ಅದು ಬೆಟ್ಟಿಂಗ್ ಆಪ್ betting app. ಮಹಾದೇವ್ ಬುಕ್ ಆಪ್ mahadeva book app ಅನ್ನೋದು ಅದರ ಹೆಸರು. ಇವರ ಆಪ್ಗೆ ರಾಯಭಾರಿಗಳಂತೆ brand ambasidors ಕೆಲಸ ಮಾಡಿದ್ದವರು ಶ್ರದ್ಧಾ ಕಪೂರ್ Shradda kapoor, ಕಪಿಲ್ ಶರ್ಮಾ Kapil Sharma, ಹಿನಾ ಖಾನ್ Hina khan, ಹುಮಾ ಖುರೇಷಿ Huma Qureshi ಇತರರು.. ಎಲ್ಲರೂ ಸ್ಟಾರ್ ನಟ ನಟಿಯರೇ.. ವಾಟ್ಸಪ್ಪಿನಲ್ಲೇ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರೆಲ್ಲ ಈಗ ಸಿಕ್ಕಿ ಬಿದ್ದಿದ್ದಾರೆ. ಇಡೀ ಕಥೆ ಕಂಪ್ಲೀಟ್ ರೋಚಕ.
ಖದೀಮ ಕಳ್ಳರ ಕಥೆ : ಛತ್ತಿಸ್ಗಢದ ಸೌರಭ್ ಚಂದ್ರಕರ್ Saurabh Chandrakhar ಮತ್ತು ರವಿ ಉಪ್ಪಲ್ Ravi uppal ಅವರೇ ಈ ದಂಧೆಯ ಮಾಸ್ಟರ್ಮೈಂಡ್. ಕರಾಳ ಆನ್ಲೈನ್ ಬೆಟ್ಟಿಂಗ್ನಲ್ಲಿ ಇವರಿಬ್ಬರದು ದೊಡ್ಡ ಹೆಸರು. ಸೌರಭ್ ಚಂದ್ರಕರ್ ಛತ್ತೀಸ್ಗಢದ ಭಿಲಾಯಿಯ ನೆಹರೂ ನಗರದಲ್ಲಿ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದರೆ, ರವಿ ಉಪ್ಪಲ್ ಸಣ್ಣ ಟೈರ್ ಅಂಗಡಿ ಇಟ್ಟುಕೊಂಡಿದ್ದ. ಆದರೆ, ತಮ್ಮ ವ್ಯಾಪಾರದಾಚೆಗೆ ಇವರಿಬ್ಬರಿಗೂ ಜೂಜಾಟದ ಹುಚ್ಚು. ಅದು ಇವರನ್ನು ದುಬೈಗೆ ಕೊಂಡೊಯ್ಯಿತು. ಇದ್ದ ಬದ್ದ ದುಡ್ಡನ್ನೆಲ್ಲ ಹೊತ್ಕೊಂಡು ದುಬೈಗೆ ಹೋದವರಿಗೆ ವೆಲ್ ಕಂ ಹೇಳಿದವನು ದುಬೈನ ಒಬ್ಬ ಶೇಖ್ ಹಾಗೂ ಇನ್ನೊಬ್ಬ ಪಾಕಿಸ್ತಾನದ ಖದೀಮ. ಇವರೆಲ್ಲ ಒಟ್ಟಾಗಿ ಆರಂಭಿಸಿದ್ದೇ ಈ ಮಹಾದೇವ್ ಬುಕ್ ಎಂಬ ಬೆಟ್ಟಿಂಗ್ ಆ್ಯಪ್. ಕೆಲವೇ ವರ್ಷಗಳಲ್ಲಿ ಬೆಟ್ಟಿಂಗ್ ಲೋಕದ ರಾಜಾಧಿರಾಜರಂತೆ ಮೆರೆದುಬಿಟ್ಟರು.
ಹೇಗೆ ನಡೆಯುತ್ತೆ ಬೆಟ್ಟಿಂಗ್ ಆಪ್ : ಪೋಕರ್ poker , ಕಾರ್ಡ್ ಆಟಗಳು card games, ಚಾನ್ಸ್ಗೇಮ್ chain lame, ಬ್ಯಾಡ್ಮಿಂಟನ್ badminton, ಟೆನ್ನಿಸ್ tennis, ಫುಟ್ಬಾಲ್ football ಮತ್ತು cricket ಕ್ರಿಕೆಟ್ನಂತಹ ವಿವಿಧ ಆನ್ಲೈನ್ ಆಟಗಳಲ್ಲಿ online games ಅಕ್ರಮ ಬೆಟ್ಟಿಂಗ್ ನಡೆಯುತ್ತದೆ. ಆಪರೇಟರ್ಗಳು ಪ್ರತಿದಿನ 200 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಆನ್ಲೈನ್ ಬೆಟ್ಟಿಂಗ್ಗಾಗಿ ಭಾರತದಲ್ಲಿ online betting India ಸುಮಾರು 4,000 ಪ್ಯಾನಲ್ ಆಪರೇಟರ್ಗಳ ಜಾಲ ಕೆಲಸ ಮಾಡುತ್ತೆ. ಪ್ರತಿ ಪ್ಯಾನಲ್ ಆಪರೇಟರ್ ಬೆಟ್ ಮಾಡುವ 200 ಗ್ರಾಹಕರನ್ನು ಹ್ಯಾಂಡಲ್ ಮಾಡುತ್ತಾರೆ.
ಅಂತಹವರು ವೆಬ್ಸೈಟ್ಗಳಲ್ಲಿ ಸಂಪರ್ಕ ಸಂಖ್ಯೆಗಳನ್ನು ಪೋಸ್ಟ್ ಮಾಡುತ್ತಾರೆ. ಜನರನ್ನು ಜೂಜಿಗೆ ಉತ್ತೇಜಿಸಿ ಲಾಭ ಮಾಡಿಕೊಳ್ಳಿ ಅಂತಾರೆ. ಹಾಗೆ ಜೂಜಿಗೆ ಬಂದವರು ತಮ್ಮ ನಂಬರ್ ಕೊಡ್ತಾರೆ. ಅವರಿಗೆ ಸಂಖ್ಯೆಗಳನ್ನು ವಾಟ್ಸಪ್ಪಿನಲ್ಲಿ ಮಾತ್ರ (only in what`s app) ಶೇರ್ ಮಾಡಲಾಗುತ್ತದೆ. ಬಳಕೆದಾರರು ನೀಡಿದ ಸಂಖ್ಯೆಗಳಿಗೆ ತಲುಪಿದಾಗ, ಅವರಿಗೆ ಎರಡು ಪ್ರತ್ಯೇಕ ಸಂಪರ್ಕ ಸಂಖ್ಯೆಗಳನ್ನು ನೀಡಲಾಗುತ್ತದೆ. ಒಂದು ಹಣವನ್ನು ಠೇವಣಿ ಮಾಡಲು ಮತ್ತು ಬೆಟ್ಟಿಂಗ್ಗೆ ಬಳಸುವ ಬಳಕೆದಾರರ ಐಡಿಗಳಲ್ಲಿ ಅಂಕಗಳನ್ನು ಪಡೆಯಲು, ಇನ್ನೊಂದು ನಿಗದಿಪಡಿಸಿದ ಐಡಿಗಳಲ್ಲಿನ ಪಾಯಿಂಟ್ಗಳನ್ನು ಕ್ಯಾಶ್ ಔಟ್ ಮಾಡಲು ವೆಬ್ಸೈಟ್ ಅನ್ನು ಸಂಪರ್ಕಿಸಲು ನೀಡಲಾಗುತ್ತದೆ.
ಈ ವ್ಯವಸ್ಥೆಯಲ್ಲಿ ಆಪ್ʻನವರಿಗೆ ಶೇ.30 ಹೋದರೆ, ನಡೆಸುವವರಿಗೆ ಶೇ.70ರಷ್ಟು ಹಣ ಹೋಗುತ್ತದೆ. ಬೆಟ್ಟಿಂಗ್ನಲ್ಲಿ ಗೆದ್ದವರೂ ಬೆಟ್ಟಿಂಗ್ ನಡೆಸುವವರಿಗೆ ಇಂತಿಷ್ಟು ಎಂದು ಹಣ ಕೊಡಬೇಕು. ನಡೆಸುವವರಿಗೇ ಶೇ.70 ಕೊಟ್ಟರೆ ಆಪ್ʻನವರಿಗೆ ಸಮಸ್ಯೆ ಇಲ್ಲ. ಮಿಕ್ಕಿದ್ದೆಲ್ಲವನ್ನೂ ಸಂಭಾಳುಸುವ ಹೊಣೆ ನಡೆಸುವವರದ್ದೇ. ಹೀಗೆ ನಡೆಯುತ್ತೆ ಇವರ ಬೆಟ್ಟಿಂಗ್ ದಂಧೆ.
200 ಕೋಟಿಯ ಮದುವೆಯಿಂದಾಗಿ ಎಲ್ಲ ಬಯಲಾಯ್ತು..!
ಈ ವರ್ಷದ ಫೆಬ್ರವರಿಯಲ್ಲಿ ಬೆಟ್ಟಿಂಗ್ ಬಾಬು ಸೌರಭ್ ಚಂದ್ರಕರ್ ಯುಎಇಯಲ್ಲಿ ವಿವಾಹವಾಗಿದ್ದ. ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಆತ ಬರೋಬ್ಬರಿ 200 ಕೋಟಿ ರೂ. ಖರ್ಚು ಮಾಡಿದ್ದ. ಈ ಮದುವೆ ಎಷ್ಟು ಅದ್ಧೂರಿಯಾಗಿತ್ತೆಂದರೆ ಭಿಲಾಯ್ನಲ್ಲಿರುವ ತನ್ನ ಕುಟುಂಬವನ್ನು ಚಂದ್ರಕರ್ ಖಾಸಗಿ ವಿಮಾನ ಬಾಡಿಗೆಗೆ ಪಡೆದು ನಾಗ್ಪುರದಿಂದ ಯುಎಇಗೆ ಕರೆಸಿಕೊಂಡಿದ್ದ. ಮದುವೆಯಲ್ಲಿ ಅಲಂಕಾರ, ನೃತ ಎಲ್ಲವೂ ಅದ್ಧೂರಿಯಾಗಿ ಆಯೋಜನೆಯಾಗಿತ್ತು. ಎಲ್ಲರಿಗೂ ಕ್ಯಾಶ್ನಲ್ಲೇ ಹವಾಲಾ ಮೂಲಕ ಹಣ ಪಾವತಿಸಿದ್ದ. ಅಷ್ಟೇ ಅಲ್ಲದೆ ಮದುವೆಗೆ 14 ಬಾಲಿವುಡ್ ಸೆಲೆಬ್ರಿಟಿಗಳನ್ನೂ ಆಹ್ವಾನಿಸಿದ್ದ. ಇಷ್ಟಾಗುವ ಹೊತ್ತಿಗೆ ಸುದ್ದಿ ಜಾರಿ ನಿರ್ದೇಶನಾಲಯದ ಕಚೇರಿ ತಲುಪಿತ್ತು.
ಇಡಿಯವರು ವಿಚಾರಣೆ ನಡೆಸಿ ದೇಶದಾದ್ಯಂತ 39 ಕಡೆ ಏಕಕಾಲಕ್ಕೆ ದಾಳಿ ಮಾಡಿದರು. ದಾಳಿ ಮುಗಿದು ಲೆಕ್ಕ ಹಾಕಿದಾಗ ಇಡಿಯವರೂ ಅಚ್ಚರಿಗೊಳಗಾಗುವಂತೆ 417 ಕೋಟಿ ಮೌಲ್ಯದ ಆಸ್ತಿ, ಚಿನ್ನ, ಬೆಳ್ಳಿ, ವಜ್ರ ವೈಢೂರ್ಯಗಳು ಸಿಕ್ಕಿದ್ದವು.
ಅವರಿನ್ನೂ ಸಿಕ್ಕಿಲ್ಲ : ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಇನ್ನೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಸಿನಿಮಾ ಜಗತ್ತಿನಲ್ಲಿದ್ದ ನಟ ನಟಿಯರಿಗೂ ಹಣ ಕೊಟ್ಟಿದ್ದಾರೆ. ಆ ಹಣವನ್ನು ಈ ನಟ ನಟಿಯರು ಹವಾಲಾ ಮೂಲಕ ಸ್ವೀಕರಿಸಿದ್ದರೂ ಜೈಲು ಫಿಕ್ಸ್. ಅಥವಾ ಆರೋಪಿಗಳೊಂದಿಗೆ ಮದುವೆ ವ್ಯವಹಾರ ಬಿಟ್ಟು ಮಿಕ್ಕ ವ್ಯವಹಾರ ನಡೆಸಿದ್ದರೂ ಜೈಲು ಫಿಕ್ಸ್.



