ವೇದಿಕೆ ಏರಿದರೆ ಬೆಂಕಿಯುಗುಳುತ್ತಿದ್ದ ಚೈತ್ರಾ ಕುಂದಾಪುರ (Chaitha Kundapura), ಹಿಂದೂ ಹೋರಾಟಗಾರ್ತಿಯಾಗಿ (Hindu activist) ರೂಪುಗೊಳ್ಳುತ್ತಿದ್ದರು. ಕೆಲವರಂತೂ ಆಗಲೇ ಚೈತ್ರಾ ಕುಂದಾಪುರ ಅವರಲ್ಲಿ ಉಮಾಭಾರತಿ (Uma Bharathi) , ಶೋಭಾ ಕರಂದ್ಲಾಜೆ, (Shobha Karandlaje) ಸ್ಮೃತಿ ಇರಾನಿ (Smrithi Irani) , ದಿ.ಸುಷ್ಮಾ ಸ್ವರಾಜ್ (Sushma Swaraj) ಅವರನ್ನೆಲ್ಲ ಕಂಡಿದ್ದರು. ಈಗ ನೋಡಿದರೆ ಬಿಜೆಪಿ, ಮೋದಿಯ (narendra modi) ಹೆಸರಲ್ಲೇ ಟಿಕೆಟ್ ಕೊಡಿಸುತ್ತೇನೆ ಅಂತಾ ವಂಚನೆ ಮಾಡಿದ ಕೇಸಿನಲ್ಲಿ ಅರೆಸ್ಟ್ ಆಗಿ ಜೈಲುಪಾಲಾಗಿದ್ದಾರೆ.
ಪತ್ರಕರ್ತೆ..ಲೆಕ್ಚರರ್ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ (Chaitha Kundapura) ಅವರು ಮೂಲತಃ ಕುಂದಾಪುರದವರು (Kundapura). ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (Mangaluru University) 2013-2015ನೇ ಬ್ಯಾಚಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (mass communication and journalism) ವ್ಯಾಸಂಗ ಪೂರೈಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಬಳಿಕ ‘ಉದಯವಾಣಿ’ (Udayavani) ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ (Sub editor) , ಉಡುಪಿಯ ‘ಸ್ಪಂದನ’ (Spandana TV) ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ, (News Anchor) ಉಡುಪಿಯ ಅಜ್ಜರಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಯುವ ಮಾಧ್ಯಮ ರತ್ನ ಪ್ರಶಸ್ತಿ ಪಡೆದಿರುವ ಅವರು, ‘ಪ್ರೇಮ ಪಾಶ’ ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ವಿ.ವಿ. ವಿದ್ಯಾರ್ಥಿನಿಯಾಗಿದ್ದಾಗಲೂ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸಂಪರ್ಕದಿಂದ ಸಾಕಷ್ಟು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಪ್ರಖರ ಭಾಷಣಗಾರ್ತಿಯಾಗಿರುವ ಇವರು, ಹಲವು ಹಿಂದೂಪರ ಸಮಾವೇಶಗಳಲ್ಲೂ ಭಾಷಣಗಳನ್ನು ಮಾಡಿ ಗಮನ ಸೆಳೆದಿದ್ದರು. ಇವರ ಭಾಷಣಗಳು ವಿವಾದದ ಕಿಡಿಗಳನ್ನೂ ಹೊತ್ತಿಸಿವೆ. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ತಮ್ಮ ಭಾಷಣ ಹಾಗೂ ಬರಹಗಳಿಂದಾಗಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಹೀಗೆ ಚೈತ್ರಾ ಕುಂದಾಪುರ ಅನ್ನೋ ಹುಡುಗಿ ಸ್ನಾತಕೋತ್ತರ ಪದವೀಧರೆಯಾಗಿ, ಜರ್ನಲಿಸಂನಲ್ಲಿಯೇ ಡಬಲ್ ಡಿಗ್ರಿ ಮಾಡಿದ್ದವರು. ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಷ್ಟೇ ಅಲ್ಲ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸಬ್ ಎಡಿಟರ್ ಕೂಡಾ ಆಗಿದ್ದವರು. ಜೊತೆಗೆ ಲೋಕಲ್ ಕೇಬಲ್ ಚಾನೆಲ್ಲಿನಲ್ಲಿ ನ್ಯೂಸ್ ಆಂಕರ್ ಆಗಿದ್ದವರು. ಪ್ರಶಸ್ತಿ ಪಡೆದಿದ್ದವರು.
2018ರಲ್ಲಿಯೇ ಅನುಮಾನ :
ಚೈತ್ರಾ ಅವರು ಹಿಂದುತ್ವವನ್ನು ತಮ್ಮ ಪರ್ಸನಲ್ ಕೆಲಸಗಳಿಗೆ ಬಳಸಿಕೊಳ್ತಿದ್ದಾರೆ. ಬೇರೇ ಏನೋ ಇರುವಂತಿದೆ. ಈಕೆ ತಮ್ಮ ಪ್ರತಿ ಭಾಷಣಕ್ಕೂ ದುಡ್ಡು ಪಡೀತಾರೆ. ಇವರ ಕಾರಿನಲ್ಲಿ ರೌಡಿ ಮಾಡೆಲ್ಲುಗಳೇ ಇರ್ತಾರೆ. ಚಾಕು, ಮಚ್ಚಿನಂತಹ ಆಯುಧಗಳಿರ್ತಾವೆ. ಸಂಥಿಂಗ್ ಈಸ್ ರಾಂಗ್ ಎಂದು ಕೆಲವು ಹಿಂದೂಪರ ಹೋರಾಟಗಾರರು ಹಾಗೂ ಪತ್ರಕರ್ತರು ಅನುಮಾನ ವ್ಯಕ್ತಪಡಿಇದ್ದರು. ಅದೆಲ್ಲವೂ ನಿಜ ಎನ್ನುವಂತೆ ಇದೀಗ ಆರೋಪದಲ್ಲಿ ಜೈಲಿಗೆ ಹೋಗಿದ್ದಾರೆ ಚೈತ್ರಾ. ಆದರೆ ಈಕೆಗೆ ಈಕೆಯ ಮಾತಿಗೆ ಮಾರು ಹೋಗಿ, ಅದೂ ಒಬ್ಬ ಬಿಸಿನೆಸ್ ಮ್ಯಾನ್ ಐದಾರು ಕೋಟಿ ಕೊಡುವಷ್ಟು ಪೆದ್ದನಾ.? ಬೇರೆ ಏನೋ ಇರುವ ಹಾಗಿದೆ.



