ಖಾಸಗಿ ನೌಕರಿಗಳು ಸಿಗುತ್ತಲೇ ಇರುತ್ತವೆ. ಹೋಗುತ್ತಲೂ ಇರುತ್ತವೆ. ಆದರೆ ಸರ್ಕಾರಿ ಕೆಲಸಗಳು ಹಾಗಲ್ಲ. ಅಪರೂಪಕ್ಕೆ ದೊಡ್ಡ ಮಟ್ಟದಲ್ಲಿ ಸಿಗುತ್ತವೆ. ಸದ್ಯಕ್ಕೆ ರೈಲ್ವೇ ಇಲಾಖೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಉದ್ಯೋಗಳಿಗೆ, ರಾಜ್ಯ ಕೃಷಿ ಇಲಾಖೆಯಲ್ಲಿ ೯೪೫ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಪಿಯುಸಿ ಆದವರಿಗೆ ರೈಲ್ವೇ ಉದ್ಯೋಗ :
ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಎನ್ಟಿಪಿಸಿ (Railway Non Technical Popular Categories) ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆರ್ಆರ್ಬಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆನ್ ಲೈನಿನಲ್ಲೇ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಪಿಯು ಆಗಿದ್ದರೂ ಸಾಕು. ಮೂರು ಸಾವಿರಕ್ಕೂ ಅಧಿಕ ಖಾಲಿ ಹುದ್ದೆಗಳಿವೆ. ಈ ಯಾವ ಕೆಲಸಗಳು ತಂತ್ರಜ್ಞಾನ ಅಥವಾ ತಾಂತ್ರಿಕತೆ ಆಧರಿಸಿದ ಕೆಲಸಗಳಲ್ಲ.
ದೇಶದ್ಯಾಂತ ಈ ಹುದ್ದೆಗಳನ್ನು ಕಾಲ್ಫಾರ್ಮ್ ಮಾಡಿದ್ದು ಇದರಲ್ಲಿ ಬೆಂಗಳೂರಿಗೂ ಹುದ್ದೆಗಳು ಮೀಸಲಿವೆ. ಸಿಲಿಕಾನ್ ಸಿಟಿಗೆ ಒಟ್ಟು 60 ಹುದ್ದೆಗಳಿದ್ದು ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ವಯಸ್ಸು : 18 ರಿಂದ 33 ವರ್ಷ
ಆರ್ಆರ್ಬಿ- ಎನ್ಟಿಪಿಸಿ ಹುದ್ದೆ ವಿವರಗಳು:
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್- 2022
ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್- 361
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್- 990
ಟ್ರೈನ್ ಕ್ಲರ್ಕ್- 72
ಒಟ್ಟು ಖಾಲಿ ಹುದ್ದೆಗಳು- 3,445
ಅರ್ಜಿ ಶುಲ್ಕ :
ಜನರಲ್, ಒಬಿಸಿ, ಇಡಬ್ಲ್ಯೂಎಸ್- 500 ರೂಪಾಯಿಗಳು
ಎಸ್ಸಿ, ಎಸ್ಟಿ, ಪಿಹೆಚ್- 250 ರೂಪಾಯಿಗಳು
ಮಹಿಳಾ ಅಭ್ಯರ್ಥಿಗಳಿಗೆ – 250 ರೂಪಾಯಿಗಳು
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು
ವಿದ್ಯಾರ್ಹತೆ:
ಕನಿಷ್ಠ 12ನೇ ತರಗತಿ (ಪಿಯು) ಪೂರ್ಣಗೊಳಿಸಿರಬೇಕು
ಜನರಲ್, ಒಬಿಸಿ, ಇಡಬ್ಲ್ಯೂಎಸ್ ವರ್ಗದವರು ಕನಿಷ್ಠ ಶೇ.50ರಷ್ಟು ಅಂಕ ಪಡೆದಿರಬೇಕು
ಟೈಪಿಸ್ಟ್ಗೆ ಅರ್ಜಿ ಹಾಕುವರು ಇಂಗ್ಲಿಷ್, ಹಿಂದಿ ಟೈಪ್ ಮಾಡಬೇಕು
ಅಕ್ಟೋಬರ್ ೨೨ಅರ್ಜಿ ಹಾಕುವುದಕ್ಕೆ ಕಡೆಯ ದಿನಾಂಕ
ಹುದ್ದೆಗಳಿಗೆ ಅಪ್ಲೇ ಮಾಡಲು ಈ ಲಿಂಕ್ ಇದೆ- https://www.rrbapply.gov.in/#/auth/landing
ಸಂಪೂರ್ಣ ಮಾಹಿತಿಯ ಲಿಂಕ್- https://doc.sarkariresults.org.in/RRB_10plus2_NTPCFinal_Notification_CEN_06_2024_SarkariResult_COm.pdf
ಕೃಷಿ ಇಲಾಖೆಯಲ್ಲಿ 945 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೃಷಿ ಇಲಾಖೆಯ ಗ್ರೂಪ್ ‘ಬಿ’ ಹುದ್ದೆಗಳಾದ 86 ಕೃಷಿ ಅಧಿಕಾರಿಗಳು ಹಾಗೂ 586 ಸಹಾಯಕ ಕೃಷಿ ಅಧಿಕಾರಿಗಳು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್ ಕರ್ನಾಟಕ ವಿಭಾಗದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 42 ಕೃಷಿ ಅಧಿಕಾರಿಗಳು ಹಾಗೂ 231 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 945 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಅ.07ರಿಂದ ಅರ್ಜಿ ಸಲ್ಲಿಕೆ ಮಾಡಬಹುದು. ನವೆಂಬರ್ 07ಕ್ಕೆ ಕೊನೆಯ ದಿನಾಂಕ.
https://kpsc.kar.nic.in/AAO%20-%20AO_RPC_Notification.pdf
ಈ ಲಿಂಕ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೈದರಾಬಾದ್ ಕರ್ನಾಟಕ ವೃಂದದ ನೇಮಕಾತಿ ಅಧಿಸೂಚನೆ: https://kpsc.kar.nic.in/AAO%20-%20AO_HK_Notification.pdf ಲಿಂಕಿನಲ್ಲಿ ಸಿಗುತ್ತದೆ.



