ಒಂದು ಸ್ಮಾರ್ಟ್ ಫೋನ್ (Smart Phone) ಕನಿಷ್ಠ ಬೆಲೆ 10 ಸಾವಿರದಿಂದ ಶುರುವಾಗುತ್ತೆ. ಆದರೆ, ಮೊಬೈಲ್ ಇಂಟರ್`ನೆಟ್ಟಿನಲ್ಲಿ ಕ್ರಾಂತಿಯನ್ನೆ ಮಾಡಿದ್ದ ರಿಲಯನ್ಸ್ ಈಗ ಮೊಬೈಲ್ ಫೋನ್ ಜಗತ್ತಿಗೆ ಕಾಲಿಟ್ಟಿದೆ. 999 ರೂ.ಗೆ 4ಜಿ ಮೊಬೈಲ್ ಬಿಡುಗಡೆ ಮಾಡುತ್ತಿದೆ. ರಿಲಯನ್ಸ್ ಜಿಯೋ (Reliance JIO) ಕೇವಲ 999 ರೂಪಾಯಿಗೆ ಜಿಯೋ ಭಾರತ್ ವಿ2 4ಜಿ ಫೋನ್ (JIO bharth V2 4G) ಅನ್ನು ಅನಾವರಣ ಮಾಡಿದೆ. ಇದರ ಫರ್ಸ್ಟ್ ಲುಕ್ಅನ್ನು ಜಿಯೋ ಬಿಡುಗಡೆ ಮಾಡಿದ್ದು, ಇಂಟರ್ನೆಟ್ ಹೊಂದಿರುವ ಫೋನ್ಗಳ ಪೈಕಿ ಅತ್ಯಂತ ಕಡಿಮೆ ಬೆಲೆಯ ಫೋನ್ ಇದಾಗಿರಲಿದೆ. (JIO bharth V2 4G) ಎಲ್ಲಾ ವರ್ಗದ ಜನರಿಗೂ ಲಭ್ಯವಿರಲಿದೆ ಎಂದು ಜಿಯೋ ಹೇಳಿದ್ದು, ಫೋನ್ ಮಾತ್ರವಲ್ಲದೆ, ಅತೀ ಕಡಿಮೆ ಬೆಲೆಯಲ್ಲಿ ತಿಂಗಳ ಹಾಗೂ ವಾರ್ಷಿಕ್ ಪ್ಲ್ಯಾನ್ಗಳು ಇದಕ್ಕೆ ಇರಲಿವೆ ಎಂದು ತಿಳಿಸಿದೆ.
ಭಾರತದಲ್ಲಿಇಂದಿಗೂ 2ಜಿ ಇಂಟರ್ನೆಟ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ನಲ್ಲಿ ಏರ್ಟೆಲ್ ಅಥವಾ ವೊಡಾಫೋನ್ ಸಿಮ್ ಕಾರ್ಡ್ ಹೊಂದಿದ್ದಾರೆ. ಆದರೆ, ಜಿಯೋ 4ಜಿ ಹಾಗೂ 5ಜಿ ನೆಟ್ವರ್ಕ್ಗಳನ್ನು ಮಾತ್ರವೇ ಹೊಂದಿದೆ. ಇದರಿಂದಾಗಿ ಬಹಳ ಕಡಿಮೆ ಬೆಲೆಗೆ 4ಜಿ ಫೋನ್ (JIO bharth V2 4G) ಅನಾವರಣ ಮಾಡುವ ಮೂಲಕ 25 ಕೋಟಿಯಲ್ಲಿ ಕನಿಷ್ಠ 10 ಕೋಟಿ ಗ್ರಾಹಕರನ್ನು ತನ್ನತ್ತ ಸೆಳೆಯಬಹುದು ಎನ್ನುವ ನಿರೀಕ್ಷೆಯಲ್ಲಿ ರಿಲಯನ್ಸ್ ಕಂಪನಿ ಇದೆ. (JIO bharth V2 4G) ಜಿಯೋ ಭಾರತ್ ವಿ2 ಫೋನ್ ಬಳಸುವ ಗ್ರಾಹಕರು ತಮ್ಮ 28 ದಿನಗಳ ವ್ಯಾಲಿಡಿಟಿ ಪ್ಯಾಕ್ಗೆ ಕೇವಲ 123 ರೂಪಾಯಿ ಪಾವತಿ ಮಾಡಿದರೆ, ಸಾಕಾಗುತ್ತದೆ. ಇತರ ಕಂಪನಿಗಳಲ್ಲಿ 28 ದಿನಗಳ ಪ್ಯಾಕ್ 179 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಅದರೊಂದಿಗೆ (JIO bharth V2 4G) ಬಳಸುವರು 14 ಜಿಬಿ 4ಜಿ ಡೇಟಾ ಕೂಡ ಸಿಗುತ್ತದೆ. ಇನ್ನು ಏರ್ಟೆಲ್ ಹಾಗೂ ವೊಡಾಫೋನ್ ತಿಂಗಳಿಗೆ 2 ಜಿಬಿ ಡೇಟಾ ಮಾತ್ರವೇ ನೀಡುತ್ತದೆ. ಜಿಯೋ ಭಾರತ್ನ ವಾರ್ಷಿಕ ಸೇವೆಗೆ 1234 ರೂಪಾಯಿ ಪಾವತಿ ಮಾಡಿದರೆ ಸಾಕಾಗುತ್ತದೆ.
ಜಿಯೋ ಭಾರತ್-ವಿ2 ದಿಂದ ಇದೇ ನಿರೀಕ್ಷೆಗಳನ್ನು ಕಂಪನಿ ಹೊಂದಿದ್ದು, ಜುಲೈ 7 ರಿಂದ ಈ ಫೋನ್ನ ಬೀಟಾ ಪ್ರಯೋಗವನ್ನು ಮಾಡುವುದಾಗಿ ಘೋಷಣೆ ಮಾಡಿದ. ಕೇವಲ 71 ಗ್ರಾಮ್ ತೂಕದ ಫೋನ್ ಇದಾಗಿತ್ತು. 4ಜಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ನಲ್ಲಿ 4.5 ಸೆಂ.ಮೀ. ಪ್ರಮುಖ TFT ಸ್ಕ್ರೀನ್, 0.3 ಮೆಗಾಪಿಕ್ಸೆಲ್ ಕ್ಯಾಮೆರಾ, 1000 MAH ಬ್ಯಾಟರಿ, 3.5 MM ಹೆಡ್ಫೋನ್ ಜ್ಯಾಕ್, ಶಕ್ತಿಯುತ ಸ್ವೀಕರ್ ಮತ್ತು ಟಾರ್ಚ್ ಲಭ್ಯವಿದೆ. (JIO bharth V2 4G) ಮೊಬೈಲ್ನ ಗ್ರಾಹಕರು JIO Cinemas ಗೆ ಚಂದಾದಾರಿಕೆಯೊಂದಿಗೆ ಜಿಯೋ-ಸಾವನ್ನ 80 ಮಿಲಿಯನ್ ಹಾಡುಗಳ ಸೌಲಭ್ಯವನ್ನು ಪಡೆಯುತ್ತಾರೆ. ಗ್ರಾಹಕರು JioPay ಮೂಲಕ UPI ನಲ್ಲಿ ವಹಿವಾಟು ನಡೆಸಲು ಸಹ ಸಾಧ್ಯವಾಗುತ್ತದೆ.
ಚೀನಾ ಬಳಿಕ ವಿಶ್ವದಲ್ಲಿಯೇ ಗರಿಷ್ಠ ಮೊಬೈಲ್ ಫೋನ್ ಬಳಕೆದಾರರು ಭಾರತದಲ್ಲಿದ್ದರೂ, ಇಂದಿಗೂ ಭಾರತದ 25 ಕೋಟಿಗೂ ಅಧಿಕ ಜನ ಇಂಟರ್ನೆಟ್ ಫೋನ್ಗಳನ್ನು ಬಳಸುತ್ತಿಲ್ಲ. ಇಂದಿಗೂ ಅವರು 2ಜಿ ಇಂಟರ್ನೆಟ್ ಹೊಂದಿರುವ ಮೊಬೈಲ್ ಅಥವಾ ಫೀಚರ್ ಫೋನ್ಗಳನ್ನೇ ಬಳಕೆ ಮಾಡುತ್ತಿದ್ದಾರೆ. ಇವರೆಲ್ಲರನ್ನೂ ಗುರಿಯಾಗಿಟ್ಟುಕೊಂಡು ಅಗ್ಗದ ದರದಲ್ಲಿ 4ಜಿ ಫೋನ್ ಬಿಡುಗಡೆ ಮಾಡೋದಾಗಿ ರಿಲಯನ್ಸ್ ಜಿಯೋ ತಿಳಿಸಿತ್ತು. ಅದರಂತೆ ರಿಲಯನ್ಸ್ ಕೇವಲ 999 ರೂಪಾಯಿಗೆ ಜಿಯೋ ಭಾರತ್ ವಿ2 4ಜಿ ಫೋನ್ಅನ್ನು ಅನಾವರಣ ಮಾಡಿದೆ.



