(HD Kumaraswamy) ಕುಮಾರಸ್ವಾಮಿ, ಅನಿತಾ, ನಿಖಿಲ್ ಸೇರಿದಂತೆ ಎಲ್ಲರೂ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಫಿನ್`ಲ್ಯಾಂಡ್`ನಲ್ಲಿದ್ದರು. ಈ ನಡುವೆ ಡಿಕೆ ಶಿವಕುಮಾರ್ (DK ShivaKumar) ಸರ್ಕಾರವನ್ನು ಕೆಡವಲು ಸಿಂಗಾಪುರಕ್ಕೆ ಹೋಗುತ್ತಿದ್ದಾರೆ. ನನಗೆಲ್ಲ ಮಾಹಿತಿ ಇದೆ ಎಂದಿದ್ದರು. ಕುಮಾರಸ್ವಾಮಿ (HD Kumaraswamy) ಫಾರಿನ್ನಿನಲ್ಲಿರುವಾಗ ಇದು ಸಾಧ್ಯವೇ ಎಂಬುದು ಮೊದಲ ಪ್ರಶ್ನೆ. ಅಲ್ಲದೆ ಕಾಂಗ್ರೆಸ್ ಗೆದ್ದಿರೋದು 136 ಸ್ಥಾನ. ಆಪರೇಷನ್ ಮಿತಿಯಲ್ಲೂ ಇಲ್ಲ. ಜೊತೆಗೆ ಜೆಡಿಎಸ್ ಗೆದ್ದಿರುವುದು ಕೇವಲ 19 ಸ್ಥಾನ. ಹೀಗಿರುವಾಗ ಇದೆಲ್ಲ ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವವಾಗಿತ್ತು. ಅವುಗಳಿಗೆಲ್ಲ ಫುಲ್ ಸ್ಟಾಪ್ ಇಡುವಂತೆ ಕುಮಾರಸ್ವಾಮಿ ವಾಪಸ್ ಆಗಿದ್ದಾರೆ. ಜೊತೆಗೆ ಕೌಂಟರ್ ಕೂಡಾ ಕೊಟ್ಟಿದ್ದಾರೆ.
ನಾವು ಕುಟುಂಬ ಸಮೇತ ಹೋಗಿದ್ದು ಯುರೋಪ್ ಕಂಟ್ರಿಗೆ. ಆದ್ರೆ, ಬೆಳಗ್ಗೆ ನಾವು ಸರ್ಕಾರ ಕೆಡುವುದಕ್ಕೆ ಹೋಗಿದ್ದೇವೆ ಅನ್ನೋ ರೀತಿ ವಾತಾವರಣ ಸೃಷ್ಟಿ ಮಾಡಿದ್ದಾರೆ. (JDS) ಜೆಡಿಎಸ್ (HD Kumaraswamy) 19 ಸ್ಥಾನ ಗೆದ್ರು ಕೂಡಾ ಅವರಿಗೆ ನಮ್ಮ ಭಯ ಎಷ್ಟಿಗೆ ಅಂತಾ ನಾವು ಕಾಣಬಹುದು. ನಾನು ವಿದೇಶದಲ್ಲಿದ್ರು ಪ್ರತಿನಿತ್ಯದ ಬೆಳವಣಿಗೆಗಳನ್ನ ಗಮನಿಸಿದ್ದೇವೆ ಎಂದು ಕೌಂಟರ್ ಕೊಟ್ಟಿದ್ದಾರೆ ಹೆಚ್‍ಡಿ ಕುಮಾರಸ್ವಾಮಿ.
ಯಾಕೆ ಅವರು ಹಿಂಗೆ ಮಾಡ್ಕೊಂಡಿದ್ದಾರೆ ಗೊತ್ತಿಲ್ಲ. ಬಹುಶಃ ಅವರಿಗೆ ಈ ಸರ್ಕಾರದ ಅವಧಿ ಬಹಳ ದಿನ ಇರಲ್ಲ ಅಂತಾ ಅಂದ್ಕೊಂಡಿರಬೇಕು ಎಂದಿರುವ ಕುಮಾರಸ್ವಾಮಿ, ನಮ್ಮಗಿಂತ ಜಾಸ್ತಿ ಅವ್ರೆ ಶಾಸ್ತ್ರ ಕೇಳ್ತಾರೆ. ಜೋತಿಷ್ಯದವರನ್ನ ಬಹಳ ನಂಬಿರೋರು. ಹಲವಾರು ರೀತಿ ಕುತಂತ್ರಗಳನ್ನ ಮಾಡ್ತಾರೆ ಆ ಜೋತಿಷ್ಯದಲ್ಲಿ. ಅದರ ಕೃತಕವಾದ ಶಕ್ತಿಯನ್ನ ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರಲ್ಲ ಅಂತಾ ಅವರ ತಲೆಯಲ್ಲಿ ಇರಬಹುದು.ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದು ಅಟ್ಯಾಕ್ ಮಾಡಿದ್ದಾರೆ ಕುಮಾರಸ್ವಾಮಿ. ಅಷ್ಟೇ ಅಲ್ಲ, ಕುಮಾರಸ್ವಾಮಿ ಹೊಸ ಆರೋಪಗಳೂ ಅಷ್ಟೇ ಇಂಟ್ರೆಸ್ಟಿಂಗ್ ಆಗಿವೆ.
ಈಸ್ಟ್ ಇಂಡಿಯಾ ಕಂಪನಿ ಹೋದ್ರು ನಮ್ಮನ್ನ ಬಿಟ್ಟು, ಈಸ್ಟ್ ಇಂಡಿಯಾ ಕಂಪನಿ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟು ಹೋದ್ರು. ಈಗ ಈಸ್ಟ್ ಇಂಡಿಯಾ ಕಂಪನಿಯ ವಸೂಲಿಯನ್ನ ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ. ಇವ್ರು ಭ್ರಷ್ಟಾಚಾರ ನಿಲ್ಲಿಸ್ತಾರಾ..? ಹೊರನೋಟಕ್ಕೆ ಭ್ರಷ್ಟಾಚಾರ ಮಾಡೋರಣ ತೆಗೆದುಹಾಕಿ ಅಂತಾ ಹೇಳಿದ್ದಾರೆ. ಆದ್ರೆ, ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಸೂಲಿಗೆ ಕಾಂಗ್ರೆಸ್ ಪಕ್ಷ ಇರೋದು. ಬಿಡಿಎ ಅಧಿಕಾರಿಗಳಿಗೆ ಹೇಳ್ತಾರಾ 250 ಕೋಟಿ ಸಂಗ್ರಹ ಮಾಡಬೇಕು. ದೆಹಲಿಗೆ ಕಳುಹಿಸಬೇಕು ಅಂತಾ ಪಟ್ಟಿ ಕೊಡ್ತೇವೆ ಹಂಗೇ ಹೋಗಿ ಕೊಡಬೇಕು ಅಂತಾ ಅಧಿಕಾರಿಗಳಿಗೆ ಹೇಳ್ತಾರಂತೆ.
ಬಿಡಿಎ ಅಧಿಕಾರಿಗಳು ನನಗೆ ಹೇಳಿರೋ ಮಾಹಿತಿಯಿದು ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.
ಗುತ್ತಿಗೆದಾರರಿಗೆ ಇಂತಿಷ್ಟು ಪರ್ಸೇಂಟೆಜ್ ನೀಡೋಕ್ಕೆ ಹೇಳಿದ್ದಾರಂತೆ. ನಾನು ಯುರೋಪ್ ನಲ್ಲಿ ಇದ್ದಾಗಲೇ ಮಾಹಿತಿ ಬಂತು. ಬೆಂಗಳೂರಿನಲ್ಲೇ ಪರ್ಸೆಂಟೇಜ್ ನೀಡೋಕ್ಕೆ ಹೇಳ್ತಿದ್ದಾರಂತೆ. ಈ ಬಗ್ಗೆ ಗುತ್ತಿಗೆದಾರ ಸಂಘ ಮೀಟಿಂಗ್ ಮಾಡಬೇಕಿತ್ತಂತೆ. ಮಂತ್ರಿ, ಮಂತ್ರಿ ಚೇಲಾಗಳು ಪರ್ಸೆಂಟೇಜ್ ಕೇಳ್ತಾಯಿದ್ದಾರಂತೆ. ಇವರು ಹೋಗಿ ರಾಹುಲ್ ಗಾಂಧಿ ಮುಂದೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡ್ತಾರಂತೆ. ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು. ಪೊಲೀಸ್ ಅಧಿಕಾರಿಗಳನ್ನ ಆ ಮಟ್ಟಿಗೆ ಬಳಸಿಕೊಂಡ್ರೆ , ಪೊಲೀಸ್ರು ಜನ ಸಾಮಾನ್ಯರಿಗೆ ಯಾವ ಮಟ್ಟದ ರಕ್ಷಣೆ ನೀಡಬಹುದು. ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್ ನಲ್ಲಿ ಸಭೆ ನಡೆಯಬೇಕಿದ್ರೆ ಯಾರ್ ಇದ್ರು. ವೈಎಸ್ ವಿ ಟ್ಯಾಕ್ಸ್ ನವರು ಅಲ್ಲೇ ಇದ್ರು ಅಲ್ವಾ. ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್ ವಿ ಟ್ಯಾಕ್ಸ್ ನವರು ಯಾಕ್ ಇದ್ರು.
ಅವರನ್ನ ಇಟ್ಕೊಂಡು ಚರ್ಚೆ ಮಾಡಿದ್ರೆ ಈ ಆಡಳಿತ ಎಲ್ಲಿಗೆ ಬಂತು. ವರ್ಗಾವಣೆ ಮಾಡಿ ಅದನ್ನ ಮತ್ತೆ ವಾಪಸ್ ಪಡೆದುಕೊಂಡ್ರು ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ ಕುಮಾರಸ್ವಾಮಿ.



