Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಯಡಿಯೂರಪ್ಪರ ಒಂದು ಮಾತಿಗೆ ಜೆಡಿಎಸ್‌, ವಿ ಸೋಮಣ್ಣ ವಿಲವಿಲ..!

SpeciallU by SpeciallU
July 30, 2025
in News, Politics
Reading Time: 1 min read
0 0
0
ಯಡಿಯೂರಪ್ಪರ ಒಂದು ಮಾತಿಗೆ ಜೆಡಿಎಸ್‌, ವಿ ಸೋಮಣ್ಣ ವಿಲವಿಲ..!

ಬಿಎಸ್‌ ಯಡಿಯೂರಪ್ಪರ ಒಂದು ಮಾತು ಮುಟ್ಟಬಾರದ ಜಾಗಕ್ಕೆ ಮುಟ್ಟಿದೆ. ಜೆಡಿಎಸ್‌ ವಿಲವಿಲನೆ ಒದ್ದಾಡುತ್ತಿದ್ದರೆ, ಕೇಂದ್ರ ಸಚಿವ ವಿ ಸೋಮಣ್ಣ ಅವರಿಗೂ ಟೆನ್ಷನ್‌ ಶುರುವಾಗಿದೆ. ಏಕೆಂದರೆ..ಯಡಿಯೂರಪ್ಪನವರು ಪ್ರಯೋಗಿಸಿರುವ ರುದ್ರೇಶ್‌ ಅಸ್ತ್ರ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ 23 ತಿಂಗಳು ಬಾಕಿ ಇದೆ. ಅಂದರೆ ಪ್ಲಸ್‌ ಆರ್‌ ಮೈನಸ್‌ ಎರಡು ವರ್ಷ. ಹೀಗಿರುವಾಗಲೇ.. ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿಎಸ್ ಯಡಿಯೂರಪ್ಪ,  ಯಶವಂತಪುರ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ರೈತ ಮೋರ್ಛಾ ರಾಜ್ಯ ಉಪಾಧ್ಯಕ್ಷ ರುದ್ರೇಶ್ ಅವರನ್ನು ಘೋಷಣೆ ಮಾಡಿದ್ದಾರೆ.

ರುದ್ರೇಶ್ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಡಿಯೂರಪ್ಪ ಈ ವೇಳೆ ʻʻರುದ್ರೇಶ್‌ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ. ರುದ್ರೇಶ್ ಅವರಿಗೆ ಜನರ ಆಶೀರ್ವಾದವೂ ಸಿಗುವಂತೆ ಶ್ರಮಿಸಲಾಗುವುದು. ಶಾಸಕರಾಗಿ ರುದ್ರೇಶ್ ಅವರ ಆಯ್ಕೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಅಂದಹಾಗೆ ಈಗ ಯಶವಂತಪುರ ಕ್ಷೇತ್ರದ ಶಾಸಕರಾಗಿರುವುದು ಎಸ್‌ ಟಿ ಸೋಮಶೇಖರ್.‌ ಅವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗುವುದು ಸಾಧ್ಯವಿಲ್ಲದ ಮಾತು. ಅವರೀಗಾಗಲೇ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ.  ಆ ಸ್ಥಾನಕ್ಕೆ ರುದ್ರೇಶ್‌ ಅವರ ಹೆಸರು ಹೇಳಿದ್ದಾರೆ ಯಡ್ಯೂರಪ್ಪ.

ಜೆಡಿಎಸ್‌ ಆಕ್ರೋಶ :

ಇದರು ಮೈತ್ರಿ ಪಕ್ಷ ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ ಈ ಮಾತು ಹೇಳಿದಾಗ ಜೆಡಿಎಸ್‌ನ ಜವರಾಯಿ ಗೌಡ ಜೊತೆಯಲ್ಲೇ ಇದ್ದರು. ಜವರಾಯಿ ಗೌಡ, ಈ ಹಿಂದೆ ಎಸ್‌ ಟಿ ಸೋಮಶೇಖರ್‌ ವಿರುದ್ಧವೇ ಸೋತಿರುವ ಅಭ್ಯರ್ಥಿ. ಸೋಲಿನ ಹ್ಯಾಟ್ರಿಕ್‌ ಸಾಧಿಸಿರುವ ಜವರಾಯಿ ಗೌಡ, ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅದೇ ಬೂಮ್‌ ರಾಂಗ್‌ ಆದಂತೆ ಕಾಣ್ತಿದೆ.

ವಿ ಸೋಮಣ್ಣ ಟೆನ್ಷನ್‌  ಯಾಕೆ..?

ಎಂ.ರುದ್ರೇಶ್‌ ಟಿಕೆಟ್‌ ಘೋಷಣೆ ಮಾಡಿದ್ದಕ್ಕೆ ಬಿಜೆಪಿಯಲ್ಲಿಯೇ ಚರ್ಚೆ ಆರಂಭವಾಗಿದೆ. ತಮ್ಮ ಆಪ್ತನಿಗೆ ಈಗಲೇ ಟಿಕೆಟ್‌ ಘೋಷಣೆ ಮಾಡಿರುವುದು ಸರಿಯಲ್ಲ. ಜೆಡಿಎಸ್‌ ಜತೆಗೆ ಮೈತ್ರಿ ಇರುವಾಗ ಏಕಪಕ್ಷೀಯವಾಗಿ ಟಿಕೆಟ್‌ ಘೋಷಣೆ ಸರಿಯಲ್ಲ ಎಂದು ಪಕ್ಷದಲ್ಲೇ ಚರ್ಚೆಗಳು ಆರಂಭಗೊಂಡಿವೆ. ಅದಕ್ಕೆ ಕಾರಣವಾಗಿರುವುದು ವಿ ಸೋಮಣ್ಣ.

ಏಕೆಂದರೆ 2023ರಲ್ಲಿ ಎಂ ರುದ್ರೇಶ್‌ ಅವರು ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ವಿ ಸೋಮಣ್ಣ ಅವರಿಗೆ ಟಿಕೆಟ್‌ ಸಿಕ್ಕಿತ್ತು. ಬಹಿರಂಗವಾಗಿಯೇ ಬಿಜೆಪಿ ಟಿಕೆಟ್‌ ಘೋಷಣೆ ವಿರುದ್ಧ ಆಕ್ರೋಶ ತೋರಿಸಿದ್ದ ರುದ್ರೇಶ್‌, ಚುನಾವಣೆಯಲ್ಲಿ ತಟಸ್ಥವಾಗಿ ಉಳಿದು ಬಿಟ್ಟರು. ರುದ್ರೇಶ್‌ ಕೆಲಸ ಮಾಡಿದ್ದರೆ, ತಾವು ಸೋಲುವ ಸಂದರ್ಭವೇ ಬರುತ್ತಿರಲಿಲ್ಲ ಎಂದು ವಿ ಸೋಮಣ್ಣ ಹೈಕಮಾಂಡಿಗೆ ಹೇಳಿಕೊಂಡಿದ್ದರು. ಹೈಕಮಾಂಡ್‌ ಏನೇ ಗುರ್ರ್‌ ಎಂದರೂ, ಯಡಿಯೂರಪ್ಪ ಇದ್ದ ಕಾರಣ, ರುದ್ರೇಶ್‌ ಸೇಫ್‌ ಆಗಿದ್ದರು. ಈಗ ಮತ್ತೊಮ್ಮೆ ಯಡಿಯೂರಪ್ಪ ರುದ್ರೇಶ್‌ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಜೆಡಿಎಸ್‌ ಜೊತೆ.. ಸೋಮಣ್ಣ ಕೂಡಾ ಟೆನ್ಷನ್‌ ಆಗಿರುವುದು ಆ ಕಾರಣಕ್ಕೆ.

ಕಾರಣ.. ಇಷ್ಟೇ. ವಿ ಸೋಮಣ್ಣ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿದ್ದಾರೆ ಎಂಬ ಮಾತುಗಳು ಚರ್ಚೆಗೆ ಬರುತ್ತಿರುವಾಗಲೇ ಯಡಿಯೂರಪ್ಪ ಈ ಅಸ್ತ್ರ ಪ್ರಯೋಗ ಮಾಡಿರುವುದು. ರುದ್ರೇಶ್‌ ಅಸ್ತ್ರ, ಬಿಜೆಪಿಯ ಸೋಮಣ್ಣ ಪರ ನಿಂತಿರುವ ನಾಯಕರಿಗೂ ಒಂದು ಎಚ್ಚರಿಕೆ. ತಟ್ಟಬೇಕಾದ ಸ್ಥಳವನ್ನು ಈಗಾಗಲೇ ಅದು ತಟ್ಟಿದೆ.

ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ. 2008ರಲ್ಲೇ ಯಶವಂತಪುರಕ್ಕೆ ಅಭ್ಯರ್ಥಿಯಾಗಬೇಕಿತ್ತು. ಆದರೆ, ಪಕ್ಷದ ಸೂಚನೆ ಮೇರೆಗೆ ರಾಮನಗರಕ್ಕೆ ಹೋಗಿದ್ದೆ. ಟಿಕೆಟ್‌ ಸಂಬಂಧ ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಯಡಿಯೂರಪ್ಪ ಅವರು ನನ್ನ ಹೆಸರು ಘೋಷಣೆ ಮಾಡುವಾಗ ಜೆಡಿಎಸ್‌ನ ಜವರಾಯಿಗೌಡ ಸಹ ಇದ್ದು, ಖುಷಿಪಟ್ಟಿದ್ದಾರೆ. ನನ್ನ ಮೇಲಿನ ಪ್ರೀತಿಯಿಂದ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲಿ ಎಂದು ತೇಪೆ ಹೆಚ್ಚುವ ಪ್ರಯತ್ನ ಮಾಡಿದ್ದಾರೆ ರುದ್ರೇಶ್.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡಾ ಬಿ.ಎಸ್‌.ಯಡಿಯೂರಪ್ಪ ಅವರು ಹಿರಿಯರು. ಪಕ್ಷದ ಅಧ್ಯಕ್ಷರಾಗಿದ್ದವರು. ಪ್ರಸ್ತುತ ಸೆಂಟ್ರಲ್‌ ಎಲೆಕ್ಷನ್‌ ಕಮಿಟಿ ಸದಸ್ಯರು. ಎಂ.ರುದ್ರೇಶ್‌ ಅವರ ಮೇಲಿನ ಪ್ರೀತಿಯಿಂದ ಈ ಹೇಳಿಕೆ ನೀಡಿದ್ದಾರೆ. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್‌ ಮಾಡಲಿದೆ. ಟಿಕೆಟ್‌ ಕುರಿತು ನಮ್ಮ ಕೋರ್‌ ಕಮಿಟಿ ಚರ್ಚಿಸಲಿದೆ. ಸದ್ಯಕ್ಕೆ ಚುನಾವಣೆ ಇಲ್ಲ. ಯಾವುದೇ ಕ್ಷೇತ್ರದ ಟಿಕೆಟ್‌ ಅಂತಿಮ ಮಾಡುವುದು ಹೈಕಮಾಂಡ್‌. ಶಿಕಾರಿಪುರ ಸೇರಿ ಎಲ್ಲವನ್ನೂ ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಈ ವಿಷಯವನ್ನು ನಾನು ಹೆಚ್ಚು ಬೆಳೆಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ರುದ್ರೇಶ್‌, ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ. ಕೆಜೆಪಿ ಕಟ್ಟಿದಾಗಲೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದವರು. ಒಮ್ಮೆ ಎಲೆಕ್ಷನ್‌ ಸೋತಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ರುದ್ರೇಶ್‌ ಅವರಿಗೆ ಸ್ಥಾನಮಾನ ಗೌರವ ಕೊಟ್ಟಿದ್ದಾರೆ ಯಡಿಯೂರಪ್ಪ.

Tags: #ವಿಧಾನಸಭಾಚುನಾವಣೆ #ಯಶವಂತಪುರಕ್ಷೇತ್ರ #ರುದ್ರೇಶ್ #ಯಡಿಯೂರಪ್ಪ #ವಿಸೋಮಣ್ಣ #ಜೆಡಿಎಸ್ #AssemblyElections #YeshwantpuraConstituency #Rudresh #Yediyurappa #V Somanna #JDS
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.