ಧರ್ಮಸ್ಥಳದ ತಲೆಬುರುಡೆ ಕೇಸಿನಲ್ಲಿ ಮುಖ್ಯ ವಾಹಿನಿ ಮಾಧ್ಯಮಗಳು ಕವರೇಜ್ ಕಡಿಮೆ ಮಾಡುತ್ತಿದ್ದಂತೆಯೇ ಮತ್ತೆ ಡ್ರಾಮಾ ಶುರುವಾಯ್ತಾ..? ಹೀಗೊಂದು ಅನುಮಾನ ಮೂಡುವುದಕ್ಕೆ ಕಾರಣ ಇದೆ. ಚಿನ್ನಯ್ಯ, ಸುಜಾತಾ ಭಟ್ ಅವರ ಕೇಸು ಇಟ್ಟುಕೊಂಡು ನಾಟಕ ಮಾಡ್ತಿದ್ದ ತಿಮರೋಡಿ, ಜಯಂತ್, ಮಟ್ಟಣ್ಣವರ್, ಸಮೀರ್.. ಮೊದಲಾದವರೆಲ್ಲ ಮತ್ತೆ ಆಕ್ಟಿವ್ ಆಗುತ್ತಿದ್ದಾರೆ. ಇದೀಗ ಮತ್ತೊಂದಿಷ್ಟು ಬೆಳವಣಿಗೆ ನಡೆದಿವೆ.
ಬೆಳವಣಿಗೆ ನಂ.1 : ಜಯಂತ್ ವಿಡಿಯೋ
ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಮೂರು ಮನುಷ್ಯರ ಕಳೆಬರಹಗಳು ಸಿಕ್ಕಿದೆ. ಹತ್ತಿರ ಹತ್ತಿರ ಹತ್ತು ಫೀಟ್ ಗಳಲ್ಲಿ. ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು. ಸಣ್ಣ ಮಗುವಿನ ಎಲುಬು ಇದೆ ಅಂತ ಗೋಚರ ಆಗುತ್ತಿತ್ತು. ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಆ ವೇಳೆ ಹೆಣಗಳ ರಾಶಿಯೇ ಸಿಕ್ಕಿದೆ. ಹತ್ತಿರ ಹತ್ತಿರ ಹತ್ತು ಫೀಟ್ ಗಳಲ್ಲಿ. ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು. ಸಣ್ಣ ಮಗುವಿನ ಎಲುಬು ಇದೆ ಅಂತ ಗೋಚರ ಆಗುತ್ತಿತ್ತು. ಹೂತಿಟ್ಟ ಶವಗಳನ್ನು ಕಾಣದ ಹಾಗೇ ಮಾಡಲು ಮಣ್ಣು ತೆಗೆದು ಹಾಕಿದ ಹಾಗೇ ಕಾಣುತ್ತಿತ್ತು. ಐದಾರು ಫೀಟ್‌ನಲ್ಲಿ ಬುರುಡೆ ರಾಶಿ ಇದೆ. ಎಲುಬು ಅಲ್ಲಲ್ಲಿ ಸ್ಪ್ರೆಡ್ ಆಗಿದೆ.. ಎಂದೆಲ್ಲ ಹೇಳಿ ವಿಡಿಯೋ ಮಾಡಿದ್ದಾರೆ.
ಬೆಳವಣಿಗೆ ನಂ.2 : ರಾತ್ರಿ ಹೊತ್ತಲ್ಲಿ ಬಂದು ಎಸ್‌ಐಟಿಗೆ ತಿಮರೋಡಿ ದೂರು..!
ಧರ್ಮಸ್ಥಳ ಗ್ರಾಮದ ವ್ಯಾಪ್ತಿಗೆ ಸೇರಿರುವ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು “ಅಪರಿಚಿತ ಸಾವುಗಳ ಕುರಿತು ಗಂಭೀರ ಆರೋಪಗಳ ಬಗ್ಗೆ ತಿಮರೋಡಿ ಎಸ್‌ಐಟಿಗೆ ದೂರು ಕೊಟ್ಟಿದ್ದಾರೆ. ಇವು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವುದರಿಂದ ವಿಶೇಷ ತನಿಖಾ ದಳ (SIT) ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಖು ಎಂದು ದೂರು ಕೊಟ್ಟಿದ್ದಾರೆ. ದೂರು ಕೊಡುವುದಕ್ಕೆ ಬಂದಿರೋದು ರಾತ್ರಿ ಹೊತ್ತಿನಲ್ಲಿ.
ಬೆಳವಣಿಗೆ ನಂ.3 : ಮಟ್ಟಣ್ಣವರ್, ಜಯಂತ್ ವಿಚಾರಣೆ
ಧರ್ಮಸ್ಥಳ ಗ್ರಾಮದ ಬುರುಡೆ ಕೇಸಲ್ಲಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಹಾಗೂ ಟಿ.ಜಯಂತ್‌ರ ವಿಚಾರಣೆ ಗುರುವಾರವೂ ಮುಂದುವರಿದೆ. ಮಟ್ಟಣ್ಣವರ್ 7ನೇ ದಿನ ಹಾಗೂ ಜಯಂತ್‌ರನ್ನು 8ನೇ ದಿನ ವಿಚಾರಣೆ ನಡೆಸಲಾಗಿದೆ.
ಅನುಮಾನಗಳಿವೆ..!
ತಲೆ ಬುರುಡೆ ಅಥವಾ ಮೃತದೇಹಗಳ ಅವಶೇಷ ಸಿಕ್ಕರೆ ಅದನ್ನು ಪೊಲೀಸರು ಸಂಗ್ರಹ ಮಾಡಬೇಕು. ಅದು ತಹಸೀಲ್ದಾರ್ ಸಮಕ್ಷಮ ಇರಬೇಕು. ಮಹಜರು ವೇಳೆ ಅವರವರೇ ಇದ್ದುಕೊಂಡು ಮಹಜರ್ ಮಾಡುವಂತೆಯೇ ಇಲ್ಲ. ಆದರೆ.. ಹಾಗೆ ಹೋದ ಪೊಲೀಸರು ಅಂತಹ ಯಾವುದೇ ಸಾಕ್ಷಿ ಸಂಗ್ರಹ ಮಾಡಿಕೊಂಡು ಬಂದ ದೃಶ್ಯ ಕಂಡಿಲ್ಲ. ಮಾಧ್ಯಮಗಳನ್ನು ದೂರ ಇಟ್ಟಿದ್ದರೂ.. ಅದನ್ನು ಸಂಗ್ರಹಿಸಲು ಮೆಡಿಕಲ್ ಫೊರೆನ್ಸಿಕ್ ತಜ್ಞರು ಬರಬೇಕಲ್ಲವೇ.. ಅವರೂ ಬಂದಿಲ್ಲ.
ಎರಡನೆಯದಾಗಿ ಏನೋ ಸಿಕ್ಕಿತು, ಕಾನೂನು ಪ್ರಕಾರ ಸಾಕ್ಷಿ ಸಂಗ್ರಹಿಸಲು ಆಗ ಸಾಧ್ಯವಾಗಿಲ್ಲ ಎಂದುಕೊಂಡರೆ.. ಓಕೆ ಎನ್ನಬಹುದು. ಆದರೆ, ಆ ಸ್ಥಳಕ್ಕೆ ಭದ್ರತೆಯನ್ನಾದರೂ ಕಲ್ಪಿಸಬೇಕಲ್ಲವೇ..?
ಜಯಂತ್ ಅವರ ಈ ಹೇಳಿಕೆಗಳ ಕುರಿತೂ ಹಲವು ಪ್ರಶ್ನೆಗಳು ಮೂಡಿವೆ.



