ಓಗಾ ಓಗಾ ಎಲೆ
ಟೀ ಅಮೋ
ಒ ಮಿಗೋ ಮೀಗೋ
ಎಲೆ ಟೀ ಅಮೋ..
ಆ ಆಯೋನ ಟೀ ಅಮೋ..
ಟೀ ಅಮೋ..
ಏ ಓಗಾ ಓಗಾ ಓಗಾ
ಎಯ ಟೀ ಅಮೋ..
ನಂಬಿ.. ಇದನ್ನು ಬರೆದಿರುವುದು ಜಯಂತ ಕಾಯ್ಕಿಣಿ (Jayantha Kaykini). ಜಯಂತ್ ಕಾಯ್ಕಿಣಿಯವರ ಹೆಸರು ಕೇಳಿದರೆ ಚಿತ್ರ ಪ್ರೇಮಿಗಳ ಹೃದಯದಲ್ಲೊಂದು ಮಧುರ ಭಾವ ಮೂಡಿದರೆ ಆಶ್ಚರ್ಯವಿಲ್ಲ. ಸದಾ ಪ್ರೀತಿ, ಪ್ರೇಮ, ಮಾಧುರ್ಯ, ಪದಗಳ ಲಾಲಿತ್ಯದಲ್ಲೇ ಹೊಸ ಕಾವ್ಯ ಕಟ್ಟುವ ಜಯಂತ್ ಕಾಯ್ಕಿಣಿ, ಪ್ರೇಮಿಗಳ ಡಾರ್ಲಿಂಗ್ ಕೂಡಾ ಹೌದು. ಅಂತಹ ಕಾಯ್ಕಿಣಿ ಮಾಸ್ ಸಾಂಗ್ ಬರೆದರೆ.. ಹೇಗಿರುತ್ತೆ..? ಸಾಹಿತ್ಯದ ಸ್ಯಾಂಪಲ್ ಕೊಟ್ಟಿದ್ದೇವೆ. ಡೌಟ್ ಇದ್ರೆ ಒಂದ್ಸಲ ಬ್ಯಾಡ್ ಮ್ಯಾನರ್ಸ್ (Bad manners) ಚಿತ್ರದ ಟೈಟಲ್ ಸಾಂಗ್ ಕೇಳಿ ನೋಡಿ.
ದುನಿಯಾ ಸೂರಿ (Dunia Soori), ಕಾಯ್ಕಿಣಿಯವರ ಪೆನ್ನಿಗೆ ಅದೇನೋ ತುಂಬಿದ್ದಾರೆ. ಕಾಯ್ಕಿಣಿಯವರ ಈ ಸಾಹಿತ್ಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಪದಗಳೂ ತುಂಬಿವೆ. ನಡುವೆ ನಮ್ಮೂರ ನೆಂಟ, ಅಲೆಮಾರಿ ಸಂತ, ಮಂದಹಾಸ, ಪ್ರೀತಿ ನಿಷ್ಕಾರಣ, ಒಗಟು, ಹಬ್ಬಿದ ಒಂದೇ ಬಳ್ಳಿ, ಹನಿಯ ತವರು ಮೋಡ.. ದನಿಯ ತವರು ಹಾಡು.. ಎಂಬ ಸಾಲುಗಳೂ, ಪದಗಳೂ ಇವೆ. ಆದರೆ ಮ್ಯೂಸಿಕ್ ಮಾತ್ರ ಧಡ್ಡಂತ ಹೊಡೆಯೋ ಹಾಗಿದೆ.
ಕಪಿಲ್ ಕಾಪಿಲನ್ (kapil kapilan), ನಾರಾಯಣ ಶರ್ಮ (narayana sharma) ಹಾಡಿದ್ದು, ಚರಣ್ ರಾಜ್ (Charan Raj) ಅವರ ಸಂಗೀತ (Music)ಬೇರೆಯದ್ದೇ ಲೆವೆಲ್ಲಿನಲ್ಲಿದೆ. ಅಭಿಷೇಕ್ ಅಂಬರೀಷ್ (Abhishek Ambareesh) ಎದುರು ರಚಿತಾ ರಾಮ್ (Actress Rachitha ram) ನಾಯಕಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರಕ್ಕೆ ಕೆ.ಎಂ.ಸುಧೀರ್ ನಿರ್ಮಾಪಕ.
ರೌಡಿಸಂ (rowdysm) ಸಿನಿಮಾಗಳಿಗೆ ಹೊಸ ಟ್ರೆಂಡ್ ಡೈರೆಕ್ಟರ್ ಸೂರಿ. ಪಕ್ಕಾ ಲೋಕಲ್ ಸ್ಟೋರಿ ದುನಿಯಾ ಸಿನಿಮಾದಿಂದ ಶುರುವಾದ ಸೂರಿ ಸಿನಿ ಜರ್ನಿ, ಇಂತಿ ನಿನ್ನ ಪ್ರೀತಿಯ, ಜಾಕಿ, ಅಣ್ಣಾಬಾಂಡ್, ಕಡ್ಡಿಪುಡಿ, ಕೆಂಡಸಂಪಗೆ, ಟಗರು ಹೀಗೆ ಸಾಲು ಸಾಲು ಬಿಗ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಇದೀಗ ಸೂರಿ ರೆಬಲ್ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ಗೂ ಸಾರಥಿ. ಇಷ್ಟು ದಿನ ಸಿನಿಮಾ ಬಗ್ಗೆ ಯಾವ್ದೆ ಅಪ್ಡೇಟ್ ಕೊಡದ ಸೂರಿ ಈಗ ಸಿನಿಮಾದ ಹಾಡೊಂದನ್ನ ರಿಲೀಸ್ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಬರೆದ ಈ ಹಾಡಿಗೆ ಚರಣ್ ರಾಜ್ ಟ್ಯೂನ್ ಕೂರಿಸಿದ್ದು, ಬ್ಯಾಡ್ ಮ್ಯಾನರ್ಸ್ನ ಮಾಸ್ ಸಾಂಗ್ ಗಮನ ಸೆಳೆಯುತ್ತಿದೆ.
ಅಮರ್ ಸಿನಿಮಾದಲ್ಲಿ 10 ಪರ್ಸೆಂಟ್ ಅಭಿಷೇಕ್ನ ನೋಡಿದ್ರೆ ಇನ್ನುಳಿದ 90 ಪರ್ಸೆಂಟ್ ಈ ಸಿನಿಮಾದಲ್ಲಿ ನೋಡುತ್ತೀರಿ ಎನ್ನುತ್ತಿದ್ದಾರೆ ಅಭಿಷೇಕ್. ಸ್ಯಾಂಡಲ್ವುಡ್ನಲ್ಲಿ ಡೈರೆಕ್ಟರ್ ಮೇಲೆ ನಂಬಿಕೆ ಇಟ್ಟು ಸಿನಿಮಾ ಹೋಗುತ್ತೇವೆ ಎಂದರೆ ಅದರಲ್ಲಿ ಸೂರಿ ಹೆಸರು ಅಗ್ರಪಂಕ್ತಿಯಲ್ಲಿ ಬರುತ್ತದೆ. ಸೂರಿ ಸದ್ಯ ನಟ ಅಭಿಷೇಕ್ ಅಂಬರೀಶ್ಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನಿರ್ದೇಶನ ಮಾಡಿದ್ದು, ಅದರ ಚಿತ್ರೀಕರಣ ಮುಗಿದಿದೆ.



