ಶಿವಣ್ಣ, ರಜನಿಕಾಂತ್ ಅಭಿನಯದ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವುದೇ ಸೆನ್ಸೇಷನ್. ಈಗ ಆ ಚಿತ್ರವನ್ನು ಶಿವಣ್ಣ (Shiva Rajkumar) ಅವರ ಹಾರ್ಟ್ ಫೇವರಿಟ್ ಬ್ಯಾನರ್ ಡಿಸ್ಟ್ರಿಬ್ಯೂಷನ್ ಮಾಡ್ತಿದೆ. ಜಯಣ್ಣ ಕಂಬೈನ್ಸ್ ಮತ್ತೆ ಸುದ್ದಿಯಲ್ಲಿದೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಜೈಲರ್ (Jailor) ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ಕಮಾಲ್ ಮಾಡಿರೋ ಜೈಲರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಜಯಣ್ಣ ಕಂಬೈನ್ಸ್ ಪಾಲಾಗಿದೆ. ಜೈಲರ್ ಸಿನಿಮಾದಲ್ಲಿ ರಜನಿಕಾಂತ್ (Rajinikanth) ಜೊತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಜನಿ ಜೊತೆ ಶಿವಣ್ಣ ಆಕ್ಟ್ ಮಾಡಿದ್ದು ಇದೇ ಕಾರಣಕ್ಕೆ ಕನ್ನಡಿಗರಿಗೂ ಕೂಡ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಶಿವರಾಜ್ ಕುಮಾರ್ (Shiva Rajkumar) ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.
ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಕಾವಾಲ ಸಾಂಗ್ ಸಖತ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡಿಗೆ ತಮ್ಮನ್ನ (Tamanna Bhatiah) ಡಾನ್ಸ್ ಮಾಡಿದ್ದು ಇದೇ ಮೊದಲ ಬಾರಿಗೆ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಅವರಷ್ಟೇ ಅಲ್ಲ, ಜಾಕಿ ಶ್ರಾಫ್ (Jackie Shraff), ರಮ್ಯಾ ಕೃಷ್ಣ (RamyaKrishna) , ಯೋಗಿ ಬಾಬು, ಮಲಯಾಳಂ ಸ್ಟಾರ್ ಮೋಹನ್ ಲಾಲ್ (Mohanlal) ಸೇರಿದಂತೆ ಅನೇಕರು ನಟಿಸಿದ್ದಾರೆ. ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಆಗಸ್ಟ್`ನಲ್ಲಿ ರಿಲೀ ಆಗುತ್ತಿದೆ.
ರಜನಿಕಾಂತ್ ಚಿತ್ರಗಳು ಕರ್ನಾಟಕದಲ್ಲಿಯೂ ಭರ್ಜರಿ ಓಪನಿಂಗ್ ಪಡೆದುಕೊಳ್ತವೆ. ಸಖತ್ ಕಲೆಕ್ಷನ್ ಮಾಡುತ್ತವೆ. ಈ ಬಾರಿ ರಜನಿಕಾಂತ್ ಕ್ರೇಝ್ ಜೊತೆಗೆ ಶಿವಣ್ಣ ಕೂಡಾ ಸೇರಿಕೊಂಡಿದ್ದಾರೆ. ಜೈಲರ್ ಹಬ್ಬದೂಟ ಗ್ಯಾರಂಟಿ.



