ಕೆಲವು ಮೋಟರ್ ಬೈಕುಗಳಿಗೆ ಇರೋ ಕ್ರೇಜ್ ಬೇರೆಯೇ. ಯಮಹಾ, ಬುಲೆಟ್, ರಾಯಲ್ ಎನ್ ಫೀಲ್ಡ್, ಅವೆಂಜರ್.. ಮೊದಲಾದ ಬೈಕುಗಳ ಬಗ್ಗೆ ಇರೋ ಕ್ರೇಜ್ ಬೇರೆ. ಯಮಹಾ ಬೈಕಿನದ್ದಂತೂ ಬೇರೆಯದೇ ಕಥೆ. ಆ ಮಾಡೆಲ್ ಬರ್ತಿಲ್ಲ. ಹಳೆ ಬೈಕುಗಳನ್ನು ಎಲ್ಲಿ ಕಂಡ್ರೂ ಬೈಕ್ ಸೇಲ್ ಮಾಡ್ತೀರ ಅಂಥಾ ಕೇಳೋ ಮಂದಿ ಇರ್ತಾರೆ. ಯಮಹಾ ಬೈಕ್ ಇದ್ದವರು ಬೈಕ್ ಓಡಿಸುವಾಗ ರಾಜನಂತೆ.. ಬೈಕ್ ನಿಲ್ಲಿಸಿದಾಗ ಸೆಕ್ಯುರಿಟಿ ಗಾರ್ಡುಗಳಂತೆ ಕಾಯುತ್ತಲೇ ಇರುತ್ತಾರೆ. ಅಂತದ್ದೇ ಒಂದು ಕ್ರೇಜ್ ಜಾವಾ.. ಬೈಕಿನದ್ದು.
ಮೈಸೂರು ಮೂಲದ ಜನಪ್ರಿಯ ಐಡಿಯಲ್ ಜಾವಾ ಕಂಪನಿ ಇದೀಗ ಹೊಸ ಜಾವಾ 42 ಬೈಕನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. ನೂತನ ಬೈಕ್ ರಸ್ತೆಗಿಳಿಯುತ್ತಿದೆ. ಹೊಸ ಜಾವಾ 42 ಮೋಟಾರ್ ಸೈಕಲ್ನ ಬೆಲೆ ಎಷ್ಟಿದೆ? ವೈಶಿಷ್ಟ್ಯ ಹೇಗಿದೆ ತಿಳಿಯೋಣ.
ಹೊಸ ಬೈಕ್ ಸ್ಪೆಷಾಲಿಟಿ :
ನೂತನ ಬೈಕ್ ಆಕರ್ಷಕ ಲುಕ್ನಿಂದ ಕೂಡಿದೆ. ಹಿಂಭಾಗದ ವಿನ್ಯಾಸವು ಸೈಡ್ ಅಥವಾ ಸ್ಟಿಟ್ ಗ್ರ್ಯಾಬ್ ರೈಲ್ಗಳನ್ನು ಅಳವಡಿಸಿಕೊಂಡಿದೆ. ಡಬಲ್ ಎಕ್ಸಾಸ್ಟ್ ಸೇರಿ ವಿಭಿನ್ನ ನೋಟವನ್ನು ಈ ಬೈಕ್ ಹೊಂದಿದೆ. ಜಾವಾ 42 ಹೊಸದಾಗಿ ವಿನ್ಯಾಸಗೊಳಿಸಿದ ಸೀಟ್ ಅನ್ನು ಪರಿಚಯಿಸಿದೆ. ಜಾವಾ 42 ಬೈಕ್ ಟ್ವಿನ್ ಫ್ರಂಟ್ ಪೋರ್ಕ್ ಹೊಂದಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಸ್ಪೋಕ್, ಅಲಾಯ್ವೀಲ್ ಅಳವಡಿಸಿಕೊಂಡಿದೆ ಎನ್ನಲಾಗುತ್ತಿದೆ. ಇದರಲ್ಲಿ ಡಿಜಿಟಲ್ ಇನ್ಟ್ರುಮೆಂಟ್ ಕನ್ಸೋಲ್ ಇದ್ದು, ಎಲ್ಇಡಿ ಇಲ್ಯುಮಿನೇಷನ್ ಮತ್ತು ಡ್ಯುಯೆಲ್ ಚಾನೆಲ್ ಎಬಿಎಸ್ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್, ಜೊತೆಗೆ ಸ್ಪೀಪರ್ ಕ್ಲಚ್ ಹೊತೆಗೆ ಬರಲಿದೆ.
ಮಾರುಕಟ್ಟೆಗೆ ಬರುತ್ತಿರೋ ಜಾವಾ 42 ಬೈಕ್ 294.72ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಪವರ್ಟ್ರೇನ್ ಎಂಜಿನ್ ಬದಲಿಸಲೆಂದೇ 334 ಸಿಸಿಯೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಇದು 22.26 ಬಿಹೆಚ್ಪಿ ಇರಲಿದೆ. ಗ್ರಾಹಕರಿಗಾಗಿ ಆರು ಬಣ್ಣಗಳಲ್ಲಿ ಜಾವಾ ಬೈಕ್ ಬರಲಿದೆ.
ಜಾವಾ ಬೈಕ್ ಹಿಸ್ಟರಿ
ಇದು ಮೈಸೂರಿನ ಕಂಪೆನಿ. ಸದ್ಯಕ್ಕೆ ಈ ಸಂಸ್ಥೆಯ ಮಾಲೀಕರು ಮಹಿಂದ್ರಾದವರು. 2018ರ ನವೆಂಬರ್ ತಿಂಗಳಲ್ಲಿ ಪ್ರೊಡಕ್ಷನ್ ನಿಲ್ಲಿಸಿದ್ದ ಜಾವಾ ಕಂಪೆನಿ ಹೊಸ ಬೈಕ್ ರಿಲೀಸ್ ಮಾಡಿತ್ತು. ಅಗ ಡಾ.ರಾಜ್ ಕುಮಾರ್ ಅವರ ನಾ ನಿನ್ನ ಮರೆಯಲಾರೆ ಚಿತ್ರದ ಬೈಕ್ ರೇಸ್ & ಚೇಸಿಂಗ್ ದೃಶ್ಯದ ವಿಡಿಯೋ ಹಾಕಿ ರಿಲೀಸ್ ಮಾಡಿತ್ತು.
ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಬೈಕ್ ರೇಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಜ್‌ಕುಮಾರ್ ಅವರು ಚಿತ್ರದುದ್ದಕ್ಕೂ ಜಾವಾ ಬೈಕ್ ಅನ್ನೇ ಚಲಾಯಿಸುತ್ತಿರುತ್ತಾರೆ. ಆಗ ಚಿತ್ರ ಬಿಡುಗಡೆ ಆದಾಗ ಅಣ್ಣಾವ್ರು ಚಲಾಯಿಸಿದ್ದ ಜಾವಾ ಬೈಕ್ ಭಾರಿ ಟ್ರೆಂಡ್ ಆಗಿತ್ತು. ಆಗಿನ ಯುವಕರಿಗೆ ಜಾವಾ ಬೈಕ್‌ನ ಹುಚ್ಚು ಹತ್ತಿಸಿದ್ದು ಇದೇ ‘ನಾ ನಿನ್ನ ಮರೆಯಲಾರೆ’ ಚಿತ್ರ.
ಜಾವಾ ಬೈಕುಗಳಿಗೆ ಚಾಲೆಂಜ್ ಮಾಡುವುದು ವಿಶೇಷವಾಗಿ ರಾಯಲ್ ಎನ್‌ಫೀಲ್ಡ್. ಆದರೆ ಜಾವಾ 350ಗೂ, ರಾಯಲ್ ಎನ್ ಫೀಲ್ಡ್ 350ಗೂ ಬೆಲೆಯಲ್ಲಿ ವ್ಯತ್ಯಾಸ ಇದ. ಅಂದರೆ ಹೆಚ್ಚೇನಿಲ್ಲ, ರಾಯಲ್ 350 2ಲಕ್ಷ ಇದ್ದರೆ, ಜಾವಾ 350 1 ಲಕ್ಷದ 99 ಸಾವಿರ. ಎರಡೂ ಕೂಡಾ ಪೆಟ್ರೋಲ್ ವೆಹಿಕಲ್ʻಗಳು. ಎರಡೂ ಬೈಕುಗಳಿಗೆ ರೆಟ್ರೋ ಖ್ಯಾತಿ ಇದೆ.



