ಉಪೇಂದ್ರ ದಂಪತಿಗೆ ವಂಚಿಸಿದ್ದು ಒಬ್ಬ ವ್ಯಕ್ತಿ ಅಲ್ಲ. ಅದೊಂದು ಸಿಂಡಿಕೇಟ್. ಅದನ್ನು ʻಜಮ್ತಾರಾ ಗ್ಯಾಂಗ್ʼ ಎಂದೂ ಕರೆಯುಬಹುದು. ಉಪೇಂದ್ರ, ಅವರ ಹೆಂಡತಿ ಪ್ರಿಯಾಂಕಾ ಮತ್ತು ಮಗನಿಗೆ ಮೋಸ ಆಗಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ಕಳ್ಕೊಂಡಿದ್ದು ಬೆಂಗಳೂರಿನಲ್ಲಿ. ಮೋಸ ಮಾಡಿದವನು ಇದ್ದದ್ದು ಬಿಹಾರದಲ್ಲಿ. ಆದರೆ.. ಅರೆಸ್ಟ್ ಮಾಡೋಕೆ ಹೋದ ಪೊಲೀಸರಿಗೇ ಅಲರ್ಟ್ ಆಗುವಂತೆ ಜಮ್ತಾರಾ ಗ್ಯಾಂಗ್ ಕಥೆ ಹೊರಬಿದ್ದಿದೆ. ಆದರೆ.. ಏನೂ ಮಾಡೋದಕ್ಕೆ ಸಾಧ್ಯವಾಗದೆ ಒಬ್ಬನನ್ನು ಮಾತ್ರ ಅರೆಸ್ಟ್ ಮಾಡಿ ಕರೆದುಕೊಂಡು ಬಂದಿದ್ದಾರೆ. ಆ ಜಮ್ತಾರಾದಲ್ಲಿ ಮೊಬೈಲ್, ಇಂಟರ್ ನೆಟ್ ಇದ್ದವರು ಇದ್ದವರು ಯಾವುದೋ ಮರದ ಕೆಳಗೆ ಕುಳಿತು ಮೊಬೈಲ್ ನೋಡ್ತಾ ಇದ್ದಾರೆ ಅಂದ್ರೆ.. ಅವರು ರೀಲ್ಸ್ ನೋಡ್ತಾನೋ.. ಪೋರ್ನ್ ನೋಡ್ತಾನೋ ಖುಷಿ ಪಡ್ತಿದ್ದಾನೆ/ಳೆ ಅಂದ್ಕೋಬೇಡಿ. ಯಾವನೋ ಬಕ್ರಾ ಸಿಕ್ಕಿದ್ದಾನೆ ಅಂತ ಅರ್ಥ. ಅಷ್ಟು ದೊಡ್ಡ ಮಟ್ಟದ ಕ್ರೈಂ ನಡೆಯುವ ಊರು.. ಇಷ್ಟಕ್ಕೂ ಜಮ್ತಾರಾ ಗ್ಯಾಂಗ್ ಎಂದರೇನು..?
ಜಮ್ತಾರಾ ಎಂದರೆ ಏನು ಎನ್ನುವುದು ಸೈಬರ್ ಕ್ರೈಂ ಗೊತ್ತಿರುವವರಿಗೆ ಅರಿವು ಇರುತ್ತೆ. ಜಮ್ತಾರಾ ಅನ್ನೋ ಊರು ಇರೋದು ಜಾರ್ಖಂಡ್‌ನಲ್ಲಿ. ದೇಶದಲ್ಲಿ ನಡೆಯುವ ಸೈಬರ್ ಕ್ರೈಂಗಳಲ್ಲಿ ಶೇ.8ರಿಂದ 10ರಷ್ಟು ಸೈಬರ್ ಕ್ರೈಂ ನಡೆಯುವುದು ಈ ಊರಿನಲ್ಲಿ. ಸಾವಿರಾರು ಯುವಕ, ಯುವತಿಯರು ಪ್ರತಿದಿನ ಎದ್ದು ಮಾಡುವ ಕೆಲಸವೇ ಮೋಸ. ಇದೊಂದು ಪುಟ್ಟ ಊರು. ಆದರೆ.. ನೆಟ್ ವರ್ಕ್ ಬೊಂಬಾಟ್. ಮೊಬೈಲ್, ಇಂಟರ್ ನೆಟ್ ಇದ್ದವರು ಇದ್ದವರು ಯಾವುದೋ ಮರದ ಕೆಳಗೆ ಕುಳಿತು ಮೊಬೈಲ್ ನೋಡ್ತಾ ಇದ್ದಾರೆ ಅಂದ್ರೆ.. ಅವರು ರೀಲ್ಸ್ ನೋಡ್ತಾನೋ.. ಪೋರ್ನ್ ನೋಡ್ತಾನೋ ಖುಷಿ ಪಡ್ತಿದ್ದಾನೆ/ಳೆ ಅಂದ್ಕೋಬೇಡಿ. ಯಾವನೋ ಬಕ್ರಾ ಸಿಕ್ಕಿದ್ದಾನೆ ಅಂತ ಅರ್ಥ. ಅಷ್ಟು ದೊಡ್ಡ ಮಟ್ಟದ ಕ್ರೈಂ ನಡೆಯುವ ಊರದು.
2017ರ ನಂತರ ಈ ಊರಿನಲ್ಲಿ ನಡೆಯುವ ಸೈಬರ್ ಕ್ರೈಂ ಕಡಿಮೆಯಾಗಿದ್ದರೂ.. ಬೇರೆ ಬೇರೆ ಕಡೆ ಸೈಬರ್ ಕ್ರೈಂ ಮಾಡಿ ಸಿಗುತ್ತಿರುವವರ ಮೂಲ ಇದೇ ಜಮ್ತಾರಾದಲ್ಲಿದೆ. ಈಗ ಬಿಹಾರದಲ್ಲಿ ಸಿಕ್ಕಿರುವ ದಶರಥಪುರದಲಿಯೂ ಇಂತಹುದೇ ಒಂದು ಗ್ಯಾಂಗ್ ಇದೆ.
ಉಪೇಂದ್ರ ಕೇಸಿನಲ್ಲಿ ಅರೆಸ್ಟ್ ಆದವನು ಬಿಹಾರದವನು. ಬಿಹಾರದ ನಳಂದಾ ಜಿಲ್ಲೆಯ ದಶರಥಪುರದ ನಿವಾಸಿ. ಹೆಸರು ವಿಕಾಸ್ ಕುಮಾರ್. ಆದರೆ.. ಬಿಹಾರದ ದಶರಥಪುರದಲ್ಲಿಯೇ ಇಂತಹ ಕೆಲಸ ಮಾಡ್ತಾ ಇರೋ ಹಲವಾರು ಯುವಕರಿದ್ದಾರೆ. ಅದು ಇನ್ನೊಂದು ಜಮ್ತಾರಾ.
ಉಪೇಂದ್ರ ಅವರಿಗೆ ವಂಚನೆ ಮಾಡಿದ್ದವನು ವಿಕಾಸ್ ಕುಮಾರ್. ಆತನಂತೆಯೇ ಸುಮಾರು 20-25 ವಯಸ್ಸಿನ ನೂರಾರು ಯುವಕರು ಸೈಬರ್ ಕ್ರೈಂ ಮಾಡುವುದನ್ನೇ ವೃತ್ತಿ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಪ್ರಕಾರ 200ಕ್ಕೂ ಹೆಚ್ಚು ಯುವಕರು. ಅವರದ್ದೊಂದು ಸಿಂಡಿಕೇಟ್ ಇದೆ ಕೂಡಾ ಇದೆ ಎಂದು ವಿಕಾಸ್ ಕುಮಾರ್ ಬಾಯಿಬಿಟ್ಟಿದ್ದಾನೆ.
ಆರೋಪಿಗಳು ಪ್ರಿಯಾಂಕಾ ಉಪೇಂದ್ರ ಅವರಿಗೆ ಒಂದು ಪಾರ್ಸೆಲ್ ಕಳಿಸಿದ್ದೇವೆ ಎಂದು ಹೇಳಿ ಫೋನ್ ಮಾಡಿ, ಮನೆಗೆ ತರುವುದಕ್ಕೆ ಅಡ್ರೆಸ್ ಸಿಗ್ತಾ ಇಲ್ಲ. ಒಟಿಪಿ ಕಳಿಸಿ ಎಂದು ಕೇಳಿದ್ದರು. ಆನಂತರ ಒಟಿಪಿ ಸಿಗ್ತಾ ಇಲ್ಲ ಎಂದು ಹೇಳಿದ್ದರಷ್ಟೇ ಅಲ್ಲ.. *21*92792951167# ಈ ನಂಬರ್ ಡಯಲ್ ಮಾಡುವಂತೆ ಹೇಳಿದ್ದರು. ಇದು ಆಕ್ಚುವಲಿ ಬೇಸಿಕ್ ಸಿಸ್ಟಂ. ನೀವು ಕೂಡಾ ಇದನ್ನು ಟ್ರೈ ಮಾಡಬಹುದು. ಅಂದರೆ ನಿಮ್ಮ ಹತ್ತಿರದವರ ಪತಿ, ಪತ್ನಿ, ಗೆಳೆಯ.. ಇಂತಹವರ ನಂಬರ್ ತೆಗೆದುಕೊಂಡು *21* ಡಯಲ್ ಮಾಡಿ.. ಅವರ ಮೊಬೈಲ್ ನಂಬರ್ ಟೈಪ್ ಮಾಡಿ # ಟೈಪ್ ಮಾಡಿದರೆ.. ಸಾಕು. ನಿಮ್ಮ ಫೋನ್ ಕಾಲ್, ಮೆಸೇಜ್ ಎಲ್ಲವೂ ಅವರ ನಂಬರಿಗೇ ಹೋಗುತ್ತವೆ. ಕಾಲ್ ಫಾರ್ವರ್ಡ್ ಆಗುತ್ತದೆ. ಮೆಸೇಜ್ ಫಾರ್ವರ್ಡ್ ಆಗುತ್ತದೆ. ಅದನ್ನು ರಿಮೂವ್ ಮಾಡಿಕೊಳ್ಳೋದು ಕಷ್ಟವೇನಲ್ಲ. ಕಾಲ್ ಸೆಟ್ಟಿಂಗ್ಸ್‌ಗೆ ಹೋಗಿ ಕಾಲ್ ಫಾರ್ವರ್ಡ್ ರಿಮೂವ್ ಕೊಟ್ಟರೆ ಆಯಿತು. ಆದರೆ.. ಬಹುತೇಕರಿಗೆ ಇದು ಗೊತ್ತಿರೋದಿಲ್ಲ. ಪ್ರಿಯಾಂಕಾ, ಉಪೇಂದ್ರ.. ಮತ್ತವರ ಮಗ.. ಎಲ್ಲರೂ ಹಾಗೆಯೇ ಪಿಗ್ಗಿ ಬಿದ್ದಿದ್ದರು. ಒಂದೂವರೆ ಲಕ್ಷ ಕಳೆದುಕೊಂಡಿದ್ದರು. ಈಗ ಒಬ್ಬ ಅರೆಸ್ಟ್ ಅಗಿದ್ದಾನೆ. ಆದರೆ.. ಅಲ್ಲಿರೋದು ಒಬ್ಬ ಅಲ್ಲ. ಒಂದು ಸಿಂಡಿಕೇಟ್. ಜಮ್ತಾರಾದಂತೆಯೇ ಸೈಬರ್ ಕ್ರೈಂ ಸಿಂಡಿಕೇಟ್.
ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಮಗನಿಗೆ ವಂಚನೆ ಮಾಡಿದ್ದ ಪ್ರಕರಣ ಸೆಪ್ಟೆಂಬರಿನಲ್ಲಿ ನಡೆದಿತ್ತು. ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟು, ಬರುವ ದಾರಿಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು.. ಯಾರೂ ಹಣ ಹಾಕಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದರು. ಆವತ್ತು ಅವರು ಕಳೆದುಕೊಂಡಿದ್ದು ಒಂದು ಲಕ್ಷದ 65 ಸಾವಿರ. ಆವತ್ತು ಹಾಗೆ ವಂಚನೆ ಮಾಡಿದ್ದವನು.. 2 ತಿಂಗಳ ನಂತರ ಅರೆಸ್ಟ್ ಆಗಿದ್ದಾನೆ. ಜಮ್ತಾರಾ ಮಾಡೆಲ್ ದರೋಡೆ ಗೊತ್ತಾಗಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಆದರೆ.. ಗೊತ್ತಾದರೂ ಪೊಲೀಸರು ಅರೆಸ್ಟ್ ಮಾಡೋಕೆ ಆಗಲ್ಲ. ಅವರ ವಿರುದ್ಧ ಪ್ರತ್ಯೇಕವಾಗಿಯೇ ತನಿಕೆ ಆಗಬೇಕು. ಕಂಪ್ಲೇಂಟ್ ಆಗಬೇಕು. ದೂರನ್ನೇ ಕೊಡದಿದ್ದರೆ ಪೊಲೀಸರಾದರೂ ಪಾಪ ಏನು ಮಾಡಬೇಕು..



