ಶಿವಣ್ಣನ ಘೋಸ್ಟ್ (Ghost) ಚಿತ್ರದ ಮೇಲಿನ ನಿರೀಕ್ಷೆ ದಿನೇ ದಿನೇ ಏರುತ್ತಿದೆ. ಅದಕ್ಕೆ ತಕ್ಕಂತೆ ಜೈಲರ್ (Jailer) ಚಿತ್ರದ ನರಸಿಂಹನ (Narasimha) ಪಾತ್ರಕ್ಕೆ ಸಿಕ್ಕ ಮೆಚ್ಚುಗೆ, ಹೈಪ್ ಶಿವಣ್ಣನ (Shiva Rajkumar) ಕ್ರೇಜ್ ಗಡಿ ದಾಟಿ ಹೋಗುವಂತೆ ಮಾಡಿದೆ. ಅದೆಲ್ಲದರ ಎಫೆಕ್ಟ್ ಘೋಸ್ಟ್ (Ghost) ಚಿತ್ರಕ್ಕೆ ಬೇರೆ ಭಾಷೆಗಳಲ್ಲಿ ದೊಡ್ಡ ಮಟ್ಟದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸಿನಿಮಾದದ ಥಿಯೇಟರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು (digital rights) ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆಯಂತೆ. ಇದರಿಂದ ನಿರ್ಮಾಪಕರು ಲಾಭ ಕಂಡಿದ್ದಾರೆ.
ಸಂದೇಶ್ ಪ್ರೊಡಕ್ಷನ್ಸ್ (Sandesh productions) ಬ್ಯಾನರ್ ಅಡಿಯಲ್ಲಿ ಸಂದೇಶ್ ಎನ್ ಅವರು ‘ಘೋಸ್ಟ್’(Ghost) ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀನಿ (Shreeni) ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಿವರಾಜಕುಮಾರ್, ಅನುಪಮ್ ಖೇರ್ (Anupam Kher) ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಘೋಸ್ಟ್’ ಸಿನಿಮಾ ಅಕ್ಟೋಬರ್ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುತ್ತಿದೆ.
‘RRR, ‘ಜವಾನ್’(javan) ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಅನುಭವ ‘ಪೆನ್ ಸ್ಟುಡಿಯೋ’ ಸಂಸ್ಥೆಗೆ ಇದೆ. ಈ ಸಂಸ್ಥೆ ಈಗ ‘ಘೋಸ್ಟ್’(Ghost) ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ. ಅಂದಹಾಗೆ, ಎಷ್ಟು ಕೋಟಿ ಬಿಸ್ನೆಸ್ ಆಗಿದೆ ಎನ್ನುವ ಲೆಕ್ಕಾಚಾರವನ್ನು ತಂಡದವರು ನೀಡಿಲ್ಲ.
ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತದೆ ಎಂದರೆ ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡಬೇಕಾಗುತ್ತದೆ. ‘ಘೋಸ್ಟ್’ ತಂಡ ಕೂಡ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲು ನಿರ್ಧರಿಸಿದೆ. ಶಿವರಾಜಕುಮಾರ್ ಅವರು ಅಕ್ಟೋಬರ್ ಮೊದಲ ವಾರದಲ್ಲಿ ಮುಂಬೈ, ದೆಹಲಿ ಮೊದಲಾದ ಕಡೆ ತೆರಳಿ ಚಿತ್ರದ ಪ್ರಚಾರ ಮಾಡಲಿದ್ದಾರೆ.
ಮೂಲಗಳ ಪ್ರಕಾರ ಹಿಂದಿಯಲ್ಲಿ 16 ಕೋಟಿ ಬಿಸಿನೆಸ್ ಮಾಡಿದೆಯಂತೆ ಘೋಸ್ಟ್. ಶಿವಣ್ಣನ ಹಿಂದಿನ ಚಿತ್ರಗಳಿಗೆ ಹೋಲಿಸಿದ್ರೆ ಇದು ಅತಿ ದೊಡ್ಡ ಮೊತ್ತ.
ನಿರ್ದೇಶಕ ಎಂ.ಜಿ ಶ್ರೀನಿವಾಸ್ ಚಿತ್ರ ಘೋಷಣೆ ಆದ ದಿನದಿಂದಲೂ ಹೊಸ ರೀತಿಯಲ್ಲಿಯೇ ಸಿನಿಮಾವನ್ನು ನೋಡುಗರಿಗೆ ಪ್ರಸೆಂಟ್ ಮಾಡುತ್ತಿದ್ದಾರೆ. ಮೇಕಿಂಗ್, ಮ್ಯೂಸಿಕ್ ಹೀಗೆ ವಿಚಾರಗಳಿಗೆ ಸಂಬಂಧಿಸಿದಂತೆ ಸಿನಿಮಾ ಕುತೂಹಲ ಸೃಷ್ಟಿಸುತ್ತಿದೆ. ಇದೀಗ ಸಿನಿಮಾ ರಿಲೀಸ್ ಹತ್ತಿರ ಬಂದಂತೆ ಮತ್ತಷ್ಟು ಕಂಟೆಂಟ್ಗಳನ್ನು ಜನರ ಮಡಿಲಿಗೆ ಹಾಕಲು ನಿರ್ಧರಿಸಿದೆ. ಅದರಂತೆ ಈಗ ಒಜಿಎಂ ರಿಲೀಸ್ ಮಾಡಲು ತಂಡ ಪ್ಲಾನ್ ಮಾಡಿದೆ. ಅಕ್ಟೋಬರ್ ಮೊದಲವಾರ ಘೋಸ್ಟ್ ಚಿತ್ರದ ಪ್ರಚಾರಕ್ಕಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ.



