ಜೈಲೂಟ ಸೆಟ್ಟಾಗುತ್ತಿಲ್ಲ. ದರ್ಶನ್ ತೂಕ ಇಳಿಯುತ್ತಿದೆ.. ಭಿಕ್ಷೆ ಬೇಡೋ ಪರಿಸ್ಥಿತಿ ಇದೆ. ದಯವಿಟ್ಟು ಸ್ವಲ್ಪ ರಿಲ್ಯಾಕ್ಸ್ ಕೊಡಿ ಎನ್ನುತ್ತಿದ್ದಾರೆ ದರ್ಶನ್ ಪರ ವಕೀಲರು. ಇದು ಹೊಸ ವಿವಾದವನ್ನಂತೂ ಸೃಷ್ಟಿಸಿದೆ.
1. ಮನೆಯ ಊಟ ಬೇಕು
2. ಮನೆಯಿಂದ ಬಟ್ಟೆ, ಚಮಚ ಬೇಕು
3. ಮನೆಯಿಂದ ಹಾಸಿಗೆ ಬೇಕು
4. ಮನೆಯಿಂದ ಪುಸ್ತಕ ಬೇಕು
ಈ ನಾಲ್ಕು ಬೇಡಿಕೆಗಳನ್ನು ಕೋರ್ಟಿನ ಮುಂದಿಟ್ಟಿದ್ದಾರೆ ದರ್ಶನ್ ಪರ ವಕೀಲರು. ವಕೀಲರ ಪ್ರಕಾರ ದರ್ಶನ್ ಅವರು ಜೈಲೂಟಕ್ಕೆ ಬೇಸತ್ತು ಹೋಗಿದ್ದಾರೆ. ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ತಿಂದಾಗ ಅತಿಸಾರ/ಭೇದಿ ಆಗುತ್ತಿದೆ ದಿನೇ ದಿನೇ ಅತಿಸಾರ, ಭೇದಿಯಿಂದ ದರ್ಶನ್ ತೂಕವೂ ಕಡಿಮೆಯಾಗುತ್ತಿದೆ. ಜೈಲಿನ ಅಧಿಕಾರಿಗಳು ಮನೆ ಊಟಕ್ಕೆ ನಿರಾಕರಣೆ ಮಾಡುತ್ತಿರೋದು ಕಾನೂನುಬಾಹಿರ ಹಾಗೂ ಅಮಾನವೀಯ. ಹೀಗೆ ಮುಂದುವರಿದ್ರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್ರ ಅನಾರೋಗ್ಯಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ.
ದರ್ಶನ್ ಪರ ವಕೀಲರು ಪ್ರತಿಯೊಂದಕ್ಕೂ ಬೇಡುವ ಪರಿಸ್ಥಿತಿ ಇದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ದರ್ಶನ್ ಮನವಿಗೆ ಜೈಲಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಮನೆ ಊಟಕ್ಕೆ ಅನುಮತಿ ನೀಡುವ ಕೋರಿಕೆ ಮನ್ನಿಸಿಲ್ಲ. ಕೋರ್ಟ್ ಆದೇಶವಿಲ್ಲದೆ ಇದಕ್ಕೆ ಅನುಮತಿ ನೀಡಲು ಆಗಲ್ಲ. ಬೇರೆ ಕೈದಿಗಳು ಜೈಲಿನ ಊಟ ಸೇವಿಸಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಜೈಲಿನ ಮೂಲಗಳ ಪ್ರಕಾರ ದರ್ಶನ್ ಆರಾಮಾಗಿಯೇ ಇದ್ದಾರೆ. ತಮ್ಮ ಸಹಚರರ ಜೊತೆ ನಗು ನಗುತ್ತಾ ಓಡಾಡಿಕೊಂಡಿದ್ದಾರೆ. ಇದೂ ಒಂದು ಅನುಭವ, ವೆಕೇಷನ್ʻಗೆ ಬಂದಿದ್ದೇನೆ ಎಂಬ ಫೀಲಿಂಗ್ʻನಲ್ಲಿದ್ದಾರೆ.
ವಿಚಿತ್ರವೇನು ಗೊತ್ತೇ.. ದರ್ಶನ್ʻಗೆ ಇದೇ ರೀತಿಯ ಸೌಲಭ್ಯ ನೀಡಿದರೆ, ಆಗ ಉಳಿದ ಖೈದಿಗಳೂ ಕೂಡಾ ಇದೇ ರೀತಿಯ ಡಿಮ್ಯಾಂಡ್ ಇಡಬಹುದು. ಆಗ ಅವುಗಳನ್ನೂ ಪುರಸ್ಕರಿಸಬೇಕಾದ ಹೊಣೆ ಕೋರ್ಟ್ ಹೆಗಲೇರಲಿದೆ. ಇದಕ್ಕಿಂತ ಸುಮ್ಮನಿರೋದೇ ವಾಸಿ ಎಂಬ ತೀರ್ಮಾನಕ್ಕೆ ಬಂದರೂ ಆಶ್ಚರ್ಯವಿಲ್ಲ.



