ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಹೀಗೆ ಭವಿಷ್ಯ ನುಡಿದಿದ್ದ ಸ್ವಾಮೀಜಿಗಳಲ್ಲಿ ಒಬ್ಬರು ಈ ಕಾಲಜ್ಞಾನಿ ಯಶ್ವಂತ ಗುರೂಜಿ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೋಣವಿನಕೆರೆ ರಂಗಾಪುರ ಮೂಲದ ಕಾಲಜ್ಞಾನಿ ಯಶ್ವಂತ ಗುರೂಜಿ ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತ ಬರುತ್ತದೆ ಎಂದು ಭವಿಷ್ಯ ನುಡಿದ್ದರು. ಅದರಂತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಎಷ್ಟರ ಮಟ್ಟಿಗೆ ಎಂದರೆ ಈ ಸ್ವಾಮೀಜಿ ಹೇಳಿದ್ದ ಸಂಖ್ಯೆಗಳ ಲೆಕ್ಕವೂ ಖಚಿತವಾಗಿತ್ತು. ಸಿದ್ದರಾಮಯ್ಯ ಸಿಎಂ ಆಗುವುದು ಖಚಿತ ಎಂದೂ ಹೇಳಿದ್ದರು. ಅದೂ ಚುನಾವಣೆಗೆ ಮೊದಲೇ..
ಅದಾದ ಮೇಲೆ ಇದೇ ಕಾಲಜ್ಞಾನ ಯಶ್ವಂತ ಗುರೂಜಿ ಮುಂದಿನ ಬಾರಿ ಮಹಿಳೆಯೊಬ್ಬರಿಗೆ ಪ್ರಧಾನಿಯಾಗುವ ಯೋಗ ಇದೆ ಎಂದೂ ಭವಿಷ್ಯ ನುಡಿದಿದ್ದಾರೆ. ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ, ಒಂದು ಸ್ತ್ರೀ ದೇಶವನ್ನ ಆಳ್ತಾರೆ. ಹಾಗಂತ ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನ ಹೇಳ್ತಿದೆ ಎಂದು ಹೇಳಿದ್ಧಾರೆ. ಅದೇ ಸ್ವಾಮೀಜಿಗೆ ಈಗ ಜೈಲು ಸೇರುವ ರಾಜಕಾರಣಿಗಳ ಭವಿಷ್ಯ ಹೇಳಿದ್ದಾರೆ.
ಗ್ರಹಣದ ಮುನ್ನ ಮೂರು ತಿಂಗಳು ಹಾಗೂ ಗ್ರಹಣ ನಂತರದ ಮೂರು ತಿಂಗಳು ಪ್ರಭಾವ ಬೀರುತ್ತದೆ, ಗ್ರಹಣದಿಂದ ಕೇವಲ ಕೆಟ್ಟ ಪರಿಣಾಮ ಆಗಲ್ಲ, ಕೆಲ ರಾಜಕಾರಣಿಗಳಿಗೆ ಯೋಗ ಕೂಡ ಪ್ರಾಪ್ತಿ ಆಗುತ್ತದೆ. ಮೇಷ, ಕರ್ಕಾಟಕ(ಕಟಕ), ವೃಶ್ಚಿಕ, ಮಕರ ರಾಶಿಯ ಮಂದಿಗೆ ಶುಭ ಫಲವನ್ನು ಗ್ರಹಣ ನೀಡುತ್ತದೆ. ಆದರೆ, ವೃಷಭ ರಾಶಿಯ ಕೃತಿಕ ನಕ್ಷತ್ರದ ರಾಜಕಾರಣಿಗಳು ಜೈಲು ಸೇರ್ತಾರೆ. ವೃಷಭ ರಾಶಿಯ ಕೃತಿಕ ನಕ್ಷತ್ರದ ಮಂದಿ ಶಾಂತಿ ಕರ್ಮಗಳನ್ನ ಮಾಡಿಕೊಳ್ಳಬೇಕಿದೆ. ಇಲ್ಲವಾದ್ರೆ ಗ್ರಹಣದ ಕಂಟಕಕ್ಕೆ ಗುರಿ ಆಗ್ತಾರೆ ಎಂದು ಭವಿಷ್ಯ ಹೇಳಿದ್ದಾರೆ. ಅಂದರೆ ವೃಷಭ ರಾಶಿ ಮತ್ತು ಕೃತ್ತಿಕಾ ನಕ್ಷತ್ರದವರಿಗೆ ಜೈಲು ಸೇರುವ ಆತಂಕ ಇದೆ. ಇದು ರಾಜಕಾರಣಿಗಳಿಗೆ.
ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಜೈಲು ಸೇರುತ್ತಾರೆ ಎಂದು ಎಚ್ಚರಿಸಿದ್ದೆ. ಚಂದ್ರಬಾಬು ನಾಯ್ಡು ಅವರ ಜಾತಕ ವೃಷಭ ರಾಶಿ, ಕೃತಿಕ ನಕ್ಷತ್ರ ಆಗಿದೆ. ನಮ್ಮ ರಾಜ್ಯದಲ್ಲೂ ಸಹ ವೃಷಭ ರಾಶಿಯ ರಾಜಕಾರಣಿಗಳು ಜೈಲು ಸೇರ್ತಾರೆ. ವೃಷಭ ರಾಶಿಯ ಮಂದಿ ದೈವದ ಮೊರೆ ಅಥವಾ ಶಾಂತಿ ಕರ್ಮಗಳನ್ನ ಮಾಡೋದು ಒಳಿತು ಎಂದಿದ್ದಾರೆ ಕಾಲಜ್ಞಾನಿ ಯಶ್ವಂತ ಗುರೂಜಿ.
ಈ ಹಿಂದೆ ಕಾಲಜ್ಞಾನದ ಪ್ರಕಾರ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಅಂತಾ ಭವಿಷ್ಯ ಹೇಳಲಾಗಿತ್ತು. ಚುನಾವಣೆಗೆ 6 ತಿಂಗಳ ಮುನ್ನವೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅಂತಾ ಹೇಳಿದ್ದೆ. 135 ಸೀಟ್ ಬರುತ್ತದೆ ಎಂದು ಹೇಳಿದ್ದೆ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗ್ತಾರೆ ಅಂತನೂ ಭವಿಷ್ಯ ನುಡಿದಿದ್ದೆ. ಮೋದಿ ಬಳಿಕ ಮಹಿಳೆ ದೇಶ ಆಳ್ತಾಳೆ ಅಂತಾ ಹೇಳಿದ್ದೆ. ಅದು ಕೂಡ ನಿಜ ಆಗುವ ಲಕ್ಷಣ ಕಾಣ್ತಿದೆ. ಹೆಣ್ಮಕ್ಕಳಿಗೆ ಮೀಸಲಾತಿ ಸಿಕ್ತಿದೆ. ಒಳ್ಳೆಯದು ಆಗುವ ಲಕ್ಷಣ ಕೂಡ ಗೋಚರಿಸುತ್ತಿದೆ ಎಂದಿರುವ ಗುರೂಜಿ ಅವರ ಭವಿಷ್ಯ ವಾಣಿ ಕೇಳಿ ವೃಷಭ ರಾಶಿಯ ಕೃತ್ತಿಕಾ ನಕ್ಷತ್ರದ ರಾಜಕಾರಣಿಗಳು ಟೆನ್ಷನ್ ಆಗಿರುವುದು ಮಾತ್ರ ಸುಳ್ಳಲ್ಲ.
ಇದಕ್ಕೆಲ್ಲ ಕಾರಣ ಇದೇ ಅಕ್ಟೋಬರ್ 14ರಂದು ಮಹಾಲಯ ಅಮಾವಾಸ್ಯೆಯಂದು ಸಂಭವಿಸಲಿರುವ ಸೂರ್ಯ ಗ್ರಹಣ. ಸೂರ್ಯ ಎಂದರೆ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಧಿಪತಿ. ಸರ್ಕಾರದ ಕೆಲಸ ಮಾಡ್ತಿರುವ ಅಂದ್ರೆ ರಾಜಕಾರಣಿಗಳಿಗೆ ದೊಡ್ಡ ಕಂಟಕ ಇದೆ. ಎಲ್ಲ ಸ್ಥರದ ರಾಜಕಾರಣಿಗಳು, ಅಧಿಕಾರಿಗಳಿಗೆ ಗ್ರಹಣದ ಎಫೆಕ್ಟ್ ಆಗುತ್ತದೆ. ಗ್ರಹಣದ ಮುನ್ನ ಮೂರು ತಿಂಗಳು ಹಾಗೂ ಗ್ರಹಣ ನಂತರದ ಮೂರು ತಿಂಗಳು ಪ್ರಭಾವ ಬೀರುತ್ತದೆ. ಇಲ್ಲಿ ತನಕ ಒಂದು ತರಹ ಆದ್ರೆ, ಗ್ರಹಣದ ನಂತರ ಪ್ರಭಾವ ಹೆಚ್ಚಾಗಿ, ಕಂಟಕ ಜಾಸ್ತಿ ಆಗ್ತದೆ. ಹಾಗಾಗಿ, ರಾಜಕಾರಣಿಗಳು ದೈವದ ಮೋರೆ ಹೋಗಿ ಶಾಂತಿ ಕರ್ಮಗಳನ್ನ ಮಾಡಿಕೊಳ್ಳಲಿ ಎಂದು ಸಲಹೆ ಕೊಟ್ಟಿದ್ದಾರೆ ಕಾಲಜ್ಞಾನಿ.
ಅಷ್ಟೇ ಕೆಲವರಿಗೆ ಶುಭ ಫಲವೂ ಇದೆ.. ಗ್ರಹಣದಿಂದ ಕೇವಲ ಕೆಟ್ಟ ಪರಿಣಾಮ ಆಗಲ್ಲ, ಕೆಲ ರಾಜಕಾರಣಿಗಳಿಗೆ ಯೋಗ ಕೂಡ ಪ್ರಾಪ್ತಿ ಆಗುತ್ತದೆ. ಮೇಷ, ಕರ್ಕಾಟಕ(ಕಟಕ), ವೃಶ್ಚಿಕ, ಮಕರ ರಾಶಿಯ ಮಂದಿಗೆ ಶುಭ ಫಲವನ್ನು ಗ್ರಹಣ ನೀಡುತ್ತದೆ ಎಂದಿದ್ದಾರೆ.



