ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಸರ್ವನಾಶ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಸುಪ್ರೀಂಕೋರ್ಟಿನಲ್ಲಿ ತೀರಾ ಇತ್ತೀಚೆಗೆ ಛೀಮಾರಿ ಹಾಕಿಸಿಕೊಂಡಿರುವ ಉದಯನಿಧಿ, ಇನ್ನೂ ವಿಚಾರಣೆಗೆ ಹಾಜರಾಗಿಲ್ಲ. ಅದೇ ಪಕ್ಷದ ನಾಯಕ, ಡಿಎಂಕೆ ಲೀಡರ್ ಕೂಡಾ ಅಗಿರುವ ಎ.ರಾಜಾ ಹಿಂದೂ ಧರ್ಮ, ದೇವರನ್ನಷ್ಟೇ ಅಲ್ಲ, ಭಾರತಮಾತೆಯನ್ನೂ ಛೀ..ಥೂ.. ಎಂದಿದ್ದಾರೆ.
ಬಿಜೆಪಿಯ ಜೈಶ್ರೀರಾಮ್, ಭಾರತ್ ಮಾತೆಯನ್ನು ತಮಿಳುನಾಡು ಯಾವತ್ತೂ ಒಪ್ಪುವುದಿಲ್ಲ. ತಮಿಳುನಾಡು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂದಿರುವ ಎ.ರಾಜಾ ನಾವು ರಾಮನ ಶತ್ರಗಳು. ನನಗೆ ರಾಮಾಯಾಣ, ರಾಮನ ಮೇಲೆ ಯಾವುದೇ ನಂಬಿಕೆ ಇಲ್ಲ. ರಾಮಾಯಣದಲ್ಲಿ ರಾಮನಿಗೆ ನಾಲ್ವರು ಸಹೋದರರು ಎಂದು ಹೇಳಿದ್ದಾರೆ. ಒಬ್ಬ ಕೌರವ ಸಹೋದರ, ಒಬ್ಬ ಬೇಟೆಗಾರ ಸಹೋದರ, ಮತ್ತೊಬ್ಬ ಕೋತಿ ಸಹೋದರ,ಇನ್ನೊಬ್ಬನ 6ನೇ ಸಹೋದರ ಕೋತಿ ಎಂದು ಹೇಳುತ್ತದೆ. ಇದನ್ನು ಮಾನವ ಸಾಮರಸ್ಯ ಎಂದು ನೀವು ಕರೆದರೆ, ಈ ಜೈ ಶ್ರೀರಾಮ್ ಛೀ, ಥೂ ಈಡಿಯೆಟ್ಸ್ ಎಂದಿದ್ದಾರೆ ಎ.ರಾಜಾ.
ಇದೇ ವೇದಿಕೆಯಲ್ಲಿ ಭಾರತ ಒಂದು ದೇಶವಲ್ಲ ಎಂದಿರುವ ಎ.ರಾಜಾ ಭಾರತ ಯಾವತ್ತೂ ಒಂದು ದೇಶವಾಗಲು ಸಾಧ್ಯವಿಲ್ಲ. ಕಾರಣ ಒಂದು ದೇಶ ಎಂದರೆ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಸಂಪ್ರದಾಯ, ಒಂದು ಪದ್ದತಿ ಇರಬೇಕು. ಆದರೆ ಭಾರತ ಹಾಗಲ್ಲ. ತಮಿಳುನಾಡಿನಲ್ಲಿ ಒಂದು ಭಾಷೆ ಇದೆ, ಒಂದು ಸಂಸ್ಕೃತಿ ಇದೆ, ತಮಿಳುನಾಡು ಒಂದು ದೇಶ, ಕೇರಳ ಒಂದು ದೇಶ. ಭಾರತ ಹೇಗೆ ಒಂದು ದೇಶ ಎಂದು ಎ ರಾಜಾ ಹೇಳಿದ್ದಾರೆ. ಈ ಮೂಲಕ ತಮಿಳುನಾಡು ಪ್ರತ್ಯೇಕ ರಾಷ್ಟ್ರ ಎಂದಿದ್ದಾರೆ.
ಈ ಬಾರಿ ಇಂಡಿಯಾ ಒಕ್ಕೂಟದ ಪಕ್ಷಗಳು ಉದಯನಿಧಿ ಸ್ಟಾಲಿನ್ ಕುರಿತ ಹೇಳಿಕೆಗಳ ಬಗ್ಗೆ ಅಡ್ಡಗೋಡೆಯ ದೀಪ ಇಡುವ ಹೇಳಿಕೆ ನೀಡಿಲ್ಲ. ನೇರವಾಗಿ ರಾಜಾ ಹೇಳಿಕೆಯನ್ನು ಖಂಡಿಸಿವೆ. ಕಾಂಗ್ರೆಸ್, ಆರ್ʻಜೆಡಿ ಸೇರಿದಂತೆ ಹಲವು ಪಕ್ಷಗಳ ನಾಯಕರು ಖಂಡಿಸಿದ್ಧಾರೆ. ಇದು ಆತನ ವೈಯಕ್ತಿಕ ಅಭಿಪ್ರಾಯ ಅಷ್ಟೇ ಅನ್ನೋ ಮೂಲಕ, ಅಂತರ ಕಾಯ್ದುಕೊಂಡಿವೆ.
ಯಾರೀತ ಎ.ರಾಜಾ?
ಎ.ರಾಜಾ, ಡಿಎಂಕೆ ಪಕ್ಷದಲ್ಲಿ ಸಂಸದ. ವಯಸ್ಸು 60 ವರ್ಷ. 5ಬಾರಿ ಗೆದ್ದಿದ್ದು, ಎರಡು ಬಾರಿ ಸೋತಿದ್ಧಾರೆ. ಎನ್ʻಡಿಎ ಮತ್ತು ಯುಪಿಎ ಎರಡೂ ಅವಧಿಯಲ್ಲಿ ಕೇಂದ್ರ ಸಚಿವನಾಗಿದ್ದ ವ್ಯಕ್ತಿ. ತಮಿಳುನಾಡಿನಲ್ಲಿ ಪಕ್ಷಗಳು ಕೇಂದ್ರದಲ್ಲಿ ಯಾವ ಪಕ್ಷಕ್ಕೆ ಶಕ್ತಿ ಇದೆಯೋ.. ಅವರೊಂದಿಗೆ ಹೋಗುವುದು ಸಾಮಾನ್ಯ. ಈ ವ್ಯಕ್ತಿಯ ಸಾಧನೆಗಿಂತಲೂ ಆರೋಪಗಳೇ ಹೆಚ್ಚಾಗಿವೆ. ಕೇಂದ್ರ ಐಟಿ ಸಚಿವರಾಗಿದ್ಧಾಗ 2ಜಿ ಸ್ಪೆಕ್ಟ್ರಂ ಹಗರಣ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಡೀಲಿಂಗ್ ಆರೋಪಗಳು ಈತನ ಮೇಲಿವೆ. ಅಷ್ಟೇ ಅಲ್ಲ. ಇದೇ ಎ.ರಾಜಾ ತಮಿಳುನಾಡು ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಹಲವು ಬಾರಿ ಹೇಳಿಕೆ ಕೊಟ್ಟಿದ್ದೂ ಇದೆ.



