ಸೆಲಬ್ರಿಟಿಗಳ ಥರೇವಾರಿ ಸುದ್ದಿಗಳಿರ್ತವೆ. ಅಂತಹವುಗಳಲ್ಲಿ ಹೆಚ್ಚಿನದ್ದು ಲವ್ ಅಫೇರುಗಳದ್ದು ಹಾಗೂ ರಿಲೇಶನ್ʻಶಿಪ್ಪುಗಳದ್ದು. ಅವರನ್ನು ಲವ್ ಮಾಡ್ತಿದ್ದಾರಂತೆ.. ಇವರ ಜೊತೆ ಅಫೇರ್ ಇಟ್ಟುಕೊಂಡಿದ್ಧಾರಂತೆ.. ಅವರಿಬ್ರೂ ಒಟ್ಟಿಗೇ ಫಾರಿನ್ʻಗೆ ಹೋಗ್ತಾರಂತೆ.. ಒಟ್ಟಿಗೇ ಒಂದೇ ಹೋಟೆಲ್ʻನಲ್ಲಿ ಸ್ಟೇ ಮಾಡ್ತಾರಂತೆ.. ಅವರಿಬ್ಬರ ಮಧ್ಯೆ ಎಲ್ಲ ಆಗಿಹೋಗಿದ್ಯಂತೆ.. ಬರೀ ಇಂಥವೇ ಸುದ್ದಿಗಳು. ಇಂತಹ ಸುದ್ದಿಗಳು ಜಾಕಿ ಭಾವನಾ ಅವರನ್ನೂ ಬಿಟ್ಟಿಲ್ಲ.
ಮಲಯಾಳಂನಿಂದ ಕನ್ನಡತಿಯೇ ಆಗಿ ಹೋದ ಜಾಕಿ ಭಾವನಾ ತಮ್ಮ ಚಿತ್ರಜೀವನದಲ್ಲಿ ಕಾಡಿದ ಭಯಾನಕ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ಧಾರೆ. ಜಾಕಿ ಭಾವನಾ, ಈಗ ಅಪ್ಪಟ ಕನ್ನಡತಿ. ನಿರ್ಮಾಪಕ ನವೀನ್ ಅವರ ಪತ್ನಿ. ಆದರೆ.. ಭಾವನಾ ಅವರು ಅನುಭವಿಸಿದ ಗಾಸಿಪ್ಪುಗಳ ಭಯಾನಕತೆ ಹೇಗಿತ್ತು ಅನ್ನೋದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಮಲಯಾಳಂನ ಹೀರೋ ಅನೂಪ್ ಮೆನನ್ ಜೊತೆ ಭಾವವಾ ಪ್ರೀತಿಯಲ್ಲಿದ್ಧಾರೆ ಎಂದೆಲ್ಲ ಸುದ್ದಿಯಾಗುತ್ತಿತ್ತು. ಅನೂಪ್ ಮೆನನ್ ಜೊತೆ ಕೆಲವು ಚಿತ್ರಗಳಲ್ಲಿ ರಿಪೀಟ್ ಆಗಿ ನಟಿಸಿದ್ದೇ ಎಲ್ಲದಕ್ಕೂ ಕಾರಣವೂ ಆಗಿತ್ತು. ಮೊದಲಿಗೆ ನನ್ನ ಮತ್ತು ಅನೂಪ್ ಮೆನನ್ ಮದುವೆ ಆಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದರು. ಆ ನಂತರ ನನಗೆ ಗರ್ಭಪಾತವಾಯಿತು ಅಂದರು. ಅಮೆರಿಕಾದಲ್ಲಿ ಒಮ್ಮೆ..ಕೊಚ್ಚಿಯಲ್ಲಿ ಒಮ್ಮೆ.. ಚೆನ್ನೈ ನಲ್ಲಿ ಒಮ್ಮೆ.. ಹೀಗೆ ನಾಲ್ಕೈದು ಸಲ ನನಗೆ ಅಬಾರ್ಷನ್ ಆಗಿದೆ ಎಂದು ಪುಕಾರು ಹಬ್ಬಿಸಿದರು. ಕೊನೆ ಕೊನೆಗೆ ನನ್ನ ಸಾಯಿಸಿಯೇ ಬಿಟ್ಟರು ಎಂದು ಹೇಳಿಕೊಂಡಿದ್ದಾರೆ ಜಾಕಿ ಭಾವನಾ.
ಅಂತಹ ಸುದ್ದಿಗಳನ್ನೆಲ್ಲ ಕೇಳಿದಾಗ ಡಿಸ್ಟರ್ಬ್ ಆಗಿದ್ದೆ. ತಪ್ಪು ಮಾಡದೇ ಇದ್ದರೂ.. ಹೊರಗೆ ತಲೆ ಎತ್ತಿಕೊಂಡು ಓಡಾಡುವುದಕ್ಕೆ ಹೆದರುವಂತಾಗಿತ್ತು. ಅಂತಹ ಸ್ಥಿತಿಯನ್ನ ನಿರ್ಮಾಣ ಮಾಡಿಬಿಟ್ಟಿದ್ದರು. ಈಗ ಅಂತಹ ಸುದ್ದಿಗಳ ಬಗ್ಗೆ ಮಾತನಾಡುವುದಕ್ಕೂ ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ ಭಾವನಾ.
ಭಾವನಾ ಮೆನನ್ ಅವರ ಬಗ್ಗೆ ಇನ್ನಷ್ಟು ಅಸಹ್ಯದ ಕಥೆಗಳೂ ಇವೆ. ಭಾವನಾ ಅವರನ್ನು ನಟ ದಿಲೀಪ್ ಕಿಡ್ನಾಪ್ ಮಾಡಿಸಿ, ಲೈಂಗಿಕ ಕಿರುಕುಳ ಕೊಟ್ಟಿದ್ದ. ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡು ಹೆದರಿಸಿದ್ದ ಎಂಬ ಆರೋಪಗಳಿವೆ. ಮಲಯಾಳಂನಲ್ಲಿ ಇಂತಹ ಘಟನೆಗಳು ಕಾಮನ್ ಆಗಿ ನಡೆಯುತ್ತವೆಯಂತೆ. ಆದರೆ.. ಭಾವನಾ ಸಿಂಹಿಣಿಯಂತೆ ತಿರುಗಿ ಬಿದ್ದಿದ್ದರು. 2017ರಲ್ಲಿ ನಡೆದ ಆ ಘಟನೆಯನ್ನು ಭಾವನಾ ಇನ್ನೂ ಕೈಬಿಟ್ಟಿಲ್ಲ. ಕೋರ್ಟಿನಲ್ಲಿ ಹೋರಾಡುತ್ತಲೇ ಇದ್ಧಾರೆ.
ಭಾವನಾ ಮೆನನ್, ಕನ್ನಡಕ್ಕೆ ಬಂದಿದ್ದು ಜಾಕಿ ಚಿತ್ರದಿಂದ. ಕನ್ನಡದಲ್ಲಿಯೇ ಭಾವನಾ ಎಂಬ ಇನ್ನೊಬ್ಬ ನಾಯಕಿ ಇದ್ದ ಕಾರಣಕ್ಕೆ, ಜಾಕಿ ಭಾವನಾ ಎಂದೇ ಖ್ಯಾತರಾದರು. ಪುನೀತ್ ಜೊತೆ ಜಾಕಿ, ಯಾರೇ ಕೂಗಾಡಲಿ.. ಶಿವಣ್ಣ ಜೊತೆ ಟಗರು, ಭಜರಂಗಿ ೨, ಸುದೀಪ್ ಜೊತೆ ಬಚ್ಚನ್.. ಸೇರಿದಂತೆ ಉಪೇಂದ್ರ, ಗಣೇಶ್, ಪ್ರಜ್ವಲ್ ದೇವರಾಜ್ ಜೊತೆ ನಟಿಸಿದರು. ಗೆದ್ದರೂ ಕೂಡಾ. ಈಗ ಮತ್ತೊಮ್ಮೆ ಶಿವಣ್ಣ ಜೊತೆ ಉತ್ತರಕಾಂಡದಲ್ಲಿ ನಟಿಸುತ್ತಿದ್ಧಾರೆ.
ಕನ್ನಡದಲ್ಲಿ ಭಾವನಾ ಅತಿ ಹೆಚ್ಚು ನಟಿಸಿದ್ದು ಪುನೀತ್ ಮತ್ತು ಶಿವಣ್ಣ ಜೊತೆ. ಅವರಿಬ್ಬರ ಬಗ್ಗೆಯೂ ಆ ರೀತಿಯ ಮಾತನಾಡುವುದಕ್ಕೆ ಅವರ ಅಭಿಮಾನಿಗಳೇ ಬಿಡುವುದಿಲ್ಲ. ಅದೊಂದು ಭಯ.. ಅಭಿಮಾನಿಗಳ ಭಯ ಹಾಗೂ ಅವರಿಬ್ಬರ ವ್ಯಕ್ತಿತ್ವದ ತಾಕತ್ತು ಇಲ್ಲದೇ ಹೋಗಿದ್ದರೆ.. ಕನ್ನಡದಲ್ಲಿಯೂ ಇಂತಹ ಸುದ್ದಿಗಳು ಹಬ್ಬುತ್ತಿದ್ದವೇನೋ..



