ಆಕೆಯ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ನ್ಯಾಷನಲ್ ಶಾಕಿಂಗ್ ನ್ಯೂಸ್ ಆಗಿತ್ತು. ಗಂಡನನ್ನೂ ಬಿಟ್ಟು, ಹೆತ್ತ ಮಕ್ಕಳನ್ನೂ ಬಿಟ್ಟು ಪಾಕಿಸ್ತಾನಕ್ಕೆ ಎಸ್ಕೇಪ್ ಆಗಿದ್ದಳು ಅಂಜು (Anju) . ಧರ್ಮವನ್ನೂ ಬಿಟ್ಟು.. ಇಸ್ಲಾಂ (Islam) ಮತಕ್ಕೆ ಮತಾಂತರವಾಗಿ, ಫೇಸ್`ಬುಕ್ (Facebook) ಗೆಳೆಯ ನಸ್ರುಲ್ಲಾನನ್ನು (Nasrullah) ಮದುವೆಯಾಗಿ ಹೆಸರನ್ನೂ ಫಾತಿಮಾ ಎಂದು ಬದಲಿಸಿಕೊಂಡಿದ್ದಳು. ಆದರೆ ಈಗ ಇದ್ದಕ್ಕಿದ್ದಂತೆ ಆಕೆಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಕಾಣುತ್ತಿದೆ. ಅಂಜು ಅವರ ಹೊಸ ವಿಡಿಯೋ ವೈರಲ್ (Viral video) ಆಗುತ್ತಿದೆ.
”ನಾನು ಇಲ್ಲಿ ಖುಷಿಯಿಂದ ಇಲ್ಲ. ನನ್ನಿಂದ ತಪ್ಪಾಗಿದೆ. ಹಾಗಾಗಿ, ನಾನು ಭಾರತಕ್ಕೆ ವಾಪಸ್ ಬರುತ್ತೇನೆ,” ಎಂದು ಅಂಜು ಹೇಳಿದ್ದಾರೆ ಎಂಬ ವರದಿ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ”ಪಾಕಿಸ್ತಾನದಲ್ಲಿಎಲ್ಲವೂ ಚೆನ್ನಾಗಿದೆ ಎಂದುಕೊಂಡು, ಬೇರೆ ಯಾವುದೋ ಆಲೋಚನೆಗಳನ್ನು ಇಟ್ಟುಕೊಂಡು ಇಲ್ಲಿಗೆ ಬಂದಿದ್ದೆ. ಆದರೆ, ಇಲ್ಲಿ ಖುಷಿಯಿಂದ ಇಲ್ಲ. ನಾನು ಮಾಡಿದ ತಪ್ಪಿನ ಅರಿವಾಗಿದೆ. ಇಲ್ಲಿ ನಡೆದಿರುವುದಕ್ಕೆ ಭಾರತದಲ್ಲಿ ನನ್ನ ಕುಟುಂಬಸ್ಥರು ಅವಮಾನಿತರಾಗಿದ್ದಾರೆ. ಅವರು ನನ್ನಿಂದ ತೊಂದರೆ ಅನುಭವಿಸಿದ್ದಾರೆ. ನನ್ನ ಮಕ್ಕಳ ಮಧಿವನ್ನು ನೆನೆದರೆ ನನಗೆ ಸಂಕಟವಾಗುತ್ತಿದೆ. ಹಾಗಾಗಿ, ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ,” ಎಂಬುದಾಗಿ ಅಂಜು ಹೇಳಿರುವ ವಿಡಿಯೊ ಕೂಡ ವೈರಲ್ ಆಗಿದೆ.
ಭಾರತವನ್ನು ಹೇಗಾದರೂ ಮಾಡಿ ಅವಮಾನಿಸಬೇಕು ಎನ್ನುವ ಮನಸ್ಥಿತಿಯವರು ಪಾಕಿಸ್ತಾನದಲ್ಲಿ ಲಕ್ಷಾಂತರ ಜನರಿದ್ದಾರೆ. ರಾಜಕೀಯದಲ್ಲಿ ಪಾಕಿಸ್ತಾನೀಯರು ಭಾರತೀಯರನ್ನು ನಖಶಿಖಾಂತ ದ್ವೇಷ ಮಾಡುತ್ತಾರೆ. ಹೀಗಾಗಿಯೇ ಅಂಜು ಅಲಿಯಾಸ್ ಫಾತಿಮಾ, ಪಾಕಿಸ್ತಾನದ ನಸ್ರುಲ್ಲಾನನ್ನು ಮದುವೆಯಾದಾಗ ಆಕೆಗೆ ಸೈಟು, ದುಡ್ಡು ಎಲ್ಲವನ್ನೂ ಕೊಟ್ಟು ವಿಷ್ ಮಾಡಿದ್ದರು. ಯಾವುದೇ ಪರಿಶೀಲನೆ ಇಲ್ಲದೆ ವೀಸಾ ಅವಧಿ ಹೆಚ್ಚು ಮಾಡಿದ್ದರು. ಪ್ರೀತಿಯ ನಶೆಯಲ್ಲಿದ್ದಾಗ ಆರಂಭದಲ್ಲಿ ಎಲ್ಲವೂ ಚೆಂದ ಚೆಂದವಾಗಿಯೇ ಇರುತ್ತೆ. ಒಂದೆರಡು ದಿನ ಮಜಾ ಕೊಡುತ್ತೆ. ಪ್ರೀತಿ-ಪ್ರೇಮ-ಪ್ರಣಯದ ಕಿಕ್ ಇಳಿದ ಮೇಲೆ ವಾಸ್ತವ ಅರಿವಾಗುತ್ತೆ. ಈಗ ಆಗಿರುವುದೂ ಇದೇ..
15 ವರ್ಷದ ಮಗ, 6 ವರ್ಷದ ಮಗಳು ಇದ್ದ ಅಂಜುಗೆ ಈಗ ಭಾರತವೇ ಬೇಕು ಎನ್ನಿಸುತ್ತಿದೆ. ಭಾರತಕ್ಕೆ ಮರಳಿದ ನಂತರ ಎಲ್ಲಾ ಪ್ರಶ್ನೆಗಳನ್ನು ಎದುರಿಸುತ್ತನೆ. ನಾನು ಇಲ್ಲಿಗೆ ಬಂದಿದ್ದೇಕೆ. ನಾನೇನೋ ಅಂದುಕೊಂಡು ಇಲ್ಲಿಗೆ ಬಂದಿದ್ದೆ. ಭಾರತದಲ್ಲಿ ಏನು ಬೇಕಾದರೂ ಎದುರಿಸಲು ಸಿದ್ಧ. ಅಲ್ಲಿನ ಜನರ ಪ್ರಶ್ನೆಗಳನ್ನು ನಾನು ಎದುರಿಸಲು ಸಿದ್ಧಳಾಗಿದ್ದೇನೆ. ನಾನು ನನ್ನ ಸ್ವಂತ ಇಚ್ಛೆಯಿಂದ ಹೋಗಿದ್ದೇನೆ ಎಂದು ಜನರಿಗೆ ಹೇಳುತ್ತೇನೆ. ನನ್ನ ಮೇಲೆ ಯಾವುದೇ ಒತ್ತಾಯ ಇರಲಿಲ್ಲ ಎಂದು ಅಂಜು ಹೇಳಿದ್ದಾರೆ.



