ಎರಡೂವರೆ ವರ್ಷ ಅಧಿಕಾರದಲ್ಲಿದ್ದು, ಆಮೇಲೆ ಹೊಸಬರಿಗೆ ಬಿಟ್ಟು ಕೊಡೋಣ. ಪಕ್ಷ, ಸಂಘಟನೆ ಬೆಳೆಸಬೇಕು ಎಂದರೆ ಅದು ಅನಿವಾರ್ಯ. ಎಷ್ಟು ವರ್ಷ ನಾವೇ ಅಧಿಕಾರದಲ್ಲಿ ಇರೋದು. ಹೊಸಬರಿಗೂ ಚಾನ್ಸ್ ಸಿಗಲಿ..
ಸಚಿವ ಮುನಿಯಪ್ಪ (KH Muniyappa) ಅವರ ಈ ಹೇಳಿಕೆ ಕಾಂಗ್ರೆಸ್`ನಲ್ಲಿ ಕೋಲಾಹಲವನ್ನೇ ಎಬ್ಬಿಸಿಬಿಟ್ಟಿದೆ. ಏಕೆಂದರೆ ಮುನಿಯಪ್ಪ (KH Muniyappa) ಹೇಳಿದ್ದು ಅಧಿಕಾರ ತ್ಯಾಗದ ಮಾತನ್ನು. ಹೀಗಾಗಿಯೇ ಮುನಿಯಪ್ಪ ಈಗ ಎಲ್ಲರಿಗೂ ಅಪಥ್ಯ. ಹಿರಿಯ ಸಚಿವರು ಎರಡೂವರೆ ವರ್ಷದ ಬಳಿಕ ಹೊಸಬರಿಗೆ ಸಚಿವ ಸ್ಥಾನ ಬಿಟ್ಟುಕೊಡಬೇಕು’ ಎಂಬ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ (Dr.G Prameshwar) ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) , ತಿಮ್ಮಾಪುರ(Thimmapura), ಸಂತೋಷ್ ಲಾಡ್(Santhosh lad).. ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂಬುದು ಮುನಿಯಪ್ಪ ಅವರ ವೈಯಕ್ತಿಕ ಅಭಿಪ್ರಾಯ. ಅವರ ಹೇಳಿಕೆಗೆ ನನ್ನ ಸಹಮತವಿಲ್ಲ. ಅವರು ಹೇಳಿದ್ದರೆ ಅವರು ಬಿಟ್ಟುಕೊಡಲಿ. ನಾನ್ಯಾಕೆ ಎರಡೂವರೆ ವರ್ಷಕ್ಕೆ ಬಿಟ್ಟುಕೊಡಬೇಕು. ಈ ಮಾತು ಹೇಳಿರೋದು ಡಾ.ಜಿ.ಪರಮೇಶ್ವರ್. ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದವರು.
ಇತ್ತೀಚೆಗೆ ನಡೆದ ಕೆಪಿಸಿಸಿ (KPCC) ಸರ್ವ ಸದಸ್ಯರ ಸಭೆಯಲ್ಲಿ, ಪಕ್ಷದ ಅನುಕೂಲಕ್ಕಾಗಿ ಹಿರಿಯ ಸಚಿವರು ಎರಡೂವರೆ ವರ್ಷದ ಬಳಿಕ ಹೊಸಬರಿಗೆ ಸಚಿವ ಸ್ಥಾನ ಬಿಟ್ಟುಕೊಡಬೇಕು. ನಾನು ಎರಡೂವರೆ ವರ್ಷಕ್ಕೆ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಕೆ.ಎಚ್. ಮುನಿಯಪ್ಪ (KH Muniyappa) ಹೇಳಿದ್ದರು. ತಮ್ಮ ಮಾತಿಗೆ ತಾವು ಈಗಲೂ ಬದ್ಧ ಎಂಬ ತಮ್ಮದೇಮಾತನ್ನು ಪುನರುಚ್ಚರಿಸಿದ್ದರು.
ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂಬುದು ಮುನಿಯಪ್ಪ ಅವರ ವೈಯಕ್ತಿಕ ಅಭಿಪ್ರಾಯ. ಆ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಅವರ ಹೇಳಿಕೆಗೆ ನನ್ನ ಸಹಮತವಿಲ್ಲ. ನಾನು ಯಾಕೆ ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬಿಟ್ಟುಕೊಡಬೇಕು? ಎನ್ನುವುದು ಪರಮೇಶ್ವರ್ ಅವರ ಪ್ರಶ್ನೆ.
ಯಾರೋ ಹೇಳಿದ್ದಾರೆ ಎಂದು ನಾನು, ನಾನು ಹೇಳಿದೆ ಎಂದು ಬೇರೆಯವರು ಸಚಿವ ಸ್ಥಾನ ಬಿಟ್ಟುಕೊಡಬೇಕಾಗಿಲ್ಲ. ಮುನಿಯಪ್ಪ ಅವರು ಹೇಳಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಇಂತಹ ನಿರ್ಧಾರಗಳನ್ನು ಪಕ್ಷ ಅಥವಾ ಹೈಕಮಾಂಡ್ ಮಾಡಲಿ ಇದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾತು. ಈ ಬಗ್ಗೆ ಹೈಕಮಾಂಡ್ ಹೇಳಿದರಷ್ಟೇ ಪ್ರಸ್ತುತ. ಇಂತಹ ನಿರ್ಧಾರಗಳನ್ನು ಪಕ್ಷ ಅಥವಾ ಹೈಕಮಾಂಡ್ ಮಾಡುತ್ತದೆ’ ಎನ್ನುವ ಮೂಲಕ ಕೆ.ಎಚ್. ಮುನಿಯಪ್ಪ ಅವರ ಹೇಳಿಕೆ ಅಪ್ರಸ್ತುತ ಎಂದಿದ್ದಾರೆ ಪ್ರಿಯಾಂಕ್ ಖರ್ಗೆ.
ಸಚಿವ ಸಂತೋಷ್ ಲಾಡ್ ಅವರಾಗಲೀ, ತಿಮ್ಮಾಪುರ ಅವರಾಗಲೀ.. ಈ ಮಾತಿಗೆ ಓಕೆ ಎಂದಿಲ್ಲ. ಸಹಮತ ವ್ಯಕ್ತಪಡಿಸಿಲ್ಲ. ಅದು ಮುನಿಯಪ್ಪ ಅವರ ಅಭಿಪ್ರಾಯ. ಬೇಕಾದರೆ ಅವರು ಬಿಟ್ಟುಕೊಡಲಿ. ನಾವ್ಯಾಕೆ ಬಿಡಬೇಕು ಎನ್ನುವುದು ಎಲ್ಲ ಸಚಿವರ ಒನ್ ಲೈನ್ ಆನ್ಸರ್. ಹೌದು, ಅಧಿಕಾರ ಇರೋದು ಬಿಟ್ಟು ಕೊಡುವುದಕ್ಕೆ ಅಲ್ಲ.
ಮುನಿಯಪ್ಪ ತ್ಯಾಗದ ಹಿಂದಿನ ಲೆಕ್ಕಾಚಾರವೇ ಬೇರೆ..
ಹೌದು, ಈ ಮಾತನ್ನು ಒಳಗೊಳಗೇ ಹೇಳಿಕೊಳ್ಳುತ್ತಿರುವುದು ಹಾಲಿ ಸಚಿವರೇ. ಏಕೆಂದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮುನಿಯಪ್ಪ ಸಚಿವರಾಗಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿದ್ದರೂ, ರಾಜ್ಯದಲ್ಲಿ ಇದೇ ಮೊದಲು. ಇನ್ನು ಮುನಿಯಪ್ಪ ಅವರ ಮಗಳು ರೂಪಕಲಾ ಶಶಿಧರ್ ಕೂಡಾ ಶಾಸಕಿ. ಮುನಿಯಪ್ಪ ತ್ಯಾಗ ಮಾಡಿದರೂ, ಸಚಿವ ಸ್ಥಾನವನ್ನು ತಮ್ಮ ಮಗಳಿಗೇ ಕೊಡಬೇಕು ಎಂದು ಪಟ್ಟು ಹಿಡಿಯುತ್ತಾರೆ. ದಲಿತ ನಾಯಕರಾಗಿರುವ ಕಾರಣ ಗೆದ್ದೂ ಗೆಲ್ಲುತ್ತಾರೆ. ಮಗಳಿಗೆ ಮಂತ್ರಿ ಪಟ್ಟ ಕೊಡಿಸುವುದು ತ್ಯಾಗವೇ.. ತ್ಯಾಗದ ಹೆಸರಲ್ಲಿ ಬಿಡುತ್ತಾರೆ. ಆದರೆ ಆ ಮಂತ್ರಿ ಸ್ಥಾನವನ್ನು ತಮ್ಮಲ್ಲೇ.. ತಮ್ಮ ಕುಟುಂಬದಲ್ಲೇ ಇಟ್ಟುಕೊಳ್ಳುತ್ತಾರೆ. ಇದ್ಯಾವ ತ್ಯಾಗ ಎನ್ನುವುದು ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ತಿಮ್ಮಾಪುರ, ಸಂತೋಷ್ ಲಾಡ್ ಮೊದಲಾದವರ ಪ್ರಶ್ನೆ.



