Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಪ್ರತಿಮೆ ನೋಡುವುದಕ್ಕೆ ಕಷ್ವಾಗುತ್ತೆ : ವಜ್ರಮುನಿ ಕಂಚಿನ ಪ್ರತಿಮೆ ಅನಾವರಣ ಮಾಡಿದ ಶಿವಣ್ಣ ಹೇಳಿದ ಮಾತು ಇದು..!

SpeciallU by SpeciallU
November 27, 2023
in Cinema, News
Reading Time: 1 min read
0 0
0
ಪ್ರತಿಮೆ ನೋಡುವುದಕ್ಕೆ ಕಷ್ವಾಗುತ್ತೆ : ವಜ್ರಮುನಿ ಕಂಚಿನ ಪ್ರತಿಮೆ ಅನಾವರಣ ಮಾಡಿದ ಶಿವಣ್ಣ ಹೇಳಿದ ಮಾತು ಇದು..!

ಶಿವಣ್ಣ ಪುನೀತ್‌ ಸಮಾಧಿಗಾಗಲೀ, ತಂದೆ ತಾಯಿಯರ ಪುಣ್ಯಭೂಮಿಗಾಗಲಿ ಹೋಗುವುದು ಕಡಿಮೆ. ಪುನೀತ್‌ ಕುರಿತ ಕಾರ್ಯಕ್ರಮಗಳಲ್ಲಿಯೂ ಶಿವಣ್ಣ ಭಾಗವಹಿಸುವುದು ಅಪರೂಪ. ಪದೇ ಪದೇ ನೆನಪಾಗುತ್ತೆ. ಪ್ರತಿ ಬಾರಿಯೂ ನೋವು ನುಂಗಿಕೊಂಡು ಇರುವುದಕ್ಕೆ ಆಗುವುದಿಲ್ಲ. ಹಾಗಂತ ಪ್ರತಿ ಬಾರಿ ಜನರ ಎದುರು ಕಣ್ಣೀರು ಹಾಕುವುದು ಸರಿ ಇರುವುದಿಲ್ಲ ಎನ್ನುವ ಶಿವಣ್ಣ ಪುನೀತ್‌ ಪ್ರತಿಮೆ ಅನಾವರಣ ಕಾರ್ಯಕ್ರಮಗಳಿಗೆ ತಪ್ಪಿಸಿಕೊಂಡಿದ್ದರು. ಆದರೆ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣ ಮಾಡುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಆಗಲಿಲ್ಲ. ಏಕೆಂದರೆ ವಜ್ರಮುನಿ ಮತ್ತು ರಾಜ್ ಕುಟುಂಬದ ಮಧ್ಯೆ ಇರುವ ಬಾಂಧವ್ಯ ಅಂತಹದ್ದು.

ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ಖಳನಾಯಕ ಎಂದರೆ ಥಟ್ಟನೆ ಕಣ್ಣ ಮುಂದೆ ಬರೋದು ವಜ್ರಮುನಿ ಅವರ ಹೆಸರು. ಕಂಚಿನ ಕಂಠ, ಕೆಂಡದಂತಾ ಕಣ್ಣು, ಗಹಗಹಿಸಿ ನಗುವ ಆ ಆರ್ಭಟ.. ಖಳನಟನಿಗೆ ಹೇಳಿ ಮಾಡಿಸಿದಂತಿದ್ದ ಕಲಾವಿದ. ಪೋಷಕ ನಟನಾಗಿಯೂ ಅದ್ಭುತವಾಗಿ ನಟಿಸಿರುವ ವಜ್ರಮುನಿ, 2006ರಲ್ಲಿ ನಿಧನರಾದರು. ಆಗ ಅವರಿಗೆ 61 ವರ್ಷವಷ್ಟೇ. ಡಾ.ರಾಜ್‌ ಚಿತ್ರಗಳಲ್ಲಿ ವಜ್ರಮುನಿ ಖಾಯಂ ಖಳ ನಟನಾಗಿದ್ದವರು. ಡಾ.ರಾಜ್‌ ಚಿತ್ರಗಳಲ್ಲಿ ವಜ್ರಮುನಿ, ತೂಗುದೀಪ ಶ್ರೀನಿವಾಸ್‌ ಖಳರಾಗಿ, ಬಾಲಕೃಷ್ಣ, ನರಸಿಂಹ ರಾಜು ಹಾಸ್ಯ ಅಥವಾ ಪೋಷಕ ಪಾತ್ರಗಳಲ್ಲಿ, ಅಶ್ವತ್ಥ್‌, ಪಂಡರೀಭಾಯಿ ಮೊದಲಾದವರು ಪೋಷಕ ಪಾತ್ರಗಳಲ್ಲಿ ಬಹುತೇಕ ಇದ್ದೇ ಇರುತ್ತಿದ್ದರು. ವಜ್ರಮುನಿ, ಕೇವಲ ನಟರಾಗಿ ಅಷ್ಟೇ ಅಲ್ಲ, ರಾಜ್‌, ಪಾರ್ವತಮ್ಮನವರ ಬದುಕಿನಲ್ಲಿಯೂ ಮರೆಯಲಾಗದ ವ್ಯಕ್ತಿಯೂ ಹೌದು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಇದೀಗ ಬೆಂಗಳೂರಿನಲ್ಲಿ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣಗೊಂಡಿದೆ.

ಖಳನಟರೊಬ್ಬರ ಕಂಚಿನ ಪ್ರತಿಮೆ ಅನಾವರಣಗೊಂಡಿದ್ದು ಇದೇ ಮೊದಲು. ಭಾರತೀಯ ಚಿತ್ರರಂಗದಲ್ಲಿ ಹಲವು ಖಳನಟರಿದ್ದರೂ, ಖಳನಟನೊಬ್ಬನ ಪ್ರತಿಮೆ ಅನಾವರಣವಾಗಿಲ್ಲ. ಮೃತಪಟ್ಟ 18 ವರ್ಷಗಳ ನಂತರ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣವಾಗಿದೆ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಸರ್ಕಲ್‌ʻನಲ್ಲಿ ವಜ್ರಮುನಿ ಅವರ ಕಂಚಿನ ಪ್ರತಿಮೆ ಅನಾವರಣಗೊಂಡಿದ್ದು, ನಟ ಶಿವ ರಾಜ್‌ʻಕುಮಾರ್‌ ಪ್ರತಿಮೆ ಅನಾರವಣ ಮಾಡಿದ್ದಾರೆ. ಶಾಸಕ ಪ್ರಿಯಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿದೆ.

ಅಗಲಿದ ನಟರನ್ನು ಪುತ್ಥಳಿಯ ಸ್ವರೂಪದಲ್ಲಿ ನೋಡುವುದು ಮನಸ್ಸಿಗೆ ನೋವಾಗುತ್ತೆ. ಹತ್ತಿರದಿಂದ ನೋಡಿರುತ್ತೇವೆ. ಒಟ್ಟಿಗೇ ಒಡನಾಡಿರುತ್ತೇವೆ. ಅವರನ್ನು ಕಲ್ಲಿನಲ್ಲಿ ನೋಡಲು ಕಷ್ಟ ಎಂದ ಶಿವಣ್ಣ ನಮ್ಮ ತಂದೆಯವರದ್ದೇ ಆಗಲಿ, ವಿಷ್ಣುವರ್ಧನ್ ಆಗಲಿ, ಅಂಬರೀಶ್ ಅವರದ್ದೇ ಆಗಲಿ, ಪುನೀತ್ ಆಗಲಿ.. ವಜ್ರಮುನಿಯವರದ್ದೇ ಆಗಲಿ.. ಕಲ್ಲಿನಲ್ಲಿ ನೋಡುವುದಕ್ಕೆ ಕಷ್ಟ ಆಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನನಗೂ ವಜ್ರಮುನಿಯವರೊಂದಿಗೆ ಎರಡು ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಪುರುಷೋತ್ತಮ ಹಾಗೂ ರಣರಂಗ ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ್ದೇವೆ. ಬಹಳ ಒಳ್ಳೆಯ ವ್ಯಕ್ತಿ. ಶೂಟಿಂಗ್ ಮುಗಿಸಿಕೊಂಡು ನಮ್ಮ ಮನೆಗೆ ಬಂದು ಅಪ್ಪಾಜಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಎಲ್ಲಾ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು. ಎಷ್ಟು ಮಜವಾಗಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Tags: #ವಜ್ರಮುನಿ #ಖಳನಟ #ಕಂಚಿನಪ್ರತಿಮೆ #ಶಿವಣ್ಣ #Vajramuni #BronzeIdol #Shiva #villain
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.