ಹಮಾಸ್ ಉಗ್ರರ (hamas terrorist) ವಿರುದ್ಧ ಇಡೀ ಜಗತ್ತೇ ಒಕ್ಕೊರಲಲ್ಲಿ ಎದ್ದು ನಿಂತಿದೆ. ಅಮೆರಿಕ America ಬೆಂಬಲ ನೀಡುವುದಷ್ಟೇ ಅಲ್ಲ, 2 ಬಿಲಿಯನ್ ಡಾಲರ್ ನೆರವನ್ನೂ ಘೋಷಿಸಿದೆ. ಏಕೆಂದರೆ ಇಸ್ರೇಲ್ Israel , ಅಮೆರಿಕ-ಬ್ರಿಟನ್ US-briton ನೆರವಿನಿಂದಲೇ ಹುಟ್ಟಿದ ದೇಶ. ಬ್ರಿಟನ್ ಕೂಡಾ ಇಸ್ರೇಲ್ ಜೊತೆಗೆ ಇದೆ. ಬ್ರಿಟನ್ ಕೂಡಾ ಇಸ್ರೇಲ್ ಬೆನ್ನಿಗೆ ನಿಂತಿದೆ. ಭಾರತವೂ ಇಸ್ರೇಲ್ ಜೊತೆಯಲ್ಲಿದೆ. ಏಕೆಂದರೆ ಕಾರ್ಗಿಲ್ Kargil war ಯುದ್ಧ, ಮುಂಬೈ ಅಟ್ಯಾಕ್ ನಡೆದಾಗ ಭಾರತಕ್ಕೆ ನೆರವು ನೀಡಿದ ಋಣ ಭಾರತದ ಮೇಲಿದೆ. ಹಲವು ಕಷ್ಟದ ಪರಿಸ್ಥಿತಿಗಳಲ್ಲಿ ಇಸ್ರೇಲ್, ಭಾರತದ ಪರ ನಿಂತು ಹೋರಾಡಿದೆ. ಜರ್ಮನಿ, ಫ್ರಾನ್ಸ್, ಡೆನ್ಮಾರ್ಕ್, ಯುಎಇ UAE (ಇದು ಮುಸ್ಲಿಂ ರಾಷ್ಟ್ರ) ಸೌದಿ ಅರೇಬಿಯಾ Saudi arabia (ಇದೂ ಮುಸ್ಲಿಂ ರಾಷ್ಟ್ರ) ಮೊದಲಾದ ಹಲವು ದೇಶಗಳು ಹಾಗೂ ವಿಶ್ವಸಂಸ್ಥೆ ಇಸ್ರೇಲ್ ಪರ ನಿಂತಿವೆ.
ಆದರೆ ಕೆಲವೊಂದು ರಾಷ್ಟ್ರಗಳು ಹಮಾಸ್ ಉಗ್ರರ ಪರ ನಿಂತಿವೆ. ಅವುಗಳಲ್ಲಿ ಪಾಕಿಸ್ತಾನ, ಟರ್ಕಿ, ಕುವೈತ್, ಈಜಿಪ್ಟ್, ಲೆಬನಾನ್, ಜೋರ್ಡಾನ್ ಮೊದಲಾದುವುದು ಪ್ರಮುಖ ರಾಷ್ಟ್ರಗಳು. ಇರಾನ್ ಅಂತೂ ಶಸ್ತ್ರಾಸ್ತ್ರಗಳ ಸರಬರಾಜನ್ನೂ ಮಾಡುತ್ತಿದೆ. ಈಜಿಪ್ಟ್ ತೆರೆಮರೆಯೊಳಗೆ ಸಂಚು ಹೂಡುತ್ತಿದೆ.
ಗಾಜಾಕ್ಕೆ ಕರೆಂಟ್, ನೀರು, ಆಹಾರ ಸಪ್ಲೈ ಬಂದ್..!
ಗಾಜಾ ಪ್ರದೇಶಕ್ಕೆ Gaza strip ಇಸ್ರೇಲ್ ಸಂಪೂರ್ಣ ದಿಗ್ಭಂದನ ವಿಧಿಸಿದೆ. ಗಾಜಾ ಪ್ರದೇಶಕ್ಕೆ ನೀರು, ವಿದ್ಯುತ್, ಆಹಾರವನ್ನು ಸಂಪೂರ್ಣವಾಗಿ ಇಸ್ರೇಲ್ ಬಂದ್ ಮಾಡಿದೆ. ಇಸ್ರೇಲ್ ಈ ನಿರ್ಧಾರ ಮಾಡಿದ ಬೆನ್ನಲ್ಲಿಯೇ ಇದು ಯುದ್ಧಾಪರಾಧ ಎನ್ನುವ ಕೂಗುಗಳು ಮುಸ್ಲಿಂ ದೇಶಗಳಿಂದ ಬಂದಿವೆ. ಅದಕ್ಕೂ ಉತ್ತರ ನೀಡಿರುವ ಇಸ್ರೇಲ್, ಮನುಷ್ಯರಾದವರಿಗೆ ಮಾತ್ರವೇ ನಿಯಮಗಳು ಅನ್ವಯಿಸುತ್ತದೆ. ಹಮಾಸ್ನ ಉಗ್ರರು ಪ್ರಾಣಿಗಳು ಅವರ ವಧೆ ಮಾಡಿಯೇ ಸಿದ್ಧ ಎಂದು ಹೇಳಿದೆ.
ನೆರವು ನೀಡಿದರಿಗೂ ಬಾಂಬ್ ಬೀಳುತ್ತವೆ ಹುಷಾರ್..!
ಇಸ್ರೇಲ್ನ ದಿಗ್ಭಂದನ ನಡುವೆ, ಗಾಜಾ ಪ್ರದೇಶಕ್ಕೆ ಸರಬರಾಜುಗಳನ್ನು ಹೊತ್ತ ಟ್ರಕ್ಗಳನ್ನು ಕಳಿಸಲು ನೆರೆಯ ದೇಶ ಈಜಿಪ್ಟ್ ಸಿದ್ಧವಾಗಿತ್ತು. ಈ ವೇಳೆ ಈಜಿಪ್ಟ್ಗೆ ಇಸ್ರೇಲ್ ನೇರ ಎಚ್ಚರಿಕೆ ನೀಡಿದ್ದು, ಹಾಗೇನಾದರೂ ನಿಮ್ಮ ಸರಬರಾಜುಗಳನ್ನು ಹೊತ್ತ ಟ್ರಕ್ಗಳು ಗಾಜಾಕ್ಕೆ ಬಂದಲ್ಲಿ ಅವುಗಳಿಗೂ ಬಾಂಬ್ ಬೀಳುತ್ತದೆ ಎಂದು ಎಚ್ಚರಿಕೆ ರವಾನಿಸಿದೆ. ಇಸ್ರೇಲ್ನ ಈ ಎಚ್ಚರಿಕೆ ಕೇಳಿದ ಕೂಡಲೇ ವಿಶ್ವಕ್ಕೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮಾಡಲಿರುವ ಕಾರ್ಯಾಚರಣೆಯ ಬಗ್ಗೆ ಇನ್ನಷ್ಟು ಆತಂಕ ಉಂಟಾಗಿದೆ.
ಯುದ್ಧಕಾಲದ ತುರ್ತು ಸರ್ಕಾರ :
ಇಸ್ರೇಲ್ 1973ರ ನಂತರ ಮೊಟ್ಟಮೊದಲ ಬಾರಿಗೆ ಯುದ್ಧಕಾಲದ ತುರ್ತು ಸರ್ಕಾರವನ್ನು ರಚಿಸುವ ಹಂತದಲ್ಲಿದೆ. ಯುದ್ಧಕಾಲದ ತುರ್ತು ಸರ್ಕಾರವೆಂದರೆ, ವಿವಿಧ ರಾಜಕೀಯ ಪಕ್ಷಗಳ ಸದಸ್ಯರನ್ನು ಒಳಗೊಂಡ ಸರ್ಕಾರ. ಯುದ್ಧ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಆಯಾ ಸರ್ಕಾರಗಳು ಇದರ ನಿರ್ಧಾರ ಮಾಡುತ್ತದೆ. ಕೊನೆಯ ಬಾರಿಗೆ ಇಸ್ರೇಲ್ ಅಂತಹ ಸರ್ಕಾರವನ್ನು ಹೊಂದಿದ್ದು 1973 ರಲ್ಲಿ. ಅದು ಕೂಡ ತನ್ನ ಮಹತ್ವದ ಯುದ್ಧಕಾಲದಲ್ಲಿ. ಈ ಕ್ರಮವು ಸವಾಲಿನ ಸಮಯದಲ್ಲಿ ದೇಶಕ್ಕೆ ಸ್ಥಿರತೆ ಮತ್ತು ಏಕತೆಯನ್ನು ತರಲು ಒಂದು ಮಾರ್ಗ. ಏಕೆಂದರೆ ಇದು ರಾಷ್ಟ್ರದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ವಿವಿಧ ರಾಜಕೀಯ ನಾಯಕರನ್ನು ಒಳಗೊಂಡಿರುತ್ತದೆ.



