ವರಲಕ್ಷ್ಮಿ ಶರತ್ ಕುಮಾರ್ (Varalakshmi Sharath Kumar). ಕನ್ನಡದವರಿಗೆ ಮಾಣಿಕ್ಯದ (Manikya) ಹುಡುಗಿಯಾಗಿ ಅಷ್ಟೇ ಗೊತ್ತು. ಕಿಚ್ಚ ಸುದೀಪ್ (Kichcha Sudeep) ಜೊತೆ ಮಾಣಿಕ್ಯ (Manikya) ಚಿತ್ರದಲ್ಲಿ ಹೀರೋಯಿನ್ (heroine) ಆಗಿ ನಟಿಸಿದ್ದ ವರಲಕ್ಷ್ಮೀ ಶರತ್ ಕುಮಾರ್ (Varalakshmi Sharath Kumar) ಮತ್ತೊಮ್ಮೆ ಕಿಚ್ಚನ (Kichcha Sudeep) ಜೊತೆ ಮ್ಯಾಕ್ಸ್ ಚಿತ್ರದಲ್ಲಿ ಜೊತೆಯಾಗಿದ್ಧಾರೆ. ಮಾಣಿಕ್ಯದ ಹೀರೋಯಿನ್ ವರಲಕ್ಷ್ಮಿ, ತಮಿಳು, ತೆಲುಗು, ಮಲಯಾಳಂನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಹೀರೋಯಿನ್ ಅಷ್ಟೇ ಅಲ್ಲದೆ, ವಿಲನ್ ಪಾತ್ರಗಳು ವರಲಕ್ಷ್ಮಿಗೆ ಹೆಸರು ತಂದುಕೊಟ್ಟಿವೆ. ಏಕೆಂದರೆ ಕನ್ನಡದಲ್ಲಿ ಹೀರೋಯಿನ್ ಆದರೂ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ವರಲಕ್ಷ್ಮಿ (Varalakshmi Sharath Kumar) ಮಿಂಚಿದ್ದೇ ವಿಲನ್ ಪಾತ್ರಗಳಿಂದ. ಮಾಣಿಕ್ಯದಲ್ಲಿ ಹೀರೋಯಿನ್ ಆಗಿದ್ದ ವರಲಕ್ಷ್ಮಿ, ರನ್ನ ಚಿತ್ರದಲ್ಲಿ ಸ್ಪೆಷಲ್ ಹಾಡಿಗಾಗಿ ಹೆಜ್ಜೆ ಹಾಕಿದ್ದರು. ಅದಾದ ಮೇಲೆ ಕನ್ನಡದಲ್ಲಿ ವಿಸ್ಮಯ (ಕನ್ನಡಕ್ಕೆ ಡಬ್ ಆದ ಅರ್ಜುನ್ ಸರ್ಜಾ ಸಿನಿಮಾ) ಹಾಗೂ ರಣಂ ಚಿತ್ರದಲ್ಲಿ ನಟಿಸಿದ್ದರು. ಅದಾದ ಮೇಲೆ ಮತ್ತೀಗ ಸುದೀಪ್ ಜೊತೆಗೇ ಕನ್ನಡಕ್ಕೆ ಮತ್ತೆ ಬರುತ್ತಿದ್ದಾರೆ (Varalakshmi Sharath Kumar).
ತಮಿಳುನಾಡಿನ ಮಹಾಬಲಿಪುರಂನಲ್ಲಿ (mahabalipuram) ದೊಡ್ಡ ಸೆಟ್ ಹಾಕಿ, ಬಹುತೇಕ ಚಿತ್ರೀಕರಣವನ್ನು ಅದರಲ್ಲೇ ಮಾಡುತ್ತಿದೆ ಚಿತ್ರತಂಡ. 8 ವರ್ಷಗಳ ಬಳಿಕ ಪುನಃ ಸುದೀಪ್ (Sudeep) ಸಿನಿಮಾದಲ್ಲಿ ವರಲಕ್ಷ್ಮೀ ಶರತ್ಕುಮಾರ್ ಬಣ್ಣ ಹಚ್ಚಿರುವ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ವರಲಕ್ಷ್ಮೀ ಶರತ್ಕುಮಾರ್ ಅವರಿಗೆ ಈ ಸಿನಿಮಾದಲ್ಲಿ ಪ್ರಧಾನ ಪಾತ್ರವಿದ್ದು, ಈಗಾಗಲೇ ಅವರು ಮಹತ್ವದ ದೃಶ್ಯಗಳ ಚಿತ್ರೀಕರಣವನ್ನೂ ಕೂಡ ಮುಗಿಸಿದ್ದಾರಂತೆ.
ವರಲಕ್ಷ್ಮಿ ರವಿತೇಜ (Raviteja) ಎದುರು ಕ್ರ್ಯಾಕ್ (Krack) ಚಿತ್ರದಲ್ಲಿ, ಬಾಲಕೃಷ್ಣ (Nandamuri balakrisha) ಎದುರು ದುನಿಯಾ ವಿಜಯ್ (Dunia Vijay) ಜೋಡಿಯಾಗಿ ವೀರಸಿಂಹ ರೆಡ್ಡಿ (Veera simha reddy) ಚಿತ್ರದಲ್ಲಿ, ವಿಜಯ್ (Tahalapathi vijay) ಎದುರು ಸರ್ಕಾರ್ (Sarkar) ಚಿತ್ರದಲ್ಲಿ.. ಹೀಗೆ ಒಂದು ಕಡೆ ಖಳನಾಯಕಿಯಾಗಿ, ಮತ್ತೊಂದು ಕಡೆ ಮಹಿಳಾ ಪ್ರಧಾನ ಥ್ರಿಲ್ಲರ್ ಚಿತ್ರಗಳಲ್ಲಿ ನಟಿಸುತ್ತ ದೊಡ್ಡ ಫ್ಯಾನ್ ಬೇಸ್ ಸೃಷ್ಟಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಸುದೀಪ್ ಜೊತೆಯಾಗುತ್ತಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸಂಯುಕ್ತಾ ಹೊರನಾಡು, ಅನಿರುದ್ಧ್ ಭಟ್, ಸುಕೃತಾ ವಾಘ್ಳೆ ಮುಂತಾದವರು ನಟಿಸುತ್ತಿದ್ದಾರೆ.
ಮ್ಯಾಕ್ಸ್ (Max) ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದು, ಬಹುಭಾಷೆಯಲ್ಲಿ ತೆರೆಗೆ ಬರಲಿದೆ. ‘ಅಸುರನ್’, ‘ಥೆರಿ’, ‘ಕಬಾಲಿ’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕಲೈಪುಲಿ ಎಸ್ ಧಾನು ಅವರು ‘ಮ್ಯಾಕ್ಸ್’ ಸಿನಿಮಾಗೆ ಹಣ ಹಾಕುತ್ತಿದ್ದಾರೆ. ಶೂಟಿಂಗ್ ತಮಿಳುನಾಡಿನಲ್ಲಿ ನಡೆಯುತ್ತಿದ್ದರೂ, ಬಹುತೇಕ ತಂತ್ರಜ್ಞರು ಕನ್ನಡದವರೇ ಎಂಬುದು ವಿಶೇಷ. ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದರೆ, ಕಲಾ ನಿರ್ದೇಶನವನ್ನು ಶಿವಕುಮಾರ್ ಮಾಡುತ್ತಿದ್ದಾರೆ.



