ಒಂದು ಕಾಲದಲ್ಲಿ ಬಿಟಿವಿ ನಿರೂಪಕಿಯಾಗಿದ್ದ ದಿವ್ಯಾ ವಸಂತ ಅವ ಮೇಲೆ ಜ್ಯೋತಿಷಿ ಆನಂದ ಗುರೂಜಿ ದೂರು ಕೊಟ್ಟಿದ್ದಾರೆ. ಅರೆಸ್ಟ್ ಆಗುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಅವರು ಜಾಮೀನಿನ ಮೇಲೆ ಇರುವುದರಿಂದ ಸ್ವಲ್ಪ ಟೈಂ ತೆಗೆದುಕೊಳ್ಳಬಹುದು. ದೂರು ಕೊಟ್ಟಿರುವುದು ಆನಂದ ಗುರೂಜಿ. ಜೀ ಕನ್ನಡದಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುವ ಜ್ಯೋತಿಷಿ.
ದೂರು ದಾಖಲಾಗಿರುವುದು ದಿವ್ಯಾ ವಸಂತ ಅವರ ವಿರುದ್ಧ.
ಒಂದು ಕಾಲದಲ್ಲಿ ಬಿಟಿವಿಯಲ್ಲಿ ಆಂಕರ್ ಆಗಿದ್ದವರು ದಿವ್ಯಾ ವಸಂತ. ಆಂಕರ್ ಆಗಿದ್ದಾಗ ನಟಿ ಅಮೂಲ್ಯ ಅವರಿಗೆ ಅವಳಿ ಜವಳಿ ಮಕ್ಕಳಾಗಿದ್ದ ಸುದ್ದಿಯೋ.. ಗರ್ಭಿಣಿಯಾಗಿದ್ದ ಸುದ್ದಿಯೋ.. ಇರಬೇಕು. ಇದು ಇಡೀ ಕರ್ನಾಟಕವೇ ಖುಷಿ ಪಡುವ ಸುದ್ದಿ.. ಎಂದು ದೊಡ್ಡದಾಗಿ ಓದಿ.. ನಗೆಪಾಟಲಿಗೀಡಾಗಿದ್ದರು ದಿವ್ಯಾ ವಸಂತ್. ಈಗಲೂ ʻಇಡೀ ರಾಜ್ಯವೇ ಖುಷಿ ಪಡುವ ಸುದ್ದಿʼ ಎಂದು ಸರ್ಚ್ ಮಾಡಿದರೆ ಈಕೆಯ ಹೆಸರು ತಕ್ಷಣ ಬರುತ್ತದೆ. ಇಂತಹ ದಿವ್ಯಾ ವಸಂತ, ಕೃಷ್ಣಮೂರ್ತಿ ಎಂಬ ವ್ಯಕ್ತಿಯ ಜೊತೆ ಸೇರಿ ಆನಂದ ಗುರೂಜಿ ಅವರನ್ನು ಬ್ಲಾಕ್ ಮೇಲ್ ಮಾಡ್ತಿದ್ದಾರಂತೆ.
ಆನಂದ ಗುರೂಜಿ ಕಥೆ ಏನು..?
ತಮಗೊಂದು ಭಕ್ತರ ಪಡೆಯನ್ನೇ ಕಟ್ಟಿಕೊಂಡಿರುವ ಆನಂದ ಗುರೂಜಿ, ಡಾ.ಮಹರ್ಷಿ ಎಂದೂ ಕರೆಸಿಕೊಳ್ಳುತ್ತಾರೆ. ಆನಂದ ಗುರೂಜಿ ಈಗಾಗಲೇ ತಮ್ಮ ಖಾಸಗಿ ವಿಡಿಯೋ, ಸುದ್ದಿ ಪ್ರಸಾರ ಮಾಡದಂತೆ ಎರಡು ಬಾರಿ ನ್ಯಾಯಾಲಯದಿಂದ ತಡೆಜಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ನಂತರ ಕೆಲ ಯುಟ್ಯೂಬ್ ಚಾನೆಲ್‌ಗಳಲ್ಲಿ ಸುದ್ದಿ ಪ್ರಸಾರ ಮಾಡಲಾಗಿದೆ. ಜತೆಗೆ 3ನೇ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ವಿಡಿಯೋ ಇದೆಯೋ.. ಇಲ್ಲವೋ.. ಆನಂದ ಗುರೂಜಿ ಅವರಿಗೇ ಗೊತ್ತು. ಅಥವಾ.. ಗ್ರಾಫಿಕ್ಸ್ ಸೃಷ್ಟಿಯಾಗಿದ್ದರೂ ಆಶ್ಚರ್ಯವಿಲ್ಲ.
ಪ್ರಕರಣ ಏನು ಎಂದರೆ.. ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ಆನಂದ ಗುರೂಜಿಗೆ ನಿಮ್ಮ ಸೆಕ್ಸ್ ವಿಡಿಯೋ ಇದೆ, ದುಡ್ಡು ಕೊಡು.. ಇಲ್ಲಾಂದ್ರೆ ಎಲ್ಲವನ್ನೂ ಬಹಿರಂಗ ಮಾಡ್ತೀವಿ ಅಂತಾ ಬೆದರಿಕೆ ಹಾಕ್ತಿದ್ದರಂತೆ.
‘2024ರ ಆಗಸ್ಟ್ ತಿಂಗಳಿಂದ ನನ್ನ ಖಾಸಗಿ ಅಶ್ಲೀಲ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಾಗಿ ಕೃಷ್ಣಮೂರ್ತಿ ಹಾಗೂ ದಿವ್ಯಾವಸಂತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಹೀಗಾಗಿ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೆ. ಇದಾದ ಬಳಿಕವೂ ಇಬ್ಬರೂ ಬೆದರಿಕೆ ಮುಂದುವರಿಸಿದ್ದರು’ ಎಂದಿರುವ ಆನಂದ ಗುರೂಜಿ ಚಿಕ್ಕಜಾಲ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ದಿವ್ಯಾ ವಸಂತ ಕಥೆ ಏನು..?
ಇನ್ನು ದಿವ್ಯಾ ವಸಂತ ಅವರದ್ದು ಬೇರೆಯದೇ ಕಥೆ. ಕಳೆದ ವರ್ಷವಷ್ಟೇ ಇನ್ನೊಂದು ಬ್ಲಾಕ್ ಮೇಲ್ ಕೇಸಿನಲ್ಲಿ ಅರೆಸ್ಟ್ ಆಗಿದ್ದವರು ದಿವ್ಯಾ ವಸಂತ. ಆನಂದ ಗುರೂಜಿ ಅವರ ದೂರಿನ ಮೇಲೆ ಪೊಲೀಸರು ದಿವ್ಯಾ ವಸಂತಗೆ ನೋಟಿಸ್ ನೀಡಿದ್ದಾರೆ. ಎಫ್‌ಐಆರ್ ಆಗಿದ್ದು, ಬಂಧಿಸುವ ಸಾಧ್ಯತೆ ಹೆಚ್ಚಿದೆ. ಪೊಲೀಸರು ಕೃಷ್ಣ ಮೂರ್ತಿ ಎಂಬುವವರನ್ನು ಆರೋಪಿ 1 ಹಾಗೂ ದಿವ್ಯಾ ವಸಂತ ಅವರನ್ನು ಆರೋಪಿ 2 ಮಾಡಿದ್ದಾರೆ.