ದೇವರ ಪೂಜೆ ಮಾಡ್ತೇವೆ. ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಎಲ್ಲರಲ್ಲಿಯೂ ಇರುತ್ತದೆ. ಆದರೆ.. ಪೂಜೆಗಳನ್ನು ಮಾಡುವಾಗ ನಡೆಯುವ ಕೆಲವು ಘಟನೆಗಳು ಪೂಜೆ ಸರಿಯಾಗಿ ಆಗಿದೆಯೋ.. ಇಲ್ಲವೋ.. ಎಂಬ ಬಗ್ಗೆ ಸುಳಿವು ಕೊಡುತ್ತವೆ. ಇವುಗಳ ಬಗ್ಗೆ ಎಚ್ಚರಿಕೆಯಿಂದ ಇದ್ದರೆ.. ಶುಭ ಲಾಭದ ಪೂಜೆ ಮಾಡಬಹುದು. ಇಷ್ಟಕ್ಕೂ ಪೂಜೆ ಮಾಡುವಾಗ ಸಿಗುವ ಆ ಸುಳಿವುಗಳು ಯಾವುವು ಎಂದು ನೋಡೋದಾದ್ರೆ..
ಪದೇ ಪದೇ ಆರುವ ದೀಪ :
ಪೂಜೆಯ ಸಮಯದಲ್ಲಿ ದೀಪ ಪದೇ ಪದೇ ಆರಿ ಹೋದರೆ, ಅದು ಪೂಜೆಯಲ್ಲಿ ಏನೋ ಕೊರತೆಯಿದೆ ಎಂದು ಸೂಚಿಸುತ್ತದೆ. ಆದರೆ ಇದು ಬಯಲು ಪ್ರದೇಶಗಳಲ್ಲಿ ಮಾಡುವ ಪೂಜೆಗಳಿಗೆ ಅನ್ವಯವಾಗುವುದಿಲ್ಲ. ಮನೆಯ ಒಳಗೆ ಈ ರೀತಿ ಆಗುತ್ತಿದ್ದರೆ ಪೂಜೆ ಪ್ರಸನ್ನವಾಗಿಲ್ಲ ಎಂದರ್ಥ. ಆರದಂತೆ ನೋಡಿಕೊಳ್ಳುವುದು ಉತ್ತಮ.
ಹೂವುಗಳು ಉದುರಿ ಹೋಗುವುದು :
ಪೂಜೆಯ ಸಮಯದಲ್ಲಿ ದೇವರಿಗೆ ಇಟ್ಟಂತಹ ತಾಜಾ ಹೂವುಗಳು ಹಠಾತ್ ಆಗಿ ಬೀಳುವುದು ಪೂಜೆ ಅಪೂರ್ಣವಾಗಿದೆ ಎಂಬುದರ ಸಂಕೇತ .
ಏಕಾಗ್ರತೆಯ ಕೊರತೆ :
ಪೂಜೆಯ ಸಮಯದಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡದೇ ಇರುವುದು, ಚಂಚಲವಾಗುವುದು, ಮನಸ್ಸು ಅಲೆದಾಡುವುದು ಅಥವಾ ಮನಸ್ಸಿನ ಚಡಪಡಿಕೆಯು ಆರಾಧನೆಯಲ್ಲಿ ಧ್ಯಾನದ ಕೊರತೆಯ ಸಂಕೇತವಾಗಿರಬಹುದು. ಪೂಜೆ ಮಾಡುವಾಗಲೂ ಕೆಟ್ಟ ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಬರುತ್ತಿದ್ದರೆ ಪೂಜೆಯಿಂದ ಎದ್ದುಬಿಡಿ. ಅದಕ್ಕೆ ಅರ್ಥವೇ ಇಲ್ಲ.
ಪೂಜೆಯ ನೀರು ಚೆಲ್ಲಬಾರದು :
ಪೂಜೆಗೆ ಬಳಸುವ ನೀರಿನ ಪಾತ್ರೆಯಿಂದ ನೀರು ಪದೇ ಪದೇ ಚೆಲ್ಲಿದರೆ ಅಥವಾ ಆ ಪಾತ್ರೆ ಕೆಳಕ್ಕೆ ಬಿದ್ದರೆ, ಪೂಜೆ ಪ್ರಸನ್ನವಾಗಿಲ್ಲ ಎಂದೇ ಅರ್ಥ.
ಪ್ರಸಾದಕ್ಕೆ ಭಕ್ತರು ಇಲ್ಲದಿದ್ದರೆ.. :
ಪೂಜೆಯ ನಂತರ ಪ್ರಸಾದವನ್ನು ವಿತರಿಸುವಾಗ ಜನರು ಅದನ್ನು ಸ್ವೀಕರಿಸದಿದ್ದರೆ ಅಥವಾ ಪ್ರಸಾದದಲ್ಲಿ ಯಾವುದೇ ಕೊರತೆಯಿದ್ದರೆ, ಅದು ಪೂಜೆಯಲ್ಲಿನ ಯಾವುದೋ ಕೊರತೆಯ ಸಂಕೇತವಾಗಿರಬಹುದು. ಪ್ರಸಾದದ ಬಗ್ಗೆ ಜಾಗ್ರತೆ ಇರಲಿ.
ಪವಿತ್ರ ದಾರ ತುಂಡಾದರೆ :
ಪೂಜೆಯ ಸಮಯದಲ್ಲಿ ಬಳಸುವ ರಕ್ಷಾ ಸೂತ್ರ ಅಥವಾ ಜಪಮಾಲೆಯಂತಹ ಪವಿತ್ರ ದಾರ ಇದ್ದಕ್ಕಿದ್ದಂತೆ ತುಂಡಾದರೆ, ಅದು ಸಹ ಪೂಜೆ ದೇವರಿಗೆ ಸ್ವೀಕಾರವಾಗಿಲ್ಲ ಎಂದರ್ಥ.
ಗಂಟೆ, ಶಂಖದ ಶಬ್ಧ ಕಡಿಮೆಯಾದರೆ.. :
ಪೂಜೆಯ ಸಮಯದಲ್ಲಿ ಗಂಟೆ ಅಥವಾ ಶಂಖದ ಶಬ್ದದಲ್ಲಿ ಇಳಿಕೆಯಾದರೆ, ಅಥವಾ ಆ ಶಬ್ದವು ಸ್ಪಷ್ಟವಾಗಿಲ್ಲದಿದ್ದರೆ, ಅದು ಅಪೂರ್ಣ ಪೂಜೆಯ ಸಂಕೇತವಾಗಿರಬಹುದು.
ಪೂಜೆಯ ನಂತರ ಕೆಟ್ಟ ಕನಸು ಬಿದ್ದರೆ.. :
ಪೂಜೆಯ ನಂತರ ರಾತ್ರಿ ಮಲಗಿದಾಗ ಮನಸ್ಸಿನಲ್ಲಿ ಅಶುಭ ಕನಸುಗಳು ಅಥವಾ ಒಂದು ರೀತಿಯ ಅಡಚಣೆ ಇದ್ರೆ, ಅದು ಸಹ ಅಪೂರ್ಣ ಪೂಜೆಯ ಸಂಕೇತವೂ ಆಗಿರಬಹುದು. ಪುಣ್ಯ ಕ್ಷೇತ್ರಗಳಿಗೆ ಹೋಗಿ ಬಂದ ನಂತರವೂ ಈ ರೀತಿ ಆಗಬಾರದು.
ಪೂಜೆ ಮಾಡುವವರು ಶುಭ್ರ ಮನಸ್ಸಿನಿಂದ ಶಾಂತ ಚಿತ್ತದಿಂದ ಪೂಜೆ ಮಾಡುವುದು ಒಳ್ಳೆಯದು. ಪೂಜೆ ಮಾಡುವಾಗ ಪದೇ ಪದೇ ಮಾತನಾಡುತ್ತಿದ್ದರೆ ಅಥವಾ ಮಾತನಾಡುವ ರೀತಿಯ ಪ್ರಸಂಗ ಎದುರಾಗುತ್ತಿದ್ದರೆ.. ಪೂಜೆಯನ್ನು ಅಲ್ಲಿಯೇ ಬಿಟ್ಟು ಬಿಡುವುದು ಒಳ್ಳೆಯದು. ಸ್ವಲ್ಪ ಸಮಯ ಬಿಟ್ಟು ಪೂಜೆ ಮಾಡುವುದೇ ಉತ್ತಮ.



